ETV Bharat / state

ಅನಾರೋಗ್ಯದಿಂದ ರಾಜ್ಯಸಭೆ ಕಲಾಪಕ್ಕೆ ಹಾಜರಾಗಿಲ್ಲ: ಹೆಚ್.ಡಿ.ದೇವೇಗೌಡರು

ಅನಾರೋಗ್ಯದ ಹಿನ್ನೆಲೆಯಲ್ಲಿ ಇಂದು ರಾಜ್ಯಸಭೆ ಕಲಾಪಕ್ಕೆ ಹಾಜರಾಗಲು ಸಾಧ್ಯವಾಗಿಲ್ಲ ಎಂದು ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡರು ತಿಳಿಸಿದ್ದಾರೆ.

due-to-illness-i-did-not-attend-rajya-sabha-proceedings-says-hd-deve-gowda
ಅನಾರೋಗ್ಯದಿಂದ ರಾಜ್ಯಸಭೆ ಕಲಾಪಕ್ಕೆ ಹಾಜರಾಗಿಲ್ಲ : ಹೆಚ್ ಡಿ ದೇವೇಗೌಡರು
author img

By

Published : Aug 7, 2023, 11:02 PM IST

ಮನೆಯಲ್ಲಿಯೇ ಕಲಾಪ ವೀಕ್ಷಣೆ ಮಾಡಿದ ಗೌಡರು

ಬೆಂಗಳೂರು : ಅನಾರೋಗ್ಯದ ಕಾರಣದಿಂದ ಇಂದು ರಾಜ್ಯಸಭೆ ಕಲಾಪದಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ ಎಂದು ರಾಜ್ಯಸಭೆ ಸದಸ್ಯರೂ ಆಗಿರುವ ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ ತಿಳಿಸಿದ್ದಾರೆ. ಈ ಬಗ್ಗೆ ಇಂದು ರಾತ್ರಿ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿ ಮಾಹಿತಿ ನೀಡಿರುವ ಅವರು, ಬೆಂಗಳೂರಿನಲ್ಲಿ ಜೆಡಿಎಸ್ ಪಕ್ಷದ ಮಹತ್ವದ ಸಭೆಯನ್ನು ಇಂದೇ ಆಯೋಜಿಸಲಾಗಿತ್ತು. ಸೊಂಟ ನೋವಿನ ಕಾರಣ ಆ ಸಭೆಯಲ್ಲೂ ಬಹಳ ಹೊತ್ತು ಕೂರಲು ತಮ್ಮಿಂದ ಆಗಲಿಲ್ಲ. ಹತ್ತು ನಿಮಿಷವಷ್ಟೇ ಸಭೆಗೆ ಹಾಜರಾಗಿ ನಂತರ ವೈದ್ಯರಲ್ಲಿ ಚಿಕಿತ್ಸೆ ಪಡೆದು ಮನೆಗೆ ವಾಪಸಾಗಿ ವಿಶ್ರಾಂತಿ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ. ನೋವು ಕಡಿಮೆಯಾದರೆ ಬುಧವಾರ ಕಲಾಪದಲ್ಲಿ ಭಾಗಿಯಾಗುವುದಾಗಿ ದೇವೇಗೌಡರು ತಿಳಿಸಿದ್ದಾರೆ.

ಮನೆಯಲ್ಲಿಯೇ ಕಲಾಪ ವೀಕ್ಷಣೆ: ಇದರ ನಡುವೆ ಮಾಜಿ ಪ್ರಧಾನಿಗಳು ಮನೆಯಲ್ಲಿಯೇ ಟಿವಿಯಲ್ಲಿ ರಾಜ್ಯಸಭೆ ಕಲಾಪದ ನೇರ ಪ್ರಸಾರ ವೀಕ್ಷಿಸಿದರು. ಸಂಸತ್ತಿನ ಮುಂಗಾರು ಅಧಿವೇಶನ ನಡೆಯುತ್ತಿದ್ದು, ಉಭಯ ಸದನಗಳ ಕಲಾಪ ದೆಹಲಿ ಸೇವೆಗಳ ಮಸೂದೆ ಹಾಗು ಮಣಿಪುರ ಹಿಂಸಾಚಾರ ಹಿನ್ನೆಲೆಯಲ್ಲಿ ವ್ಯರ್ಥವಾಗುತ್ತಿದೆ.

ಇದನ್ನೂ ಓದಿ : 'ಹಣ ಬಿಡುಗಡೆಗೆ ಬಿಬಿಎಂಪಿ ವಿಳಂಬ': ಹೆಚ್​ಡಿಕೆ ಭೇಟಿಯಾಗಿ ಅಳಲು ತೋಡಿಕೊಂಡ ಗುತ್ತಿಗೆದಾರರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.