ETV Bharat / state

ಬೆಂಗಳೂರಲ್ಲಿ ಎಣ್ಣೆ ಕಿಕ್​​​ನಿಂದ ಕಿರಿಕ್: ನಶೆಯಲ್ಲಿ ವಾಹನ​ ಜಖಂಗೊಳಿಸಿದವನಿಗೆ ಗೂಸಾ - ಸದಾಶಿವನಗರ ಮದ್ಯ ಕುಡಿದು ಸಾರ್ವಜನಿಕರೊಂದಿಗೆ ಗಲಾಟೆ

ಪಬ್​ನಲ್ಲಿ ಪಾರ್ಟಿ ಮುಗಿಸಿ ಬಿಇಎಲ್ ಸರ್ಕಲ್ ಬಳಿ ಶಿರೀಶ್​​ ಕಾರ್ ನಿಲ್ಲಿಸಿದ್ದ. ಸ್ವಲ್ಪ ಹೊತ್ತು ಜೊತೆಗಿದ್ದ ಹುಡುಗಿ ಜೊತೆ ಮಾತನಾಡಿ ನಂತರ ಅಲ್ಲಿಗೆ ವಾಕಿಂಗ್​ಗೆ​ ಬಂದಿದ್ದ ಅಣ್ಣ-ತಂಗಿಯ ಜೊತೆ ಕುಡಿದ ಮತ್ತಿನಲ್ಲಿ ಅಸಭ್ಯವಾಗಿ ವರ್ತಿಸಿದ್ದಾನೆ. ಪ್ರಶ್ನಿಸಲು ಹೋದಾಗ ಅವರ ಮೇಲೆ ಕೂಗಾಡಿ ನಂತರ ಸಿಟ್ಟಿನಲ್ಲಿ ಅಲ್ಲಿದ್ದ ಹತ್ತಾರು ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾನೆ.

drunken-boy-hits-car-and-bike-in-sadashivanagar-bangalore
ಎಣ್ಣೆ ಕಿಕ್ಕ್​​ಗೆ ರಸ್ತೆಯಲ್ಲಿ ಕಿರಿಕ್
author img

By

Published : Oct 7, 2021, 5:26 PM IST

ಬೆಂಗಳೂರು: ಕುಡಿದ ಮತ್ತಿನಲ್ಲಿ ಯುವಕನೊರ್ವ ವಸತಿ ಪ್ರದೇಶದಲ್ಲಿ ನಿಲ್ಲಿಸಿದ್ದ ಕಾರು ಹಾಗೂ ಬೈಕ್​ಗಳಿಗೆ ಗುದ್ದಿ ಅವಾಂತರ ಸೃಷ್ಟಿಸಿದ್ದಾನೆ. ಇದನ್ನು ಪ್ರಶ್ನಿಸಿದ ಜನರ ಮೇಲೆ ಕೂಗಾಡಿ ರಂಪಾಟ ಮಾಡಿದ ಘಟನೆ ಸದಾಶಿವನಗರದ ಬಿಇಎಲ್​​​ ರೋಡ್​​ನಲ್ಲಿ ನಡೆದಿದೆ.

ಮದ್ಯದ ಮದಲ್ಲಿ ವಾಹನ​ ಜಖಂಗೊಳಿಸಿದವನಿಗೆ ಸ್ಥಳೀಯರಿಂದ ಗೂಸಾ

ನಿನ್ನೆ ತಡರಾತ್ರಿ ಶಿರೀಷ್ ಎಂಬಾತನಿಂತ ಈ ಕೃತ್ಯ ನಡೆದಿದೆ. ಹುಡುಗಿಯ ಜೊತೆ ಬಂದಿದ್ದ ಶಿರೀಶ್ ವಸತಿ ಪ್ರದೇಶದಲ್ಲಿ ನಿಲ್ಲಿಸಿದ್ದ ಐದು ಬೈಕ್​ ಮತ್ತು ಆರು ಕಾರುಗಳನ್ನು ಜಖಂಗೊಳಿಸಿದ್ದಾನೆ.

ಘಟನೆ ವಿವರ

ಪಬ್​ನಲ್ಲಿ ಪಾರ್ಟಿ ಮುಗಿಸಿ ಬಿಇಎಲ್ ಸರ್ಕಲ್ ಬಳಿ ಶಿರೀಶ್​​ ಕಾರ್ ನಿಲ್ಲಿಸಿದ್ದ. ಸ್ವಲ್ಪ ಹೊತ್ತು ಜೊತೆಗಿದ್ದ ಹುಡುಗಿ ಜೊತೆ ಮಾತನಾಡಿ ನಂತರ ಅಲ್ಲಿಗೆ ವಾಕಿಂಗ್​ಗೆ​ ಬಂದಿದ್ದ ಅಣ್ಣ-ತಂಗಿಯ ಜೊತೆ ಕುಡಿದ ಮತ್ತಿನಲ್ಲಿ ಅಸಭ್ಯವಾಗಿ ವರ್ತಿಸಿದ್ದಾನೆ ಎನ್ನಲಾಗ್ತಿದೆ. ಪ್ರಶ್ನಿಸಲು ಹೋದಾಗ ಅವರ ಮೇಲೆ ಕೂಗಾಡಿ ನಂತರ ಸಿಟ್ಟಿನಲ್ಲಿ ಅಲ್ಲಿದ್ದ ಹತ್ತಾರು ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾನೆ ಎಂದು ತಿಳಿದುಬಂದಿದೆ.

ಘಟನೆ ನೋಡುತ್ತಿದ್ದ ಸ್ಥಳೀಯರು ಶಿರೀಶ್​​​ ಗಾಡಿಯನ್ನ ತಡೆದು ಪ್ರಶ್ನಿಸಿದ್ದಾರೆ. ಕುಡಿದ ಮತ್ತಿನಲ್ಲಿ ಕೂಗಾಡಿದ ಶಿರೀಶ್​ಗೆ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಆರ್​​​​​​​​​​​​​​.ಟಿ.ನಗರ ಸಂಚಾರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಾಂಜಾ ವ್ಯಸನ : ಘಟನೆ ನಡೆದ ಸ್ಥಳ ಡೆಡ್ ಎಂಡ್ ಆಗಿರುವ ಕಾರಣ ಗಾಂಜಾ ಸೇದಲು ಅಲ್ಲಿಗೆ ಸಾಕಷ್ಟು ಹುಡುಗರು ಬುರತ್ತಾರೆ ಎಂದು ಹೇಳಲಾಗ್ತಿದೆ. ಅಲ್ಲದೆ, ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.