ETV Bharat / state

ಡ್ರಗ್ಸ್​ ಮಾಫಿಯಾ ಪ್ರಕರಣ: ಆರೋಪಿ ಚಿಪ್ಪಿ ಪೋಷಕರು ಸಿಸಿಬಿ ವಿಚಾರಣೆಗೆ ಹಾಜರು - ಚಿಪ್ಪಿ ಪೋಷಕರು ಸಿಸಿಬಿ ವಿಚಾರಣೆಗೆ ಹಾಜರು

ಮಗ ಮಾಡಿದ ತಪ್ಪಿಗೆ ಸದ್ಯ ತಂದೆ-ತಾಯಿ ಸಿಸಿಬಿ ಕಚೇರಿ ‌ಮೆಟ್ಟಿಲೇರುವ ಪರಿಸ್ಥಿತಿ ನಿರ್ಮಾಣವಾಗಿದ್ದು, ತಲೆಮರೆಸಿಕೊಂಡಿರುವ ಚಿಪ್ಪಿಯ ಮಾಹಿತಿಯನ್ನ ಸಿಸಿಬಿ ಇನ್ಸ್​​ಪೆಕ್ಟರ್ ಪುನೀತ್ ಪಡೆಯುತ್ತಿದ್ದಾರೆ. ಡ್ರಗ್ಸ್​ ಮಾಫಿಯಾ ಪ್ರಕರಣದಲ್ಲಿ ಶಿವಪ್ರಕಾಶ್ ಚಿಪ್ಪಿ ಮುಖ್ಯ ಪಾತ್ರವಹಿಸಿ ನಟಿ ರಾಗಿಣಿ ಹಾಗೂ ಸಂಜನಾ ಜೊತೆ ಪಾರ್ಟಿಯಲ್ಲಿ ಭಾಗಿಯಾಗಿ ಡ್ರಗ್ಸ್​ ಪೂರೈಕೆಯಲ್ಲಿ ಮುಂಚೂಣಿಯಲ್ಲಿದ್ದ ಎಂದು ಹೇಳಲಾಗ್ತಿದೆ.

sandalwood drug mafiya case accused chippi Parents Attending CCB
ಸ್ಯಾಂಡಲ್​​ವುಡ್ ಡ್ರಗ್ ಮಾಫಿಯಾ ಪ್ರಕರಣ, ಎ1 ಆರೋಪಿ ಚಿಪ್ಪಿ ಪೋಷಕರು ಸಿಸಿಬಿ ವಿಚಾರಣೆಗೆ ಹಾಜರು..
author img

By

Published : Oct 14, 2020, 1:39 PM IST

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ನಂಟು ಆರೋಪ ಪ್ರಕರಣದಲ್ಲಿ ‌ಮೊದಲ ಆರೋಪಿ ಶಿವಪ್ರಕಾಶ್ ಅಲಿಯಾಸ್ ಚಿಪ್ಪಿ ನಾಪತ್ತೆ ಹಿನ್ನೆಲೆ, ಸದ್ಯ ಸಿಸಿಬಿ ಪೊಲೀಸರು ಎಲ್ಲೆಡೆ ಶೋಧ ಮುಂದುವರೆಸಿದ್ದಾರೆ. ನಿನ್ನೆ ಶಿವಪ್ರಕಾಶ್ ಪೋಷಕರಿಗೆ ಸಿಸಿಬಿ ನೋಟಿಸ್ ನೀಡಿದ ಹಿನ್ನೆಲೆ ಇಂದು ವಿಚಾರಣೆಗೆ ಶಿವಪ್ರಕಾಶ್ ಪೋಷಕರು ಕೆಲ ದಾಖಲೆಗಳೊಂದಿಗೆ ಹಾಜರಾಗಿದ್ದಾರೆ.

sandalwood drug mafiya case accused chippi Parents Attending CCB
ಡ್ರಗ್ಸ್​ ಮಾಫಿಯಾ ಪ್ರಕರಣದ ಮೊದಲ ಆರೋಪಿ ಚಿಪ್ಪಿ

ಮಗ ಮಾಡಿದ ತಪ್ಪಿಗೆ ಸದ್ಯ ತಂದೆ-ತಾಯಿ ಸಿಸಿಬಿ ಕಚೇರಿ ‌ಮೆಟ್ಟಿಲೇರುವ ಪರಿಸ್ಥಿತಿ ನಿರ್ಮಾಣವಾಗಿದ್ದು, ತಲೆಮರೆಸಿಕೊಂಡಿರುವ ಚಿಪ್ಪಿಯ ಮಾಹಿತಿಯನ್ನ ಸಿಸಿಬಿ ಇನ್ಸ್​​ಪೆಕ್ಟರ್ ಪುನೀತ್ ಪಡೆಯುತ್ತಿದ್ದಾರೆ. ಡ್ರಗ್ಸ್​ ಮಾಫಿಯಾದ ಪ್ರಕರಣದಲ್ಲಿ ಶಿವಪ್ರಕಾಶ್ ಚಿಪ್ಪಿ ಮುಖ್ಯ ಪಾತ್ರವಹಿಸಿ ನಟಿಯರಾದ ರಾಗಿಣಿ ಹಾಗೂ ಸಂಜನಾ ಜೊತೆ ಪಾರ್ಟಿಯಲ್ಲಿ ಭಾಗಿಯಾಗ್ತಿದೆ. ಈ ವೇಳೆ ಡ್ರಗ್ಸ್​ ಪೂರೈಸುವುದರಲ್ಲಿ ಮುಂಚೂಣಿಯಲ್ಲಿದ್ದ ಎಂದು ಹೇಳಲಾಗ್ತಿದೆ. ಈ ಸಂಬಂಧ ಕಾಟನ್ ಪೇಟೆ ಪೊಲೀಸ್​ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಮೊದಲ ಆರೋಪಿಯಾಗಿ ಆಗಿ ಸಿಸಿಬಿ ಎಸಿಪಿ ಗೌತಮ್ ಅವರು ಚಿಪ್ಪಿ ಹೆಸರನ್ನು ನಮೂದು ಮಾಡಿದ್ದಾರೆ.

ಈತ ಬೆಂಗಳೂರು ಬಿಟ್ಟು ಬೇರೆಡೆ ತಲೆಮರೆಸಿಕೊಂಡಿರುವ ಮಾಹಿತಿ ಸಿಸಿಬಿಗೆ ಇದ್ದು, ಹೀಗಾಗಿ ವಿದೇಶಕ್ಕೆ ತೆರಳಿ ತಲೆಮರೆಸಿಕೊಳ್ಳಬಾರದು ಅನ್ನೋ ನಿಟ್ಟಿನಲ್ಲಿ ಏರ್​ಪೋರ್ಟ್​ಗಳಿಗೆ ಈಗಾಗಲೇ ಲುಕ್ ಔಟ್ ನೋಟಿಸ್ ಕೂಡ ಜಾರಿ ಮಾಡಲಾಗಿದೆ‌. ಈತ ಒಂದು ವೇಳೆ ಸಿಸಿಬಿ ಕೈಗೆ ಸಿಕ್ಕಿ ಬಿದ್ದರೆ ಈತನ ತನಿಖೆಯಿಂದ ಬಹಳಷ್ಟು ಮಾಹಿತಿಗಳು ಹೊರಬರುವ ಸಾಧ್ಯತೆಯಿದೆ. ಅಲ್ಲದೆ, ತನಿಖೆ ತಾರ್ಕಿಕ ಅಂತ್ಯಕ್ಕೆ ಬರಲಿದೆ ಎಂದು ಹೇಳಲಾಗ್ತಿದೆ.

ಈ ಹಿಂದೆ ಸಿಸಿಬಿ ಪೊಲೀಸರು ಶಿವಪ್ರಕಾಶ್​ನನ್ನು ಹುಡುಕಿಕೊಂಡು ನಗರದಲ್ಲಿರುವ ಆತನ ಮನೆಗೆ ಹೋದಾಗ ಚಿಪ್ಪಿ ಪೋಷಕರು ಮಗ ಮನೆಯಿಂದ ಗನ್ ತೆಗೆದುಕೊಂಡು ಹೋಗಿದ್ದಾನೆ. ಏನಾದರೂ ಆದರೆ ನೀವೇ ಹೊಣೆ ಎಂದಿದ್ದರು ಎನ್ನಲಾಗ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.