ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ಮಾಫಿಯಾ ನಂಟು ಆರೋಪ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ನಟಿಮಣಿಯರ ನಶೆಯ ತನಿಖೆಯನ್ನ ಒಂದೆಡೆ ಚುರುಕುಗೊಳಿಸಿ ಸಾಕ್ಷ್ಯಾಧಾರಗಳನ್ನು ಕಲೆ ಹಾಕುವುದರಲ್ಲಿ ಮುಂದಾಗಿದ್ದಾರೆ.
ಬೆಂಗಳೂರು ಪೊಲೀಸರು ಡ್ರಗ್ಸ್ ಪೆಡ್ಲರ್ಗಳ ಮಟ್ಟ ಹಾಕೋದಕ್ಕೆ ಮುಂದಾಗಿದ್ದಾರೆ. ಸಂಜಯನಗರ ಪೊಲೀಸರ ಕೈಗೆ ಇಬ್ಬರು ಪ್ರತಿಷ್ಠಿತ ಉದ್ಯಮಿಗಳು ಸಿಕ್ಕಿಬಿದ್ದಿದ್ದು, ಸದ್ಯ ಈ ಪ್ರಕರಣ ಗಂಭೀರವಾದ ಕಾರಣ ಸಿಸಿಬಿಗೆ ವರ್ಗಾವಣೆ ಮಾಡಲು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಅವರು ತಯಾರಿ ನಡೆಸಿದ್ದಾರೆ ಎನ್ನಲಾಗ್ತಿದೆ. ವರುಣ್ ಹಾಗೂ ವಿನೋದ್ ಇಬ್ಬರು ದೊಡ್ಡ ಡ್ರಗ್ಸ್ ಪೆಡ್ಲರ್ಗಳು ಎಂದು ಹೇಳಲಾಗ್ತಿದೆ. ಡಾಲರ್ಸ್ ಕಾಲೋನಿಯ ಅಪಾರ್ಟ್ಮೆಂಟ್ ಬಳಿ ಮಾದಕ ವಸ್ತುಗಳನ್ನ ಪೆಡ್ಲಿಂಗ್ ಮಾಡುತ್ತಾ ಅಧಿಕ ಹಣ ಗಳಿಸಿ ಐಷಾರಾಮಿ ಜೀವನ ನಡೆಸುತ್ತಿದ್ದ ಶಂಕೆ ವ್ಯಕ್ತವಾಗಿದೆ.
ಇಬ್ಬರು ಪೆಡ್ಲರ್ಗಳಿಗೆ ಸ್ಟಾರ್ ನಟರು, ಮಾಡೆಲ್ಗಳು, ಉದ್ಯಮಿಗಳ ಪರಿಚಯ ಇರೋ ಗುಮಾನಿ ತನಿಖಾಧಿಕಾರಿಗಳಿಗೆ ಇದೆ. ಹೀಗಾಗಿ ಸದ್ಯ ಆರೋಪಿಗಳ ಮೊಬೈಲ್ನ್ನು ಎಫ್ಎಸ್ಎಲ್ಗೆ ರವಾನೆ ಮಾಡಿದ್ದಾರೆ. ಮೊಬೈಲ್ ರಿಟ್ರೇವ್ ಆದಾಗ ಪಕ್ಕಾ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿ ತನಿಖೆ ನಡೆಸಬಹುದು. ಸದ್ಯ ಸಿಸಿಬಿ ಪೊಲಿಸರು ಡ್ರಗ್ಸ್ ಕೇಸ್ನ್ನು ಗಂಭೀರವಾಗಿ ತೆಗೆದುಕೊಂಡು ಬಹುತೇಕ ಡ್ರಗ್ಸ್ ಪೆಡ್ಲರ್ಗಳನ್ನು ಮಟ್ಟ ಹಾಕಿದ್ದಾರೆ. ಈ ಇಬ್ಬರು ಆರೋಪಿಗಳು ಬಹುದೊಡ್ಡ ಜಾಲ ಹೊಂದಿರುವ ಕಾರಣ ಸಿಸಿಬಿಗೆ ಪ್ರಕರಣ ಹಸ್ತಾಂತರವಾಗುವ ಸಾಧ್ಯತೆಯಿದೆ ಎನ್ನಲಾಗ್ತಿದೆ.
ಈ ಆರೋಪಿಗಳು ಸಂಜಯ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಸ್ತೆ ಬದಿಯ ಕಾರಿನಲ್ಲಿ ಗಾಂಜಾ ಸೇದುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಅಲ್ಲದೇ ಪೇಜ್ 3 ಪಾರ್ಟಿಗಳಿಗೆ ಗಾಂಜಾ ಸರಬರಾಜು ಮಾಡಿರುವುದಾಗಿ ಬಾಯ್ಬಿಟ್ಟಿದ್ದಾರೆ ಎಂದು ಹೇಳಲಾಗ್ತಿದೆ.