ETV Bharat / state

ಮುಂಬೈನಿಂದ ಸೋಪಿನಲ್ಲಿ ಡ್ರಗ್ಸ್ ತರಿಸಿ ಮಾರಾಟಕ್ಕೆ ಯತ್ನ : 80 ಲಕ್ಷ ಮೌಲ್ಯದ ಮಾದಕ ವಸ್ತು ವಶ

author img

By

Published : Dec 29, 2021, 12:13 PM IST

ಹೊಸ ವರ್ಷ ಸಮೀಪಿಸುತ್ತಿರುವಾಗಲೇ ನಗರದಲ್ಲಿ ನಡೆಯುವ ಪಾರ್ಟಿಗಳಿಗೆ ಡ್ರಗ್ಸ್ ಸರಬರಾಜು ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದರು.‌‌ ಈ ನಿಟ್ಟಿನಲ್ಲಿ ಮುಂಬೈನಲ್ಲಿ ಪರಿಚಿತ ಆರೋಪಿಯಿಂದ ಡ್ರಗ್ಸ್ ತರಿಸಿಕೊಂಡಿದ್ದರು‌. ಪೊಲೀಸರಿಗೆ ಅನುಮಾನ ಬಾರದಿರಲು ಫಿಯಾಮಾ ಸೋಪಿನಲ್ಲಿ ಡ್ರಗ್ಸ್ ತರಿಸಿಕೊಂಡಿದ್ದರು..

ಸೋಪಿನಲ್ಲಿ ಡ್ರಗ್ಸ್ ತರಿಸಿ ಮಾರಾಟಕ್ಕೆ ಯತ್ನ
ಸೋಪಿನಲ್ಲಿ ಡ್ರಗ್ಸ್ ತರಿಸಿ ಮಾರಾಟಕ್ಕೆ ಯತ್ನ

ಬೆಂಗಳೂರು : ಹೊಸ ವರ್ಷಾಚರಣೆ ವೇಳೆ ನಗರದಲ್ಲಿ ನಡೆಯುವ ಹೈ-ಎಂಡ್ ಪಾರ್ಟಿಗಳಿಗೆ ನಶೆ ಏರಿಸಲು ಮುಂಬೈನಿಂದ ಸೋಪಿನಲ್ಲಿ ಡ್ರಗ್ಸ್ ತರಿಸಿಕೊಂಡು ಮಾರಾಟಕ್ಕೆ ಮುಂದಾಗಿದ್ದ ಮೂವರು ನೈಜೀರಿಯಾ ಪ್ರಜೆಗಳನ್ನ ಸಿಸಿಬಿ ಮಾದಕ ದ್ರವ್ಯ ನಿಗ್ರಹದಳ ಪೊಲೀಸರು ಬಂಧಿಸಿದ್ದಾರೆ.

ನೈಜೀರಿಯಾ ಮೂಲದ ಬಸಿಲ್ ಎನ್ ಡೊಯಿಸಿ, ಆ್ಯಡೊಚಿ ಸಿಲ್ವೆಸ್ಟರ್ ಹಾಗೂ ಚಾರ್ಲಿಸ್ ಎಂಬುವರನ್ನು ಬಂಧಿಸಿ 80 ಲಕ್ಷ ಮೌಲ್ಯದ ಎಂಡಿಎಂಎ, ಕೊಕೈನ್ ಹಾಗೂ ಹ್ಯಾಶ್ ಆಯಿಲ್, 5 ಮೊಬೈಲ್ ಹಾಗೂ ಒಂದು ತೂಕದ ಯಂತ್ರ ಜಪ್ತಿ ಮಾಡಿಕೊಳ್ಳಲಾಗಿದೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದಾಗಿ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮಾಹಿತಿ ನೀಡಿರುವುದು..

ಬ್ಯುಸಿನೆಸ್ ವೀಸಾದಡಿ ಇಬ್ಬರು ಆರೋಪಿಗಳು ಭಾರತಕ್ಕೆ ಬಂದಿದ್ದರೆ‌, ಮತ್ತೊಬ್ಬ ಆರೋಪಿ ಈ ವರ್ಷ ನಗರಕ್ಕೆ ಕಾಲಿಟ್ಟಿದ್ದ. ಮೂವರು ದಂಧೆಕೋರರು ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಹಲವು ವರ್ಷಗಳಿಂದ ಡ್ರಗ್ಸ್‌ ದಂಧೆ ನಡೆಸುತ್ತಿದ್ದ ಆರೋಪಿಗಳು ಕಡಿಮೆ ಅವಧಿಯಲ್ಲಿ ಹೆಚ್ಚು ಹಣ ಸಂಪಾದನೆ ಮಾಡಲು ಮುಂದಾಗಿದ್ದರು.‌

ಮೂವರು ನೈಜೀರಿಯಾ ಪ್ರಜೆಗಳ ಬಂಧನ
ಮೂವರು ನೈಜೀರಿಯಾ ಪ್ರಜೆಗಳ ಬಂಧನ

ಹೊಸ ವರ್ಷ ಸಮೀಪಿಸುತ್ತಿರುವಾಗಲೇ ನಗರದಲ್ಲಿ ನಡೆಯುವ ಪಾರ್ಟಿಗಳಿಗೆ ಡ್ರಗ್ಸ್ ಸರಬರಾಜು ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದರು.‌‌ ಈ ನಿಟ್ಟಿನಲ್ಲಿ ಮುಂಬೈನಲ್ಲಿ ಪರಿಚಿತ ಆರೋಪಿಯಿಂದ ಡ್ರಗ್ಸ್ ತರಿಸಿಕೊಂಡಿದ್ದರು‌. ಪೊಲೀಸರಿಗೆ ಅನುಮಾನ ಬಾರದಿರಲು ಫಿಯಾಮಾ ಸೋಪಿನಲ್ಲಿ ಡ್ರಗ್ಸ್ ತರಿಸಿಕೊಂಡಿದ್ದರು.

ಸೋಪಿನಲ್ಲಿ ಡ್ರಗ್ಸ್ ತರಿಸಿಕೊಂಡಿದ್ದ ಆರೋಪಿಗಳು : ಹಲವು ತಿಂಗಳಿಂದ ಆರೋಪಿಗಳು ಡ್ರಗ್ಸ್ ಜಾಲದಲ್ಲಿ ತೊಡಗಿರುವ ಮಾಹಿತಿ ಸಂಗ್ರಹಿಸಿದ್ದ ಸಿಸಿಬಿ ಮಾದಕ ದ್ರವ್ಯ ನಿಗ್ರಹದಳ ಇನ್ಸ್‌ಪೆಕ್ಟರ್ ವಿರುಪಾಕ್ಷಪ್ಪ ನೇತೃತ್ವದ ತಂಡ ಬಾಗಲುಗುಂಟೆಯಲ್ಲಿ ವಾಸವಾಗಿದ್ದ ಮನೆಯಲ್ಲಿ ದಾಳಿ ನಡೆಸಿದ್ದರು. ನಿರಂತರ ಹುಡುಕಾಟದ ಬಳಿಕ ಅಡುಗೆಮನೆಯಲ್ಲಿ ಇಟ್ಟಿದ್ದ ಸೋಪುಗಳನ್ನು ಪರಿಶೀಲಿಸಿದಾಗ ಡ್ರಗ್ಸ್ ಪತ್ತೆಯಾಗಿದೆ.‌

ಒಂದು ಸೋಪಿನಲ್ಲಿ 100 ಗ್ರಾಂ ಡ್ರಗ್ಸ್ ಇಟ್ಟಿದ್ದರು. ಸದ್ಯ ಆರೋಪಿಗಳನ್ನು ಬಂಧಿಸಿ ಎನ್‌ಡಿಪಿಎಸ್ ಹಾಗೂ ವಿದೇಶಿಗರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ‌ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.