ಬೆಂಗಳೂರು : ಕೊರೊನಾ ಹಿನ್ನೆಲೆ ಶಾಲಾ ಕಾಲೇಜುಗಳನ್ನು ಬಂದ್ ಮಾಡಲಾಗಿದೆ. ಆದರೂ, ವಿದ್ಯಾರ್ಥಿಗಳನ್ನು ಕಾಲೇಜು ಬಳಿ ಕರೆಸಿ ಮಾದಕ ವಸ್ತು ಮಾರುತ್ತಿದ್ದ ವೇಳೆ ಡ್ರಗ್ ಪೆಡ್ಲರ್‌ನನ್ನು ಪೊಲೀಸರು ರೆಡ್ಹ್ಯಾಂಡಾಗಿ ಬಂಧಿಸಿದ್ದಾರೆ.
ನಗರದ ಈಸ್ಟ್ ವೆಸ್ಟ್ ಕಾಲೇಜಿನ ಬಳಿ ಗಾಂಜಾ ಮಾರುತ್ತಿದ್ದಾಗ ಬ್ಯಾಡರಹಳ್ಳಿ ಪೊಲೀಸರು ಯೋಗೇಶ್ ಎಂಬಾತನನ್ನು ಬಂಧಿಸಿದ್ದಾರೆ. ಬಂಧಿತನಿಂದ 2 ಕೆಜಿ 90 ಗ್ರಾಂ ಗಾಂಜಾ ಹಾಗೂ ಒಂದು ಸಾವಿರ ನಗದನ್ನು ವಶ ಪಡಿಸಿಕೊಳ್ಳಲಾಗಿದೆ.
ನಗರದ ಪಶ್ಚಿಮ ವಿಭಾಗದ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಭಾರತ್‌ನಗರ, ಬಿಇಎಲ್ ಬಡಾವಣೆಯ ಈಸ್ಟ್ ವೆಸ್ಟ್ ಕಾಲೇಜಿನ ಹತ್ತಿರ ಒಬ್ಬ ವ್ಯಕ್ತಿ ಮಾದಕ ವಸ್ತುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ. ಈ ವೇಳೆ ಖಚಿತ ಮಾಹಿತಿ ಮೇರೆಗೆ ಅಂದ್ರಹಳ್ಳಿಯ ಮುಖ್ಯರಸ್ತೆಯ ವಿನಾಯಕನಗರದ ಯೋಗೇಶ್ (23) ಎಂಬಾತನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ:ಹಣದ ಸಮಸ್ಯೆ ಅಂತ ದುರ್ಮಾರ್ಗ: ಕಾರವಾರದಲ್ಲಿ ಮೋಜು ಮಸ್ತಿಗೆಂದು ಕಳ್ಳತನಕ್ಕಿಳಿದ ಯುವಕರು ಅಂದರ್