ETV Bharat / state

ಮುಂಬೈನಿಂದ ಮಾದಕ ವಸ್ತು ಖರೀದಿ.. ಬೆಂಗಳೂರಿನ ಸ್ಕೂಲ್ ಬಳಿ ಮಾರಾಟ ಮಾಡ್ತಿದ್ದ ಇಬ್ಬರ ಬಂಧನ - bengaluru latest crime news

ಆರೋಪಿಗಳನ್ನ ವಿಚಾರಣೆಗೆ ಒಳಪಡಿಸಿದಾಗ, ಮೊಹ್ಮದ್ ಸಿಕಂದರ್ ಮತ್ತು ಮುಜಾಯಿದ್ ಪಾಷಾ ವೆಲ್ಡಿಂಗ್ ಮತ್ತು ಡ್ರೈವಿಂಗ್ ಕೆಲಸ ಮಾಡ್ತಾ ಮಾದಕ ವಸ್ತು ಸೇವನೆ ಹವ್ಯಾಸ ಬೆಳೆಸಿಕೊಂಡಿದ್ರು..

drug import from mumbai sold in bengaluru
ಮುಂಬೈನಿಂದ ಮಾದಕ ವಸ್ತು ಖರೀದಿ
author img

By

Published : Oct 2, 2020, 2:58 PM IST

ಬೆಂಗಳೂರು : ಮುಂಬೈನಿಂದ ಮಾದಕ ವಸ್ತುಗಳನ್ನು ತಂದು ಬೆಂಗಳೂರನ್ನೇ ಟಾರ್ಗೆಟ್​ ಮಾಡಿ ಮಾದಕ ವಸ್ತುಗಳನ್ನ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನ ಅಂದರ್ ಮಾಡುವಲ್ಲಿ ಪೂರ್ವ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.

ಶಿವಾಜಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ತಿಮ್ಮಯ್ಯ ಸರ್ಕಾರಿ ಉರ್ದು ಶಾಲೆ ಬಳಿ ಮಾದಕ ವಸ್ತುಗಳನ್ನ ಮಾರಾಟ ಮಾಡಲು ಪ್ರಯತ್ನ ಪಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದ್ದಾರೆ.

ದಾಳಿ ವೇಳೆ ಮೊಹ್ಮದ್ ಸಿಕಂದರ್ ಮತ್ತು ಮುಜಾಯಿದ್ ಪಾಷಾ ಎಂಬುವರು ರೆಡ್ ಹ್ಯಾಂಡ್​​ ಆಗಿ ಸಿಕ್ಕಿ ಬಿದ್ದಿದ್ದಾರೆ. ಆರೋಪಿಗಳನ್ನ ತಪಾಸಣೆ ನಡೆಸಿದಾಗ ಅವರ ಬಳಿ ಸುಮಾರು 80 ಸಾವಿರ ಮೌಲ್ಯದ 26.55ಗ್ರಾಂ ತೂಕದ ಹೆರಾಯಿನ್ ಪತ್ತೆಯಾಗಿದೆ.

ಆರೋಪಿಗಳನ್ನ ವಿಚಾರಣೆಗೆ ಒಳಪಡಿಸಿದಾಗ, ಮೊಹ್ಮದ್ ಸಿಕಂದರ್ ಮತ್ತು ಮುಜಾಯಿದ್ ಪಾಷಾ ವೆಲ್ಡಿಂಗ್ ಮತ್ತು ಡ್ರೈವಿಂಗ್ ಕೆಲಸ ಮಾಡ್ತಾ ಮಾದಕ ವಸ್ತು ಸೇವನೆ ಹವ್ಯಾಸ ಬೆಳೆಸಿಕೊಂಡಿದ್ರು. ಇಬ್ಬರಿಗೂ ಹಣಕಾಸಿನ ತೊಂದರೆಯಾದಾಗ ತಾವೇ ಮಾದಕ ವಸ್ತುಗಳನ್ನ ಮಾರಾಟ ಮಾಡಿ ಹೆಚ್ವಿನ ಹಣ ಸಂಪಾದನೆ ಮಾಡುವ ಉದ್ದೇಶದಿಂದಲೇ ಮಾರಾಟಕ್ಕಿಳಿದಿರೋದಾಗಿ ತಪ್ಪೊಪ್ಪಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.