ETV Bharat / state

ಬೆಂಗಳೂರು: ನಗರದಲ್ಲಿ ಮಾದಕ ವಸ್ತುಗಳ ಮಾರಾಟ, ಇಬ್ಬರು ಡೀಲರ್​ಗಳ ಬಂಧನ - ಬೇಗೂರು ಪೊಲೀಸ್

ಉದ್ಯಾನನಗರಿಯಲ್ಲಿ ಗಾಂಜಾ ಮಾರಾಟ ಪ್ರಕರಣದಲ್ಲಿ ಇಬ್ಬರು ಡ್ರಗ್ ಡೀಲರ್​ಗಳನ್ನು ಬೇಗೂರು ಪೊಲೀಸರು ಬಂಧಿಸಿದ್ದಾರೆ.

Etv Bharatdrug-dealers-arrest-in-bangalore
ಇಬ್ಬರು ಡ್ರಗ್ ಡೀಲರ್​ಗಳ ಬಂಧನ
author img

By

Published : Aug 3, 2022, 6:36 PM IST

ಬೆಂಗಳೂರು: ಒಬ್ಬ ಯೂಟ್ಯೂಬರ್, ಇನ್ನೊಬ್ಬ ವ್ಯಕ್ತಿ ಪಿಜಿಯಲ್ಲಿ(ಪೇಯಿಂಗ್ ಗೆಸ್ಟ್) ಇದ್ದುಕೊಂಡು ಸದ್ದಿಲ್ಲದೆ ಕೋಟಿ ಕೋಟಿ ರೂ ಮೌಲ್ಯದ ಡ್ರಗ್ ಡೀಲ್ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ನಗರದಲ್ಲಿ ಗಾಂಜಾ ಮಾರಾಟದ ಅಕ್ರಮ ಕಸುಬಿನಲ್ಲಿ ತೊಡಗಿಸಿಕೊಂಡಿದ್ದ ಆರೋಪಿಗಳಾದ ಅಸ್ಫಾಕ್ ಮತ್ತು ಶಿಫಾಸ್​ನನ್ನು ಬೇಗೂರು ಪೊಲೀಸರು ಬಂಧಿಸಿದ್ದಾರೆ.

ಇಬ್ಬರು ಡ್ರಗ್ ಡೀಲರ್​ಗಳ ಬಂಧನ

ಶಿಫಾಸ್ ಕೇರಳ ಮತ್ತು ಅಸ್ಫಾಕ್ ಕರಾವಳಿಯ ಬಂಟ್ವಾಳ ಮೂಲದವನು. ಶಿಫಾಸ್ ಯುಟ್ಯೂಬ್ ಚಾನೆಲ್ ಮಾಡಿಕೊಂಡು ಅದರ ಜೊತೆಗೆ ಡ್ರಗ್ಸ್ ಸಪ್ಲೈ ಮಾಡೋ ಕೆಲಸವನ್ನೂ ಮಾಡುತ್ತಿದ್ದ. ಅಸ್ಫಾಕ್ ಮಡಿವಾಳದಲ್ಲಿ ಪಿಜಿಯಲ್ಲಿ ಇದ್ದುಕೊಂಡು ಮಾದಕ ವಸ್ತುಗಳನ್ನು ಕಾಲೇಜು ವಿದ್ಯಾರ್ಥಿಗಳಿಗೆ ​ಮಾರಾಟ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಆರೋಪಿಗಳಿಂದ 2 ಕೆ.ಜಿ 70ಗ್ರಾಂ ಹಷಿಷ್ ಎಣ್ಣೆ, 1 ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಕುಡಿತ ಬಿಡುವಂತೆ ಪೋಷಕರಿಂದ ಬುದ್ಧಿವಾದ : ಮನನೊಂದು ವ್ಯಕ್ತಿ ಆತ್ಮಹತ್ಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.