ETV Bharat / state

ಸ್ಯಾಂಡಲ್​ವುಡ್​​ ಡ್ರಗ್ಸ್​​ ಕೇಸ್​​: ಸಿಸಿಬಿಯಿಂದ ಮಾಜಿ ಸಚಿವರ ಪುತ್ರ ಆದಿತ್ಯ ಆಳ್ವಾ ಅರೆಸ್ಟ್​

ccb arrested ex minister son aditya alva
ಆದಿತ್ಯ ಆಳ್ವಾ ಅರೆಸ್ಟ್​
author img

By

Published : Jan 12, 2021, 6:51 AM IST

Updated : Jan 12, 2021, 7:30 AM IST

06:48 January 12

ಸ್ಯಾಂಡಲ್​ವುಡ್​ ಡ್ರಗ್ಸ್​ ಪ್ರಕರಣದ ಪ್ರಮುಖ ಆರೋಪಿ ಆದಿತ್ಯ ಆಳ್ವಾರನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು: ಸ್ಯಾಂಡಲ್​​ವುಡ್ ಡ್ರಗ್ಸ್ ಕೇಸ್​  ಪ್ರಕರಣ ಸಂಬಂಧ ತಲೆಮರೆಸಿಕೊಂಡಿದ್ದ ಮಾಜಿ ಸಚಿವ ಜೀವರಾಜ್ ಆಳ್ವಾ ಪುತ್ರ  ಆದಿತ್ಯ ಆಳ್ವಾನನ್ನು ಸಿಸಿಬಿ ಪೊಲೀಸರು ಚೆನ್ನೈನಲ್ಲಿ ಬಂಧಿಸಿದ್ದಾರೆ.

ನಿನ್ನೆ ರಾತ್ರಿ ಸಿಸಿಬಿ ಆದಿತ್ಯ ಆಳ್ವಾನನ್ನು ಬಂಧಿಸಿದೆ. ಮಾಜಿ ಸಚಿವ ಜೀವರಾಜ್​ ಪುತ್ರನಾಗಿರುವ ಆದಿತ್ಯ ತನ್ನ ವಿರುದ್ಧ ಆರೋಪ ಕೇಳಿ ಬರುತ್ತಿದ್ದಂತೆ ನಾಪತ್ತೆಯಾಗಿದ್ದ. ಈತನನ್ನು ಬಂಧಿಸಲು ಸಿಸಿಬಿ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದರು..ಅಲ್ಲದೇ  ಸಿಸಿಬಿ ವಿಶೇಷ  ತಂಡವು ಮುಂಬೈನಲ್ಲಿರುವ ಈತನ ಬಾವ ನಟ ವಿವೇಕ್‌ ಓಬರಾಯ್ ಮನೆ ಮೇಲೆಯೂ ದಾಳಿ ನಡೆಸಿದ್ದರು. ಸಹೋದರಿ ಪ್ರಿಯಾಂಕ ಆಳ್ವಾನನ್ನು ವಿಚಾರಣೆ ನಡೆಸಿದ್ದರು.

ಸೆ. 25 ಹೆಬ್ಬಾಳದಲ್ಲಿರುವ ಹೌಸ್ ಆಫ್ ಲೈಫ್ ಹೆಸರಿನ ಆದಿತ್ಯ ನಿವಾಸದ ಮೇಲೆ ದಾಳಿ ನಡೆಸಿದ್ದರು.. ಡ್ರಗ್ಸ್ ಮಾರಾಟ ಆರೋಪ ಹಿನ್ನೆಲೆ ‌ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ‌ ದಾಖಲಾಗಿದ್ದ ಪ್ರಕರಣದಲ್ಲಿ ಆದಿತ್ಯ ಆಳ್ವ  ಎ6 ಆರೋಪಿಯಾಗಿದ್ದಾನೆ..‌ ಪ್ರಕರಣ ದಾಖಲಾಗುತ್ತಿದ್ದಂತೆ‌ ಮೊಬೈಲ್ ಸ್ವಿಚ್ ಅಫ್ ಮಾಡಿಕೊಂಡು‌ ತಲೆಮರೆಸಿಕೊಂಡಿದ್ದ ಈತನನ್ನು ಚೆನ್ನೈನಲ್ಲಿ ಬಂಧಿಸಿರುವ  ಸಿಸಿಬಿ ಪೊಲೀಸರು  ಬೆಂಗಳೂರಿಗೆ ಕರೆತರುತ್ತಿದ್ದು, ನಗರಕ್ಕೆ ಬಂದ ಬಳಿಕ  ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

ಇದನ್ನೂ ಓದಿ:ತುರ್ತು ಪರಿಸ್ಥಿತಿ ಘೋಷಿಸಿದ ಡೊನಾಲ್ಡ್ ಟ್ರಂಪ್!

Last Updated : Jan 12, 2021, 7:30 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.