ಬೆಂಗಳೂರು : ಜ್ಞಾನಭಾರತಿ ಯುನಿವರ್ಸಿಟಿ ಬಳಿ ಯುವತಿ ಮೇಲೆ ಬಸ್ ಹರಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಎಂಟಿಸಿ ಚಾಲಕನನ್ನು ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸುರೇಶ್ ಬಂಧಿತ ಬಿಎಂಟಿಸಿ ಬಸ್ ಚಾಲಕ.
ಜ್ಞಾನಭಾರತಿ ವಿವಿ ಆವರಣದಲ್ಲಿ ಇಂದು ಬೆಳಗ್ಗೆ ವಿದ್ಯಾರ್ಥಿನಿ ಶಿಲ್ಪಾ ಎಂಬಾಕೆ ಬಸ್ ಹತ್ತುವಾಗ ಗಮನಿಸದ ಚಾಲಕ ಬಸ್ ಚಲಾಯಿಸಿದ್ದ. ಪರಿಣಾಮ ಯುವತಿ ಸೊಂಟದ ಮೇಲೆ ಬಸ್ ಹರಿದ ಪರಿಣಾಮ ಗಂಭೀರ ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಯುವತಿಯ ಗೆಳತಿ ರಾಧಿಕಾ ಎಂಬುವರು ನೀಡಿದ ದೂರಿನ ಮೇರೆಗೆ ಚಾಲಕ ಸುರೇಶ್ ನನ್ನು ಬಂಧಿಸಲಾಗಿದೆ.
ಯುನಿವರ್ಸಿಟಿಯ ಎಲ್ಲ ಗೇಟ್ ಗಳು ಬಂದ್ : ಘಟನೆ ಸಂಬಂಧ ಜ್ಞಾನಭಾರತಿ ವಿವಿ ಸಂಪರ್ಕಿಸುವ ಎಲ್ಲ ಪ್ರವೇಶದ್ವಾರವನ್ನು ಆಡಳಿತ ಮಂಡಳಿ ಬಂದ್ ಮಾಡಿದೆ. ಪ್ರತಿಭಟನೆ ಹಿನ್ನೆಲೆ ಸದ್ಯ ಯಾವ ವಾಹನವನ್ನೂ ಒಳ ಬಿಡದಂತೆ ಸೂಚಿಸಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗೃತೆ ಹಿನ್ನೆಲೆ ಈ ಕ್ರಮ ಕೈಗೊಂಡಿರುವುದಾಗಿ ವಿವಿ ತಿಳಿಸಿದೆ.
ಇದನ್ನೂ ಓದಿ : ರಾಜ್ಯದ ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಅಕ್ಟೋಬರ್ 15ರವರೆಗೆ ಮಳೆ ಸಾಧ್ಯತೆ