ಬೆಂಗಳೂರು: ರಾಷ್ಟ್ರೀಯ ತೋಟಗಾರಿಕಾ ಮೇಳ-2021ಕ್ಕೆ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ರವಿಶಂಕರ್ ಗೂರೂಜಿ ಚಾಲನೆ ನೀಡಿದರು.
ಸೋಮವಾರದಿಂದ ಮುಂದಿನ ಐದು ದಿನ ನಡೆಯುವ ಮೇಳದಲ್ಲಿ ಪ್ರತಿದಿನ ನೋಂದಾಯಿತ 6 ಸಾವಿರ ರೈತರಿಗೆ ವೀಕ್ಷಣೆಗೆ ಅವಕಾಶ ನೀಡಲಾಗಿದ್ದು. ಅನ್ಲೈನ್ನಲ್ಲಿ ನಿತ್ಯ 6 ಲಕ್ಷ ಜನರು ಮೇಳದ ವೀಕ್ಷಣೆ ಮಾಡಲಿದ್ದಾರೆ.
ಹೆಸರಘಟ್ಟದ 700 ಎಕರೆ ಪ್ರದೇಶದಲ್ಲಿ ಹಸಿರಿನಿಂದ ಕಂಗೊಳಿಸುವ ಭಾರತೀಯ ತೋಟಗಾರಿಕಾ ಸಂಶೋಧನೆ ಸಂಸ್ಥೆಯ ಅವರಣದಲ್ಲಿ ರಾಷ್ಟ್ರೀಯ ತೋಟಗಾರಿಕಾ ಮೇಳಕ್ಕೆ ಚಾಲನೆ ನೀಡಲಾಗಿತ್ತು. ಕೋವಿಡ್ ಹಿನ್ನೆಲೆ ಈ ಬಾರಿಯ ಮೇಳದಲ್ಲಿ ಸಾರ್ವಜನಿಕರಿಗೆ ಅವಕಾಶ ನೀಡದೆ ರೈತರು, ಕೃಷಿ ವಿದ್ಯಾರ್ಥಿಗಳು ಮತ್ತು ಕೃಷಿ ವಿಜ್ಞಾನಿಗಳಿಗೆ ವಿಕ್ಷಣೆಗೆ ಅವಕಾಶ ನೀಡಲಾಗಿದೆ. ‘ಸ್ಟಾರ್ಟ್ ಅಪ್ ಮತ್ತು ಸ್ಟ್ಯಾಂಡ್ ಅಪ್ ಭಾರತಕ್ಕಾಗಿ ತೋಟಗಾರಿಕೆ’ ಎಂಬ ಉದ್ದೇಶದೊಂದಿಗೆ ಈ ಬಾರಿಯ ಮೇಳದಲ್ಲಿ ಆಯೋಜನೆ ಮಾಡಲಾಗಿದೆ.
ರಾಷ್ಟ್ರೀಯ ತೋಟಗಾರಿಕಾ ಮೇಳದ -2021 ವಿಶೇಷತೆಗಳು :
ಈ ಬಾರಿಯ ಮೇಳದಲ್ಲಿ 257 ತಂತ್ರಜ್ಞಾನ ಮತ್ತು ತಳಿಗಳನ್ನ ಪ್ರದರ್ಶನಕ್ಕೆ ಇಡಲಾಗಿದೆ. 147 ವಸ್ತು ಪ್ರದರ್ಶನ ಮಳಿಗೆಗಳಿವೆ. ಬಿಳಿ ತಿರುಳು ವಿಭಾಗದಲ್ಲಿ ‘ಅರ್ಕಾ ಪೂರ್ಣ’ ಹೊಸ ಸೀಬೆ ತಳಿ, ಅಂಟು ಕಾಂಡ ರೋಗ ನಿರೋಧಕ ಸೋರೆಕಾಯಿ ಹೈಬ್ರಿಡ್ ‘ಅರ್ಕಾ ಗಂಗಾ’ ಮತ್ತು ಎಲೆ ಸುರಳಿ ರೋಗ ನಿರೋಧಕ ಮೆಣಸಿನಕಾಯಿ ಹೈಬ್ರಿಡ್ ‘ಅರ್ಕಾ ಗಗನ್’. ಕಲ್ಲಂಗಡಿಯಲ್ಲಿ ಹೊಸ ತಳಿ ಅರ್ಕಾ ಶ್ಯಾಮ್, ಹೆಚ್ಚಿನ ಕ್ಯಾರೋಟಿನ್ ಅಂಶವುಳ್ಳ ಚೆಂಡು ಹೂವಿನ ಹೈಬ್ರಿಡ್ ತಳಿಗಳಿವೆ. ಮೌಲ್ಯವರ್ಧಿತ ಉತ್ಪನ್ನಗಳಲ್ಲಿ ಅಣಬೆಯಿಂದ ಮಾಡಿದ ಚಟ್ಟಿ ಮತ್ತು ರಸಂ ಪುಡಿಗಳು, ಹೆಸರಿನಿಂದ ಮಾಡಿದ ಅರ್ಕಾ ಹಲಸುರಸ್ ಪಾನೀಯ, ಅರ್ಕಾ ಚಾಕೊಲೇಟ್, ಅರ್ಕಾ ಜಾಕೀಸ್ (ಕುಕೀಸ್) ಸೇರಿ ಇತರೆ ತಳಿಗಳನ್ನು ಪ್ರದರ್ಶನಕ್ಕೆ ಇರಿಸಲಾಗಿದೆ.
ನೋಂದಾಯಿತ ರೈತರಿಗೆ ಮಾತ್ರ ತೋಟಗಾರಿಕಾ ಮೇಳಕ್ಕೆ ಅವಕಾಶ:
ರಾಷ್ಟ್ರೀಯ ತೋಟಗಾರಿಕಾ ಮೇಳ -2021ಕ್ಕೆ ರಾಜ್ಯ-ಹೊರರಾಜ್ಯಗಳಿಂದ ರೈತರು, ಕೃಷಿ ಉದ್ದಿಮೆಗಳು ಆಗಮಿಸುತ್ತಿದ್ದು, ಕೋವಿಡ್ ಹಿನ್ನೆಲೆ ಆಫ್ ಲೈನ್ ಮತ್ತು ಆನ್ ಲೈನ್ ಮೂಲಕವೂ ರೈತರು ಮೇಳದಲ್ಲಿ ಭಾಗವಹಿಸಬಹುದಾಗಿದೆ. ಪ್ರತಿದಿನ ನೋಂದಾಯಿತ 6 ಸಾವಿರ ರೈತರಿಗೆ ಅವಕಾಶ ನೀಡಲಾಗಿದೆ. ಆಸಕ್ತ ರೈತರು https://nhf2021.iihr.res.inನಲ್ಲಿ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಕಳೆದ ಬಾರಿಯ ಮೇಳದಲ್ಲಿ 80 ಸಾವಿರ ರೈತರು ಮೇಳಕ್ಕೆ ಭೇಟಿ ನೀಡಿದ್ದರು. ಈ ಭಾರಿ 30 ಸಾವಿರ ರೈತರಿಗೆ ಅವಕಾಶ ನೀಡಲಾಗಿದ್ದು, ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಇಲ್ಲ. ಆನ್ಲೈನ್ನಲ್ಲಿ ವಿಕ್ಷಣೆಗೆ ಅವಕಾಶ ನೀಡಲಾಗಿದ್ದು, ನಿತ್ಯ 6 ಲಕ್ಷ ಜನರು ತೋಟಗಾರಿಕಾ ಮೇಳದ ವೀಕ್ಷಣೆ ಮಾಡುವ ನಿರೀಕ್ಷೆಯಿದೆ
ಓದಿ:ಲಕ್ಷಾಂತರ ಮೌಲ್ಯ ಬೆಲೆ ಬಾಳುವ ಬ್ಯಾಗ್‌ನ ಪ್ರಯಾಣಿಕನಿಗೆ ಮರಳಿಸಿದ ಬಿಎಂಟಿಸಿ ಸಿಬ್ಬಂದಿ