ETV Bharat / state

ಫೆ.1ರಿಂದ ವಕೀಲರಿಗೆ ಡ್ರೆಸ್ ಕೋಡ್ ಕಡ್ಡಾಯ : ಮಾರ್ಗಸೂಚಿ ಸಡಿಲಿಸಿದ ಹೈಕೋರ್ಟ್ - highcourt latest news updates

ಫೆಬ್ರವರಿ 1ರಿಂದ ವಕೀಲರು ಬ್ಯಾಂಡ್, ಕಪ್ಪು ಕೋಟು, ಗೌನ್ ಧರಿಸುವುದು ಕಡ್ಡಾಯವಾಗಿದೆ ಎಂದು ರಾಜ್ಯ ಉಚ್ಚ ನ್ಯಾಯಾಲಯ ಆದೇಶ ಹೊರಡಿಸಿದೆ.

dresscode compulsory for advocates from feb 1
ಹೈಕೋರ್ಟ್
author img

By

Published : Jan 19, 2021, 8:04 PM IST

ಬೆಂಗಳೂರು : ಕೋವಿಡ್-19 ಹಿನ್ನೆಲೆ ವಿಧಿಸಿದ್ದ ಮಾರ್ಗಸೂಚಿಗಳನ್ನು ಸಡಿಲಿಸಿರುವ ಹೈಕೋರ್ಟ್, ಫೆಬ್ರವರಿ 1ರಿಂದ ವಕೀಲರಿಗೆ ಡ್ರೆಸ್ ಕೋಡ್ ಕಡ್ಡಾಯಗೊಳಿಸಿ ಆದೇಶಿಸಿದೆ.

ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಅವರ ಆದೇಶದಂತೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬಾದಾಮಿಕರ್ ಅವರು ನೋಟಿಫಿಕೇಷನ್ ಹೊರಡಿಸಿದ್ದಾರೆ. ಅದರಂತೆ ಬೆಂಗಳೂರಿನಲ್ಲಿರುವ ಹೈಕೋರ್ಟ್ ಪ್ರಧಾನ ಪೀಠ, ಕಲಬುರಗಿ ಮತ್ತು ಧಾರವಾಡ ಪೀಠಗಳಲ್ಲಿ ಜನವರಿ 27ರಿಂದ ಅನ್ವಯವಾಗುವಂತೆ ಮಾರ್ಗಸೂಚಿಗಳನ್ನು ಸಡಿಲಿಸಲಾಗಿದೆ.

ಬೆಂಗಳೂರಿನ ಪ್ರಧಾನ ಪೀಠದಲ್ಲಿ ಕೋರ್ಟ್ ಆವರಣದೊಳಗೆ ವಕೀಲರು ಮತ್ತು ಸಿಬ್ಬಂದಿಯ ವಾಹನಗಳಿಗೂ ಅವಕಾಶ ನೀಡಿದ್ದು, ಪ್ರವೇಶದ್ವಾರ 3ರಲ್ಲಿ ಐಡಿ ಕಾರ್ಡ್​ಗಳನ್ನು ಪರಿಶೀಲಿಸಿದ ನಂತರವೇ ಒಳಬಿಡುವಂತೆ ಸೂಚಿಸಲಾಗಿದೆ. ಜೊತೆಗೆ ಸರ್ಕಾರಿ ಅಧಿಕಾರಿಗಳು ಹಾಗೂ ಕಕ್ಷಿದಾರರ ವಾಹನಗಳಿಗೆ ಈ ಗೇಟ್​ನಲ್ಲಿ ಪ್ರವೇಶವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಕೋರ್ಟ್ ಆವರಣ ಪ್ರವೇಶಿಸುವ ಪ್ರತಿಯೊಬ್ಬರಿಗೂ ಎಂದಿನಂತೆ ಥರ್ಮಲ್ ಸ್ಕ್ಯಾನಿಂಗ್ ನಡೆಸಲಾಗುತ್ತದೆ. ಹಾಗೆಯೆ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯವಾಗಿದೆ. ಒಂದು ವೇಳೆ ಮಾಸ್ಕ್ ಧರಿಸದಿದ್ದಲ್ಲಿ ಅಂತಹವರನ್ನು ಕೂಡಲೇ ಹೊರಗೆ ಕಳುಹಿಸುವಂತೆ ಸೂಚಿಸಲಾಗಿದೆ.

ಕ್ಯಾಂಟೀನ್​ಗಳನ್ನು ಮೊದಲಿನಂತೆ ನಡೆಸಲು ಅವಕಾಶ ನೀಡಲಾಗಿದ್ದು, ಅಲ್ಲಿ ಶೇ.50ರಷ್ಟು ಮಾತ್ರ ಜನರಿರಬೇಕು. ಸ್ಯಾನಿಟೈಸರ್ ಒದಗಿಸಬೇಕು. ಲಿಫ್ಟ್​ಗಳಲ್ಲಿಯೂ ಶೇ.50ಕ್ಕಿಂತ ಹೆಚ್ಚು ಮಂದಿ ಓಡಾಡಬಾರದು ಎಂದು ತಿಳಿಸಲಾಗಿದೆ.

ಇನ್ನು ಕೊರೊನಾ ವೈರಸ್ ಹರಡುವ ಕಾರಣಕ್ಕಾಗಿ ಹೈಕೋರ್ಟ್​ಗಳಲ್ಲಿ ಗೌನ್ ಧರಿಸುವುದರಿಂದ ನೀಡಿದ್ದ ವಿನಾಯಿತಿಯನ್ನು ರದ್ದುಪಡಿಸಲಾಗಿದ್ದು, ಫೆಬ್ರವರಿ 1ರಿಂದ ವಕೀಲರು ಬ್ಯಾಂಡ್, ಕಪ್ಪುಕೋಟು, ಗೌನ್ ಧರಿಸುವುದು ಕಡ್ಡಾಯವಾಗಿದೆ ಕಕ್ಷಿದಾರರು ಹೈಕೋರ್ಟ್ ಪ್ರವೇಶಿಸುವುದಕ್ಕೆ ವಿಧಿಸಿದ್ದ ನಿರ್ಬಂಧವನ್ನು ಹಿಂದಿನ ಮಾರ್ಗಸೂಚಿ ಅನುಸಾರ ಮತ್ತಷ್ಟು ಅವಧಿಗೆ ವಿಸ್ತರಿಸಲಾಗಿದೆ.

ಇದನ್ನೂ ಓದಿ:ದೇಶದಲ್ಲಿ ಈವರೆಗೆ ನಾಲ್ಕೂವರೆ ಲಕ್ಷ ಜನರಿಗೆ ಕೋವಿಡ್ ಲಸಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.