ETV Bharat / state

ಪಾಲಿಕೆಯಿಂದ ಮತದಾರರ ಕರಡುಪಟ್ಟಿ ಬಿಡುಗಡೆ : ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್

ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಪಾಲಿಕೆಯು ಮತದಾರರ ಕರಡುಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.

draft-list-of-electors-released-by-the-corporation
ಪಾಲಿಕೆಯಿಂದ ಮತದಾರರ ಕರಡುಪಟ್ಟಿ ಬಿಡುಗಡೆ : ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್
author img

By

Published : Nov 9, 2022, 10:35 PM IST

ಬೆಂಗಳೂರು: ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಪಾಲಿಕೆಯು ಮತದಾರರ ಕರಡುಪಟ್ಟಿ ಬಿಡುಗಡೆ ಮಾಡಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.

ಇಂದು ನಗರದ ಪಾಲಿಕೆ ಕೇಂದ್ರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ 28 ವಿಧಾನಸಭಾ ಕ್ಷೇತ್ರಗಳ ಮತದಾರರ ನೋಂದಣಾಧಿಕಾರಿಗಳ ಕಚೇರಿ, ಸಹಾಯಕ ಮತದಾರರ ನೋಂದಣಾಧಿಕಾರಿ ಕಚೇರಿ, ವಾರ್ಡ್ ಕಚೇರಿಗಳಲ್ಲಿ ಪಟ್ಟಿ ಪ್ರಕಟಿಸಲಾಗಿದೆ. ಸಾರ್ವಜನಿಕರಿಗೆ ಮತದಾರರ ಪಟ್ಟಿ ಪರಿಶೀಲಿಸಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.

ಜನರು ತಮ್ಮ ಮೊಬೈಲ್ ನಲ್ಲಿ ವೋಟರ್ಸ್ ಹೆಲ್ಪ್ ಲೈನ್ ಆ್ಯಪ್ ಅಥವಾ ಎನ್‌.ವಿ.ಎಸ್‌.ಪಿ ವೆಬ್ಸೈಟ್ ಮೂಲಕ ಮಾಹಿತಿ ಪಡೆಯಬಹುದಾಗಿದೆ. ಇಲ್ಲಿ ಇನ್ನಿತರ ಮತಗಟ್ಟೆ, ಶೇಕಡಾವಾರು ಮತದಾನದ ಮಾಹಿತಿ ಪಡೆಯಬಹುದು. ಈ ಹಿಂದೆ ರಾಜಧಾನಿಯ 28 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 8,614 ಮತಗಟ್ಟೆಗಳಿದ್ದವು. ಪ್ರಸ್ತುತ 8615 ಮತಗಟ್ಟೆಗಳಿವೆ. ಮತದಾರರ ಪಟ್ಟಿಯಲ್ಲಿ ದೋಷಗಳಿದ್ದರೆ ಆಕ್ಷೇಪಣೆ ಸಲ್ಲಿಸಲು ಇಂದಿನಿಂದ ಒಂದು ತಿಂಗಳು ಕಾಲಾವಕಾಶ ಇದೆ. ಅಂತಿಮ ಮತದಾರರ ಪಟ್ಟಿಯನ್ನು ಜನವರಿ 5 ರಂದು ಪ್ರಕಟಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

17 ವರ್ಷದವರೂ ಅಪ್ಲಿಕೇಶನ್ ಸಲ್ಲಿಸಲು ಅರ್ಹರು : ಇ-ಲಿಸ್ಟ್ ಪ್ರಕಟ ಮಾಡಲಾಗಿದ್ದು, ಇದರ ಆಧಾರದ ಮೇಲೆ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. 18 ವರ್ಷ ಮೇಲ್ಪಟ್ಟವರ ಮತದಾನ ಮಾಡಲು ಪರಿಗಣಿಸುತ್ತಿದ್ದೇವೆ. ಜನವರಿ, ಏಪ್ರಿಲ್, ಜುಲೈ, ಅಕ್ಟೋಬರ್ ಸೇರಿದಂತೆ ನಾಲ್ಕು ಹಂತದಲ್ಲಿ 18 ವರ್ಷ ಆದವರಿಗೆ ಮತದಾನಕ್ಕೆ ಅವಕಾಶ ನೀಡಿ ಗುರುತಿನ ಚೀಟಿ ನೀಡಲಾಗುತ್ತದೆ.

17 ವರ್ಷ ಆದವರೂ ಕೂಡ ಮತದಾನ ಮಾಡಲು ಅಪ್ಲಿಕೇಶನ್ ಸಲ್ಲಿಸಲು ಅವಕಾಶ ಇದೆ. ಅವರಿಗೆ 18 ವರ್ಷ ಆದ ಮೇಲೆ ಗುರುತಿನ ಚೀಟಿ ಸಿಗುತ್ತದೆ. ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಹಂತ ಹಂತವಾಗಿ ಪರಿಷ್ಕರಣೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೇ ಫಾರ್ಮ್ 6 : ಮತದಾರರ ಪಟ್ಟಿಯಲ್ಲಿ ಸಾರ್ವಜನಿಕರು ತಮ್ಮ ಹೆಸರು ಪರಿಶೀಲಿಸಿಕೊಳ್ಳಲು ಚುನಾವಣಾ ಆಯೋಗದ ವೆಬ್ಸೈಟ್‌ಗೆ ಭೇಟಿ ನೀಡಬಹುದಾಗಿದೆ. ಒಂದು ವೇಳೆ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೇ ಫಾರ್ಮ್ 6ರ ಮೂಲಕ ಸೇರ್ಪಡೆಯಾಗಬಹುದು. ಸ್ಮಾರ್ಟ್ ಫೋನ್ ಮೂಲಕವೂ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಸಾರ್ವಜನಿಕರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾದ ಬಗ್ಗೆ ಪರಿಶೀಲಿಸಿಕೊಳ್ಳಬೇಕು ಹಾಗೂ ಸರಿಯಾದ ಹೆಸರನ್ನು ನಮೂದಿಸಿ ನೊಂದಾಯಿಸಿದ ಬಗ್ಗೆ ಖಚಿತಪಡಿಸಿಕೊಳ್ಳುಬೇಕು ಎಂದು ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.

ಇದನ್ನೂ ಓದಿ : ಮೋದಿ ಆಗಮನದ ಹಿನ್ನೆಲೆ ನಗರದೆಲ್ಲೆಡೆ ಕಾಮಗಾರಿಗಳು ಚುರುಕು; ಮೆಜೆಸ್ಟಿಕ್ ರೈಲ್ವೆ ರಸ್ತೆಗೆ ಟಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.