ETV Bharat / state

ನೈಟ್ ಕರ್ಫ್ಯೂ ಬಗ್ಗೆ ಗೊಂದಲವಿಲ್ಲ; ಸುಧಾಕರ್ ಸ್ಪಷ್ಟನೆ! - night curfew topic

ನೈಟ್ ಕರ್ಫ್ಯೂ ಬಗ್ಗೆ ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಸ್ಪಷ್ಟೀಕರಣ ನೀಡಿದ್ದಾರೆ.

dr sudhakar
ಸಚಿವ ಡಾ. ಸುಧಾಕರ್
author img

By

Published : Dec 31, 2020, 11:59 AM IST

ಬೆಂಗಳೂರು: ನೈಟ್ ಕರ್ಫ್ಯೂ ಬಗ್ಗೆ ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ, ಕಂದಾಯ ಸಚಿವ ಆರ್. ಆಶೋಕ್ ಅವರು ರಿಯಲ್ ನೈಟ್ ಕರ್ಫ್ಯೂ ಜಾರಿ ಅಗತ್ಯವಿದೆ ಅಂತ ಹೇಳಿದ್ದಾರಷ್ಟೇ ಎಂದು ನೈಟ್ ಕರ್ಫ್ಯೂ ಗೊಂದಲ ಹೇಳಿಕೆ ವಿಚಾರ ಕುರಿತು ಆರೋಗ್ಯ ಸಚಿವ ಡಾ. ಸುಧಾಕರ್ ಸ್ಪಷ್ಟೀಕರಣ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ: ರಿಯಲ್ ನೈಟ್ ಕರ್ಫ್ಯೂ ಜಾರಿ ಅಗತ್ಯವಿದೆ, ಸದ್ಯಕ್ಕೆ ಲಾಕ್​ಡೌನ್ ಮಾಡುವ ಪರಿಸ್ಥಿತಿ ‌ಇಲ್ಲ: ಸಚಿವ ಆರ್.ಅಶೋಕ್

ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಯುಕೆಯಿಂದ ಬಂದ ಪ್ರಯಾಣಿಕರಲ್ಲಿ 30 ಮಂದಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಅವರ ಸಂಪರ್ಕದಲ್ಲಿದ್ದ ಆರು ಜನರಿಗೀಗ ಕೊರೊನಾ ಪಾಸಿಟಿವ್ ಬಂದಿದೆ. ಏಳು ಜನಕ್ಕೆ ರೂಪಾಂತರಿ ವೈರಸ್ ಕಾಣಿಸಿಕೊಂಡಿದೆ. ಅಷ್ಟೂ ಮಂದಿಗೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪತ್ತೆ ಆಗದ 199 ಜನರಲ್ಲಿ 80 ಮಂದಿ ನಮ್ಮ ದೇಶದ ಪ್ರಜೆಗಳಲ್ಲ. ಅವರನ್ನು ಕೂಡಾ ಪತ್ತೆ ಹಚ್ಚಲು ಕ್ರಮ ತೆಗೆದುಕೊಂಡಿದ್ದೇವೆ ಎಂದರು.

ಸಿಎಂ ಸುದ್ದಿಗೋಷ್ಠಿಗೆ ಗೈರು:

ಇಂದು 12 ಗಂಟೆಗೆ ಮುಖ್ಯಮಂತ್ರಿಗಳ ಸುದ್ದಿಗೋಷ್ಠಿ ಇದೆ. ಆದ್ರೆ ನಾನು ಚಿಕ್ಕಬಳ್ಳಾಪುರಕ್ಕೆ ಹೋಗುವ ಕಾರಣದಿಂದ ಸುದ್ದಿಗೋಷ್ಠಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಅಲ್ಲಿ ಚುನಾವಣೆಯಲ್ಲಿ ಗೆದ್ದವರ ಜೊತೆ ಕಾರ್ಯಕ್ರಮ ಇದ್ದು, ಅದರಲ್ಲಿ ಪಾಲ್ಗೊಳ್ಳಲಿದ್ದೇನೆ ಎಂದು ಸಿಎಂ ಸುದ್ದಿಗೋಷ್ಠಿಗೆ ಗೈರಾಗುವ ಕುರಿತು ಸ್ಪಷ್ಟೀಕರಣ ನೀಡಿದರು.

ಸುರಕ್ಷಿತವಾಗಿ ಹೊಸ ವರ್ಷವನ್ನು ಆಚರಣೆ ಮಾಡಿ:

ಕೋವಿಡ್​​ ಹಿನ್ನೆಲೆ ಹೊಸ ವರ್ಷಾಚರಣೆ ಕೈ ಬಿಟ್ಟರೆ ಒಳ್ಳೆಯದು. ನಾನು ಒಬ್ಬ ಆರೋಗ್ಯ ಸಚಿವನಾಗಿ ಈ ಮಾತು ಹೇಳುತ್ತಿದ್ದೇನೆ. ನಿಮ್ಮೆಲ್ಲರ ಆರೋಗ್ಯ ಬಹಳ ಮುಖ್ಯ. ಗುಂಪು ಗುಂಪಾಗಿ ಸೇರಿ ಆಚರಣೆ ಮಾಡುವುದು ಬೇಡ. ಮಾಡಲೇಬೇಕು ಎಂದಿದ್ದರೆ ನಿಮ್ಮ-ನಿಮ್ಮ ಮನೆಗಳಲ್ಲೇ ಸುರಕ್ಷಿತವಾಗಿ ಆಚರಣೆ ಮಾಡಿ ಎಂದು ಸುಧಾಕರ್ ಮನವಿ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.