ಬೆಂಗಳೂರು: ಕನ್ನಡದ ವರನಟ ಡಾ. ರಾಜ್ಕುಮಾರ್ ಅವರ ಪ್ರತಿಮೆ ಸ್ಥಾಪಿಸಲು ಸಿದ್ಧವಾಗಿದ್ದ ಮಂಟಪವನ್ನು ಕಿಡಿಗೇಡಿಗಳು ಧ್ವಂಸಗೊಳಸಿರುವ ಘಟನೆ ವಿದ್ಯಾರಣ್ಯಪುರದ ಇಂದಿರಾ ಕ್ಯಾಂಟೀನ್ ಬಳಿ ನಡೆದಿದೆ.
ಡಾ. ರಾಜ್ಕುಮಾರ್ ಅವರ ಪ್ರತಿಮೆಯನ್ನು ಪ್ರತಿಷ್ಠಾಪಿಸಬೇಕಿದ್ದ ಜಾಗವನ್ನು ಕಿಡಿಗೇಡಿಗಳು ಹಾಳು ಮಾಡಿದ್ದಕ್ಕೆ ಸ್ಥಳೀಯರು ತೀವ್ರವಾಗಿ ಆಕ್ರೋಶ ಹೊರಹಾಕಿದ್ದಾರೆ.
ಅಣ್ಣವರ ಪ್ರತಿಮೆಯನ್ನು ಪ್ರತಿಷ್ಠಾಪಿಸಲು ಸ್ಥಳೀಯರು ಬಿಬಿಎಂಪಿಯಿಂದ ಜಾಗ ಪಡೆದು ಪುತ್ಥಳಿ ಇಡುವ ಮಂಟಪದ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಡಾ.ರಾಜ್ ಪುತ್ಥಳಿ ಸ್ಥಾಪನೆಯ ಕಾಮಗಾರಿ ಕೆಲಸ ಸಹ ಬಹುತೇಕ ಮುಗಿದಿತ್ತು. ನಿನ್ನೆ ಏಕಾಏಕಿ ಪುತ್ಥಳಿ ನಿರ್ಮಾಣ ಸ್ಥಳ ಧ್ವಂಸ ಮಾಡಲಾಗಿದೆ.