ಬೆಂಗಳೂರು : ಕನ್ನಡ ಚಿತ್ರರಂಗದಲ್ಲಿ ಡಾ. ರಾಜ್ಕುಮಾರ್ ಕಾಲದಿಂದಲೂ ತುಂಬಾ ಬೇಡಿಕೆಯ ಸಿನಿಮಾ ಫೋಟೋಗ್ರಾಫರ್ ಆಗಿದ್ದ ಜಿ ಎಸ್ ನಾರಾಯಣ ಸ್ವಾಮಿ ಇಹಲೋಕ ತ್ಯಜಿಸಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ 85 ವರ್ಷದ ನಾರಾಯಣಸ್ವಾಮಿ, ನಿನ್ನೆ ಸಂಜೆ ಕೊನೆಯುಸಿರೆಳೆದಿದ್ದಾರೆ. ವರನಟ ಡಾ.ರಾಜ್ ಕುಟುಂಬದ, ಏಕೈಕ ಪರಮಾಪ್ತ ಛಾಯಾಗ್ರಾಹಕರಾಗಿ ನಾರಾಯಣ ಸ್ವಾಮಿ ಕೆಲಸ ನಿರ್ವಹಿಸಿದ್ದರು. ಅಣ್ಣಾವ್ರ ವೈಯಕ್ತಿಕ ಬದುಕಿನಿಂದ ಹಿಡಿದು, ವೃತ್ತಿ ಬದುಕಿನ ತನಕ ರಹಸ್ಯಗಳ ಬಗ್ಗೆ ಸಾಕ್ಷಾತ್ ಪಾರ್ವತಮ್ಮನವರಿಗೇ ತಿಳಿಯದಂಥಾ ವಿಷಯಗಳು ಈ ನಾರಾಯಣ ಸ್ವಾಮಿಗಳಿಗೆ ತಿಳಿದಿತ್ತಂತೆ.

ಅಷ್ಟೇ ಅಲ್ಲ, ಡಾ. ರಾಜ್ ಅವರ ಯೋಗ ನಿರತ ಅಪರೂಪದ ಫೋಟೋಗಳನ್ನು ಮೊಟ್ಟ ಮೊದಲ ಬಾರಿ ಕ್ಲಿಕ್ಕಿಸಿದ ಖ್ಯಾತಿ ನಾರಾಯಣ ಸ್ವಾಮಿಗೆ ಸಲ್ಲುತ್ತದೆ. ಕನ್ನಡ ಚಿತ್ರರಂಗದ ಫೇಮಸ್ ಫೋಟೋಗ್ರಾಫರ್ ಆಗಿದ್ದ ಜಿ ಎಸ್ ನಾರಾಯಣಸ್ವಾಮಿ ಇನ್ನು ನೆನಪು ಮಾತ್ರ.