ETV Bharat / state

ಡಾ.ಪುನೀತ್​ ರಾಜ್​ಕುಮಾರ್​ ಹೆಸರಿನಲ್ಲಿ ಮುಂದಿನ ತಿಂಗಳಿನಿಂದ 'ಹೃದಯ ಜ್ಯೋತಿ' ಯೋಜನೆ ಜಾರಿ - ಈಟಿವಿ ಭಾರತ ಕನ್ನಡ

Dr.Puneeth Rajkumar Hridaya Jyoti project: ಡಾ.ಪುನೀತ್ ರಾಜ್​ಕುಮಾರ್ ಹೆಸರಿನಲ್ಲಿ 'ಹೃದಯ ಜ್ಯೋತಿ' ಎಂಬ ಹೊಸ ಯೋಜನೆಯನ್ನು ಮುಂದಿನ ತಿಂಗಳಿನಿಂದ ಜಾರಿಗೆ ತರುತ್ತಿದ್ದೇವೆ ಎಂದು ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​ ತಿಳಿಸಿದ್ದಾರೆ.

In the name of Dr Puneeth Rajkumar the Hridaya Jyoti project will be implemented from next month.
ಡಾ.ಪುನೀತ್​ ರಾಜ್​ಕುಮಾರ್​ ಹೆಸರಿನಲ್ಲಿ ಮುಂದಿನ ತಿಂಗಳಿನಿಂದ 'ಹೃದಯ ಜ್ಯೋತಿ' ಯೋಜನೆ ಜಾರಿ
author img

By ETV Bharat Karnataka Team

Published : Oct 31, 2023, 8:13 PM IST

ಡಾ.ಪುನೀತ್​ ರಾಜ್​ಕುಮಾರ್​ ಹೆಸರಿನಲ್ಲಿ 'ಹೃದಯ ಜ್ಯೋತಿ' ಯೋಜನೆ

ಬೆಂಗಳೂರು: ಇತ್ತೀಚೆಗೆ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿವೆ. ಅದರಲ್ಲೂ ಯುವಕರು ಹೆಚ್ಚು ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ಈ ರೀತಿ ಹೃದಯಾಘಾತಕ್ಕೆ ಒಳಗಾದವರಿಗೆ (Golden Hour) ಒಳಗೆ ಚಿಕಿತ್ಸೆ ಕೊಡುವುದು ಬಹಳ ಮುಖ್ಯ. ಹಾಗಾಗಿ, ರಾಜ್ಯ ಸರ್ಕಾರ ಕರ್ನಾಟಕ ರತ್ನ ಡಾ.ಪುನೀತ್ ರಾಜ್​ಕುಮಾರ್ ಹೆಸರಿನಲ್ಲೇ 'ಹೃದಯ ಜ್ಯೋತಿ' ಎಂಬ ಹೊಸ ಯೋಜನೆಯನ್ನು ಜಾರಿಗೆ ತರುತ್ತಿದೆ. ಈ ವಿಚಾರವನ್ನು ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​ ತಿಳಿಸಿದರು.

ಇಂದು ವಿಕಾಸಸೌಧದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, "ಮುಖ್ಯಮಂತ್ರಿ ಸಿದ್ದರಾಮಯ್ಯನವರು 'ಪುನೀತ್ ಹೃದಯ ಜ್ಯೋತಿ' ಯೋಜನೆ ಘೋಷಣೆ ಮಾಡಿದ್ದರು. ಅದರಂತೆ ಮುಂದಿನ ತಿಂಗಳಿನಿಂದ ಈ ಯೋಜನೆ ಜಾರಿಯಾಗಲಿದೆ. ತುರ್ತು ಇದ್ದಾಗ ಜನರು ಈ ಸೇವೆ ಬಳಸಬಹುದು. ಈ ಕಾರ್ಯಕ್ರಮಕ್ಕೆ ಮುಂದಿನ ತಿಂಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ" ಎಂದು ಮಾಹಿತಿ ನೀಡಿದರು.

"ಹೃದಯಾಘಾತ ಸಂದರ್ಭಗಳಲ್ಲಿ ಸಾಧ್ಯವಾದಷ್ಟು ಜೀವಗಳನ್ನು ಉಳಿಸಬೇಕು. ಗೋಲ್ಡನ್ ಅವರ್ ಒಳಗೆ ಸಕಾಲಕ್ಕೆ ಅವರಿಗೆ ಚಿಕಿತ್ಸೆ ದೊರೆಯಬೇಕು. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಮಹತ್ವದ ಹೆಜ್ಜೆಯಿಟ್ಟಿದೆ. ಹೃದಯಾಘಾತ ಆದಾಗ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗಬೇಕು. ಸರಿಯಾಗಿ ಚಿಕಿತ್ಸೆ ದೊರೆತರೆ ಸಾವಿನ ಪ್ರಮಾಣ ಕಡಿಮೆ ಮಾಡಬಹುದು. ರಾಜ್ಯದ 85 ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಸ್ಫೋಕ್​ ಕೇಂದ್ರಗಳನ್ನಾಗಿ ರೂಪಿಸುತ್ತಿದ್ದೇವೆ. ಜಯದೇವ ಹೃದ್ರೋಗ ಸಂಸ್ಥೆ ಹಾಗೂ ವೈದ್ಯಕೀಯ ಕಾಲೇಜು ಆಸ್ಪತ್ರೆಗಳು ಸೇರಿದಂತೆ ಒಟ್ಟು 16 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ 10 ಹಬ್​ಗಳನ್ನು ರಚಿಸಲಾಗಿದೆ" ಎಂದು ಹೇಳಿದರು.

"ತುಂಬಾ ಕ್ರಿಟಿಕಲ್ ಹಂತದಲ್ಲಿದ್ದರೆ ಸ್ಪೋಕ್​ ಕೇಂದ್ರಗಳಲ್ಲಿ ಉಚಿತವಾಗಿ ಟೆನೆಕ್ಟೆಪ್ಲೇಸ್ (Tenecteplase) ಇಂಜೆಕ್ಷನ್ ಕೊಡಲಾಗುತ್ತದೆ. ಈ ಇಂಜೆಕ್ಷನ್ ಹಠಾತ್ ಹೃದಯಾಘಾತ ಆಗುವುದನ್ನು ತಡೆಯುವಲ್ಲಿ ಪರಿಣಾಮಕಾರಿಯಾಗಿದೆ. ಹಾಗಾಗಿ, ಕ್ರಿಟಿಕಲ್ ಹಂತದಲ್ಲಿ ಇರುವವರಿಗೆ ತಕ್ಷಣ ಹಾರ್ಟ್ ಅಟ್ಯಾಕ್ ಆಗದಂತೆ ನೋಡಿಕೊಳ್ಳುವಲ್ಲಿ ಈ ಚಿಕಿತ್ಸೆ ಸಹಕಾರಿಯಾಗಲಿದೆ. ನಂತರ ಜಿಲ್ಲಾ ಅಥವಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಬಹುದು" ಎಂದು ವಿವರಿಸಿದರು.

"ಅಧ್ಯಯನದ ಪ್ರಕಾರ, ಹೃದಯಾಘಾತಕ್ಕೆ ಒಳಗಾಗುತ್ತಿರುವವರು ಶೇ.35ರಷ್ಟು ಮಂದಿ 40ರ ಆಸುಪಾಸಿನ ವಯಸ್ಸಿನವರು ಎಂಬುದು ಕಳವಳಕಾರಿ ಸಂಗತಿ. ಇಂತಹ ಸಂದರ್ಭದಲ್ಲಿ ಜನಸಾಮಾನ್ಯರ ನೆರವಿಗೆ ಧಾವಿಸುವುದು ಆರೋಗ್ಯ ಸಚಿವನಾಗಿ ನನ್ನ ಆದ್ಯ ಕರ್ತವ್ಯ ಎಂದು ನಾನು ಭಾವಿಸಿದ್ದೇನೆ. ಪುನೀತ್ ರಾಜ್​ಕುಮಾರ್ ಅವರ ಹೆಸರಿನಲ್ಲೇ ಕರ್ನಾಟಕ ರತ್ನ ಡಾ.ಪುನೀತ್ ರಾಜ್​ಕುಮಾರ್ ಹೃದಯ ಜ್ಯೋತಿ ಯೋಜನೆಯನ್ನು ನಾವು ಅನುಷ್ಠಾನಕ್ಕೆ ತರುತ್ತಿದ್ದೇವೆ. ಎರಡು ರೀತಿಯಲ್ಲಿ ಕಾರ್ಯಕ್ರಮ ಜಾರಿಗೆ ತರಲಾಗುತ್ತಿದೆ. ಹಬ್ ಆ್ಯಂಡ್ ಸ್ಪೋಕ್​ ಮಾದರಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಎಇಡಿ ಸಾಧನಗಳನ್ನು ಅಳವಡಿಸುವುದು. ಹಬ್​ ಆ್ಯಂಡ್ ಸ್ಪೋಕ್​ ಕೇಂದ್ರಗಳ ಮಾದರಿ, ಹಠಾತ್ ಹೃದಯಾಘಾತಗಳನ್ನು ತಡೆಯುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ" ಎಂದರು.

"ಯಾರಿಗೆ ಎದೆನೋವು ಕಾಣಿಸಿಕೊಂಡರೂ, ಅವರು ನಮ್ಮ ಸ್ಫೋಕ್​ ಕೇಂದ್ರಗಳಿಗೆ ಭೇಟಿ ನೀಡಿದರೆ, ತಕ್ಷಣ ಇಸಿಜಿ ಮಾಡಲಾಗುತ್ತದೆ. AI ತಂತ್ರಜ್ಞಾನದ ಮೂಲಕ ಅವರ ಪರಿಸ್ಥಿತಿ ಕ್ರಿಟಿಕಲ್ ಇದೆಯಾ, ಇಲ್ವಾ? ಅನ್ನೋದನ್ನು ಸ್ಥಳದಲ್ಲಿಯೇ ನಾಲ್ಕರಿಂದ ಐದು ನಿಮಿಷದೊಳಗೆ ಪತ್ತೆ ಹಚ್ಚಲಾಗುತ್ತದೆ. ಟ್ರಿಕೋಗ್​ ಸಂಸ್ಥೆಯವರ AI ತಂತ್ರಜ್ಞಾನದ ಸಹಾಯ ಪಡೆದು ಕ್ರಿಟಿಕಲ್ ಅಥವಾ ನಾನ್ ಕ್ರಿಟಿಕಲ್ ಅನ್ನೋದನ್ನು ಪತ್ತೆ ಹಚ್ಚುವ ವ್ಯವಸ್ಥೆ ಕಲ್ಪಿಸಲಾಗಿದೆ" ಎಂದು ತಿಳಿಸಿದರು.

ಯಾರು ಕ್ರಿಟಿಕಲ್ ಹಂತದಲ್ಲಿದ್ದಾರೆ, ಅವರಿಗೆ SPOKE ಕೇಂದ್ರಗಳಲ್ಲೇ ಅಂದ್ರೆ ತಾಲೂಕು ಆಸ್ಪತ್ರೆಗಳಲ್ಲೇ ಉಚಿತವಾಗಿ Tenecteplase ಇಂಜೆಕ್ಷನ್​ ಕೊಡಲಾಗುತ್ತದೆ. ಈ ಇಂಜೆಕ್ಷನ್ ಹಠಾತ್ ಹೃದಯಾಘಾತ ಆಗುವುದನ್ನು ತಡೆಯುವಲ್ಲಿ ಅತ್ಯಂತ ಪರಿಣಾಮಕಾರಿ. ಹೀಗಾಗಿ ಕ್ರಿಟಿಕಲ್ ಹಂತದಲ್ಲಿ ಇರುವವರಿಗೆ ತಕ್ಷಣಕ್ಕೆ ಹಾರ್ಟ್ ಅಟ್ಯಾಕ್ ಆಗದಂತೆ ನೋಡಿಕೊಳ್ಳುವಲ್ಲಿ ಈ ಚಿಕಿತ್ಸೆ ಸಹಕಾರಿಯಾಗಲಿದೆ. ಒಂದು Tenecteplase ಇಂಜೆಕ್ಷನ್​ಗೆ ಖಾಸಗಿ ಆಸ್ಪತ್ರೆಗಳಲ್ಲಿ 30 ರಿಂದ 45 ಸಾವಿರ ಚಾರ್ಜ್ ಮಾಡ್ತಿದ್ದಾರೆ. ಆದರೆ, ನಮ್ಮ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಇಂಜೆಕ್ಷನ್ ಅನ್ನು ಉಚಿತವಾಗಿ ನೀಡಲು ನಿರ್ಧರಿಸಿದ್ದೇವೆ" ಎಂದು ಹೇಳಿದರು.

"ತಾಲೂಕು ಅಥವಾ ಜಿಲ್ಲಾಸ್ಪತ್ರೆಯ Spoke ಕೇಂದ್ರಗಳಲ್ಲಿ ಚಿಕಿತ್ಸೆ ಪಡೆದ ನಂತರ ಹೆಚ್ಚಿನ ಚಿಕಿತ್ಸೆಗೆ ನಾವು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ Hub ಕೇಂದ್ರಗಳಿಗೆ ಆಂಬ್ಯುಲೆನ್ಸ್ ಸಹಾಯದೊಂದಿಗೆ ಕಳುಹಿಸಿಕೊಡುತ್ತೇವೆ. ಅಲ್ಲಿ ರೋಗಿಗಳಿಗೆ ಹೆಚ್ಚಿನ ವೈದ್ಯಕೀಯ ಸೇವೆಯನ್ನು ಕಲ್ಪಿಸಲಾಗುತ್ತದೆ. ಆಂಜಿಯೋಗ್ರಾಮ್ ಅಥವಾ ಆ್ಯಂಜಿಯೋಪ್ಲ್ಯಾಸ್ಟಿ, ಸೇರಿದಂತೆ ಉನ್ನತ ಮಟ್ಟದ ಹೃದಯ ಚಿಕಿತ್ಸೆಯನ್ನು ಈ hub ಕೇಂದ್ರಗಳಲ್ಲಿ ಪಡೆಯಬಹುದು" ಎಂದರು.

"ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ Hubಗಳಲ್ಲೂ ಕೂಡ ಬಿಪಿಎಲ್ ಕಾರ್ಡುದಾರರಿಗೆ ಉಚಿತ ಚಿಕಿತ್ಸೆ ದೊರೆಯಲಿದೆ. APL ಕಾರ್ಡುದಾರರು ನಮ್ಮ ಆರೋಗ್ಯ ಕರ್ನಾಟಕ ಆಯುಷ್ಮಾನ್ ಭಾರತ್ ಹೆಲ್ತ್ ಕಾರ್ಡ್ ಅಡಿಯಲ್ಲಿ ಉಚಿತ ಚಿಕಿತ್ಸೆ ಪಡೆಯಬಹುದು. ಜಯದೇವಾ ಹೃದ್ರೋಗ ಸಂಸ್ಥೆಯ ಬೆಂಗಳೂರು, ಮೈಸೂರು ಮತ್ತು ಕಲಬುರಗಿ ಆಸ್ಪತ್ರೆಗಳ ಮೂರು ಹಬ್​ಗಳ ವ್ಯಾಪ್ತಿಗೆ 45 spoke ಕೇಂದ್ರಗಳನ್ನು ಸಂಪರ್ಕಿಸಲಾಗಿದೆ. ಇವುಗಳಲ್ಲಿ 35 ತಾಲೂಕು ಆಸ್ಪತ್ರೆಗಳು ಮತ್ತು 10 ಜಿಲ್ಲಾಸ್ಪತ್ರೆಗಳು ಸೇರಿವೆ" ಎಂದರು.

ನಮ್ಮ ವೈದ್ಯಕೀಯ ಕಾಲೇಜು ಆಸ್ಪತ್ರೆಗಳು ಮತ್ತು ಕೆಲವು ಖಾಸಗಿ ವೈದ್ಯಕೀಯ ಸಂಸ್ಥೆಗಳ ಸಹಕಾರದಲ್ಲಿ 13 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಒಳಗೊಂಡ 7 ಹಬ್​ಗಳನ್ನು ರಚಿಸಿದ್ದೇವೆ. ಇವುಗಳ ವ್ಯಾಪ್ತಿಗೆ 40 spoke ಕೇಂದ್ರಗಳನ್ನು ಲಿಂಕ್ ಮಾಡಲಾಗಿದೆ. ಇದರಲ್ಲಿ 34 ತಾಲೂಕು ಮತ್ತು 6 ಜಿಲ್ಲಾಸ್ಪತ್ರೆಗಳು ಸೇರಿವೆ. ಈ ಕೇಂದ್ರಗಳ ಸಂಪೂರ್ಣ ವಿವರ ಹೀಗಿದೆ.

ದಕ್ಷಿಣ ಕನ್ನಡ ಹಬ್: Yenepoya hospital/KMC manipal/father muller ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು.

Spoke ಕೇಂದ್ರಗಳು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಸ್ಪತ್ರೆ, ಸುಳ್ಯ, ಬೆಳ್ತಂಗಡಿ, ಕುಂದಾಪುರ, ಕಾರ್ಕಳ ತಾಲೂಕು ಆಸ್ಪತ್ರೆ.

ಶಿವಮೊಗ್ಗ ಹಬ್: sahyadri narayana hospital/SIMS ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು.

Spoke ಕೇಂದ್ರಗಳು: ಸಾಗರ, ತೀರ್ಥಹಳ್ಳಿ, ಸೊರಬ, ಕಡೂರು, ಕೊಪ್ಪ, ತರಿಕೆರೆ ತಾಲೂಕು ಆಸ್ಪತ್ರೆಗಳು.

ದಾವಣಗೆರೆ ಹಬ್: NH shamanuru ShivaShankarappa institute/Basaveswara medical college ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು.

Spoke ಕೇಂದ್ರಗಳು: ಹರಿಹರ, ಜಗಳೂರು, ಹಾವೇರಿ, ಶಿಗ್ಗಾವ್, ಚಳ್ಳಕೆರೆ ತಾಲೂಕು ಆಸ್ಪತ್ರೆಗಳು ಮತ್ತು ಚಿತ್ರದುರ್ಗ ಜಿಲ್ಲಾಸ್ಪತ್ರೆ.

ಬಳ್ಳಾರಿ ಹಬ್: VIMS ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ.

Spoke ಕೇಂದ್ರಗಳು: ಸಿರಗುಪ್ಪ, ಕೂಡ್ಲಗಿ, ಹೊಸಪೇಟೆ, ಹೆಚ್.ಬಿ ಹಳ್ಳಿ ತಾಲೂಕು ಆಸ್ಪತ್ರೆಗಳು.

ಧಾರವಾಡ ಹಬ್: SDM Narayana Heart center/ KIMS Hubli ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ.

Spoke ಕೇಂದ್ರಗಳು: ಧಾರವಾಡ ಜಿಲ್ಲಾಸ್ಪತ್ರೆ, ಕುಂದಗೋಳ, ಯಲ್ಲಾಪುರ, ಹಳಿಯಾಳ, ನರಗುಂದ, ಶಿರಹಟ್ಟಿ ತಾಲೂಕು ಆಸ್ಪತ್ರೆಗಳು.

ಬಾಗಲಕೋಟೆ ಹಬ್: S Nijalingappa medical college hospital ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ.

Spoke ಕೇಂದ್ರಗಳು: ಬಾಗಲಕೋಟೆ ಜಿಲ್ಲಾಸ್ಪತ್ರೆ, ಮೂದೋಳ್, ಹುನುಗುಂದ, ಯಲಬುರ್ಗಾ, ಕುಷ್ಟಗಿ ತಾಲೂಕು ಆಸ್ಪತ್ರೆಗಳು.

ಬೆಳಗಾವಿ ಹಬ್: KLE prabhakar kore hospital ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ.

Spoke ಕೇಂದ್ರಗಳು: ಬೈಲಹೊಂಗಲ, ಸವದತ್ತಿ, ರಾಮದುರ್ಗಾ, ಗೋಕಾಕ್, ನಿಪ್ಪಾಣಿ, ಹುಕ್ಕೇರಿ, ಖಾನಾಪುರ ತಾಲೂಕು ಆಸ್ಪತ್ರೆಗಳು.

ಬೆಂಗಳೂರು ಹಬ್: ಜಯದೇವಾ ಹೃದ್ರೋಗ ಸಂಸ್ಥೆ ಬೆಂಗಳೂರು.

Spoke ಕೇಂದ್ರಗಳು: ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ ಜಿಲ್ಲಾಸ್ಪತ್ರೆಗಳು. ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ, ಕನಕಪುರ, ಮಾಗಡಿ, ತಾಲೂಕು ಆಸ್ಪತ್ರೆಗಳು. ಚಿಂತಾಮಣಿ, ಕೊರಟಗೆರೆ, ಶಿರಾ, ಮಧುಗಿರಿ, ಮಾಲೂರು, ಶ್ರೀನಿವಾಸಪುರ ಸರ್ಕಾರ ಆಸ್ಪತ್ರೆಗಳು.

ಮೈಸೂರು ಹಬ್: ಜಯದೇವಾ ಆಸ್ಪತ್ರೆ, ಮೈಸೂರು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ.

Spoke ಕೇಂದ್ರಗಳು: ಮಂಡ್ಯ, ಹಾಸನ, ಮಡಿಕೆರಿ, ಚಾಮರಾಜನಗರ ಜಿಲ್ಲಾಸ್ಪತ್ರೆಗಳು. ಕೆ.ಆರ್ ನಗರ, ಹುಣಸೂರು, ಪಿರ್ಯಾಪಟ್ಟಣ, ಹೆಚ್.ಡಿ ಕೋಟೆ, ನಂಜನಗೂಡು, ಟಿ. ನರಸಿಪುರಾ, ತಾಲೂಕು ಆಸ್ಪತ್ರೆಗಳು. ಚೆನ್ನರಾಯಪಟ್ಟಣ, ಎಸ್.ಆರ್ ಪಾಟ್ನಾ, ಕೆ.ಆರ್ ಪೇಟೆ, ಪಾಂಡವಪುರ, ಹೊಳೆನರಸಿಪುರ ಸರ್ಕಾರಿ ಆಸ್ಪತ್ರೆಗಳು.

ಕಲಬುರಗಿ ಹಬ್: ಜಯದೇವಾ ಆಸ್ಪತ್ರೆ, ಕಲಬುರಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ.

Spoke ಕೇಂದ್ರಗಳು: ಬೀದರ್, ಯಾದಗಿರಿ ಜಿಲ್ಲಾಸ್ಪತ್ರೆಗಳು. ಅಳಂದಾ, ಅಫ್ಜಲ್ ಪುರ, ಜೇವರ್ಗಿ, ಸೇಡಂ, ಚಿತ್ತಾಪುರ, ಚಿಂಚೋಳಿ, ಸಿಂದಗಿ, ಹುಮನಾಬಾದ್, ಬಾಲ್ಕಿ, ಬಸವಕಲ್ಯಾಣ, ಶೋಲಾಪುರ್, ಶಾಹಾಪುರ, ದೇವದುರ್ಗಾ ತಾಲೂಕು ಆಸ್ಪತ್ರೆಗಳು.

ರಾಜ್ಯದ 31 ಜಿಲ್ಲೆಗಳ ವ್ಯಾಪ್ತಿಯಲ್ಲಿ 10 ಹಬ್ಸ್, ಹಾಗೂ 85 ತಾಲೂಕು ಮತ್ತು ಜಿಲ್ಲಾಸ್ಪತ್ರೆಗಳಲ್ಲಿ spoke ಕೇಂದ್ರಗಳನ್ನು ರೂಪಿಸುವ ಮೂಲಕ, ಹಠಾತ್ ಹೃದಯಘಾತಕ್ಕೆ ಒಳಗಾಗುವವರ ಜೀವ ಉಳಿಸುವಂತಹ ಒಂದು ಪರಿಣಾಮಕಾರಿ ಚಿಕಿತ್ಸಾ ಕಾರ್ಯಕ್ರಮವನ್ನು ಪುನೀತ್ ರಾಜ್​ಕುಮಾರ್ ಹೆಸರಿನಲ್ಲಿ ಜಾರಿಗೆ ತರುತ್ತಿದ್ದೇವೆ ಎಂದು ವಿವರಿಸಿದರು.

"ಪುನೀತ್ ರಾಜ್​ಕುಮಾರ್ ಹೃದಯಜ್ಯೋತಿ ಕಾರ್ಯಕ್ರಮದ ಇನ್ನೊಂದು ಭಾಗವಾಗಿ 2 ಕೋಟಿ ವೆಚ್ಚದಲ್ಲಿ AED - Automated External Defibrillator ಸಾಧನಗಳನ್ನು ಅಳವಡಿಸಲು ನಿರ್ಧರಿಸಿದ್ದೇವೆ. ಬಸ್ ಸ್ಟಾಂಡ್, ರೈಲ್ಬೇ ಸ್ಟೇಷನ್ಸ್, ಏರ್ಪೋರ್ಟ್ಸ್, ವಿಧಾನ ಸೌಧ, ಕೋರ್ಟ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸ್ವಯಂ ಚಾಲಿತ ಡಿಫಿಬ್ರಿಲೇಟರ್​ಗಳನ್ನು ಅಳವಡಿಸುತ್ತೇವೆ. ಬೆಂಗಳೂರು ಹೊರತಾಗಿಯೂ ರಾಜ್ಯದ ಪ್ರಮುಖ ನಗರಗಳ ಸಾರ್ವಜನಿಕ ಸ್ಥಳಗಳಲ್ಲಿ, ಹೆಚ್ಚು ಜನಸಂದಣಿ ಇರುವಂತ ಜಾಗಗಳಲ್ಲಿ AED ಸಾಧನಗಳನ್ನು ಇಡುತ್ತೇವೆ. 50 AED ಡಿಫಿಬ್ರಿಲೇಟರ್​ಗಳನ್ನು ರಾಜ್ಯಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಲು ಯೋಜಿಸಲಾಗಿದೆ. ಒಂದು AED ಸಾಧನ ಖರೀದಿಗೆ 1.10 ಲಕ್ಷ ರೂ.ವರೆಗೆ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಈ ಸಾಧನಗಳು ಖರೀದಿ ಪ್ರಗತಿಯಲ್ಲಿದೆ" ಎಂದು ಹೇಳಿದರು.

ಕೋವಿಡ್ ಬಂದವರು ಹೆಚ್ಚು ಶ್ರಮದ ಕೆಲಸ ಮಾಡಬಾರದು ಎಂಬ ಕೇಂದ್ರ ಆರೋಗ್ಯ ಸಚಿವರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, "ಯಾವ ಆಧಾರದ ಮೇಲೆ ಈ ಮಾತು ಹೇಳಿದ್ದಾರೋ ಗೊತ್ತಿಲ್ಲ. ಇದಕ್ಕೆ ಯಾವ ವೈಜ್ಞಾನಿಕ ಆಧಾರ ಇಲ್ಲ, ನನಗೂ ಕೋವಿಡ್ ಬಂದಿತ್ತು. ಕೋವಿಡ್ ಬಂದವರು ಶ್ರಮದ ಕೆಲಸ ಮಾಡಬಾರದು ಎಂಬುದಕ್ಕೆ ಯಾವುದೇ ಆಧಾರ ಇಲ್ಲ ಎಂದರು. ಅಲ್ಲದೇ, ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯರು ಹಾಗೂ ಟೆನ್ನಿಷಿಯನ್​ಗಳನ್ನು ಶೀಘ್ರವೇ ಭರ್ತಿ ಮಾಡಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: ಸುಮುಖಗೆ ಹಿಮಾಲಯದಲ್ಲಿ ಅಪ್ಪು ನಗುವಿನ ದರ್ಶನ; ಭಾವುಕರಾದ ನಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.