ETV Bharat / state

ರಾಜ್ಯಸಭೆಗೆ ಅಚ್ಚರಿಯ ಆಯ್ಕೆಯಾದ ಡಾ. ನಾರಾಯಣ ಯಾರು ಗೊತ್ತಾ?

author img

By

Published : Nov 17, 2020, 6:58 PM IST

ರಾಜ್ಯ ಬಿಜೆಪಿ ನಾಯಕರು ಸಿದ್ಧಪಡಿಸಿ ಕಳಿಸಿದ್ದ ಮೂವರು ಅಭ್ಯರ್ಥಿಗಳ ಹೆಸರನ್ನು ತಿರಸ್ಕರಿಸಿದ ಹೈಕಮಾಂಡ್ ಪಕ್ಷದ ತಳಮಟ್ಟದ ಮತ್ತೊಬ್ಬ ಕಾರ್ಯಕರ್ತರಿಗೆ ಅವಕಾಶ ನೀಡಿದೆ..

DR. Narayana Surprise choice for the Rajya Sabha
ರಾಜ್ಯಸಭೆಗೆ ಅಚ್ಚರಿಯ ಆಯ್ಕೆಯಾದ ಡಾ. ನಾರಾಯಣ

ಬೆಂಗಳೂರು : ಅಶೋಕ್ ಗಸ್ತಿ ನಿಧನದಿಂದ ತೆರವಾಗಿರುವ ರಾಜ್ಯಸಭೆ ಸ್ಥಾನಕ್ಕೆ ಅಚ್ಚರಿಯ ಆಯ್ಕೆಯಾಗಿರುವ ಡಾ. ಕೆ ನಾರಾಯಣ್ ಅಪ್ಪಟ ಆರ್​ಎಸ್​ಎಸ್​ ಮೂಲದವರಾಗಿದ್ದು, ಮುದ್ರಣ ಕ್ಷೇತ್ರದ ಹಿನ್ನೆಲೆ ಹೊಂದಿದ್ದಾರೆ.

ಸಾಕಷ್ಟು ಬಿಜೆಪಿ ನಾಯಕರು ಆಕಾಂಕ್ಷಿಗಳಾಗಿರುವ ನಡುವೆಯೂ ಬಿಜೆಪಿ ಹೈಕಮಾಂಡ್ ಮತ್ತೊಮ್ಮೆ ಅಚ್ಚರಿಯ ಅಭ್ಯರ್ಥಿಯನ್ನು ಪ್ರಕಟಿಸಿದ್ದು, ಬೆಂಗಳೂರು ವಾಸಿಯಾಗಿರುವ ನಾರಾಯಣ್ ರಾಜಕೀಯ ಕ್ಷೇತ್ರಕ್ಕೆ ಈಗಲೂ ಅಪರಿಚಿತರು.

ಮಂಗಳೂರು ಮೂಲದ ನಾರಾಯಣ್ (68) ಬೆಂಗಳೂರಿನಲ್ಲಿ ಸ್ಪಾನ್ ಪ್ರಿಂಟರ್ಸ್ ಎಂಬ ಪ್ರಕಾಶನ ಸಂಸ್ಥೆ ಹೊಂದಿದ್ದಾರೆ. ದೇವಾಂಗ ಸಮುದಾಯವನ್ನು ಪ್ರತಿನಿಧಿಸುವ ಇವರು ಮುದ್ರಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. 1981 ರಲ್ಲಿಯೇ ಜಪಾನಿನಿಂದ ಮಲ್ಟಿ ಕಲರ್ ಪ್ರಿಂಟಿಂಗ್ ತಂತ್ರಜ್ಞಾನವನ್ನು ಬೆಂಗಳೂರಿಗೆ ತಂದು ಪರಿಚಯಿಸಿದ ಹೆಗ್ಗಳಿಕೆ ಇವರದ್ದಾಗಿದೆ.

ಅತ್ಯಂತ ಪ್ರಮುಖವೆಂದರೆ ಸಂಸ್ಕೃತ ಭಾಷೆಯ ಏಕೈಕ ಮಾಸಿಕ ಸಂಭಾಷಣ ಸಂದೇಶ ಪತ್ರಿಕೆಯನ್ನು ಎದುರಿಸುತ್ತಿರುವ ಸಂಸ್ಥೆ ಎಂಬ ಹೆಗ್ಗಳಿಕೆಯೂ ಇವರ ಸಂಸ್ಥೆಗಿದೆ. ನಾರಾಯಣ್ ಅವರು ತುಳು ಪತ್ರಿಕೆಯೊಂದಕ್ಕೆ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಅತ್ಯಂತ ಪ್ರಮುಖವಾಗಿ ಸಂಘ ಪರಿವಾರಕ್ಕಾಗಿ ಇವರು ನೀಡಿದ ಕೊಡುಗೆ ಹಾಗೂ ಸಲ್ಲಿಸಿದ ಸೇವೆಯನ್ನು ಅತ್ಯಂತ ಪ್ರಮುಖವಾಗಿ ಪರಿಗಣಿಸಿ, ತೆರವಾಗಿರುವ ರಾಜ್ಯಸಭೆ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ. ತಮ್ಮ ಮುದ್ರಣಾಲಯದಲ್ಲಿ ಬಿಜೆಪಿ ಹಾಗೂ ಸಂಘ ಪರಿವಾರಕ್ಕೆ ಸಂಬಂಧಿಸಿದ ಕರಪತ್ರವನ್ನು ಮುದ್ರಿಸುತ್ತಿದ್ದ ವ್ಯಕ್ತಿಯನ್ನು ಗುರುತಿಸಿ ಪಕ್ಷದ ಹೈಕಮಾಂಡ್ ಟಿಕೆಟ್ ನೀಡಿದೆ.

ರಾಜ್ಯ ಬಿಜೆಪಿ ನಾಯಕರು ಸಿದ್ಧಪಡಿಸಿ ಕಳಿಸಿದ್ದ ಮೂವರು ಅಭ್ಯರ್ಥಿಗಳ ಹೆಸರನ್ನು ತಿರಸ್ಕರಿಸಿದ ಹೈಕಮಾಂಡ್ ಪಕ್ಷದ ತಳಮಟ್ಟದ ಮತ್ತೊಬ್ಬ ಕಾರ್ಯಕರ್ತರಿಗೆ ಅವಕಾಶ ನೀಡಿದೆ. ಕಳೆದ ಹಲವು ವರ್ಷಗಳಿಂದ ಆರ್​ಎಸ್​ಎಸ್ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿರುವ ನಾರಾಯಣ್ ಸದ್ಯ ನೇಕಾರ ಪ್ರಕೋಷ್ಠದ ಸಹ ಸಂಚಾಲಕರಾಗಿದ್ದಾರೆ.

ಮಂಗಳೂರಿನ ಕೊರಗಪ್ಪ ಹಾಗೂ ಲಕ್ಷ್ಮಿ ದಂಪತಿಗೆ 1952 ರಲ್ಲಿ ಇವರು ಜನಿಸಿದರು. ಪ್ರಾಥಮಿಕ ಮಾಧ್ಯಮಿಕ ಹಾಗೂ ಕಾಲೇಜು ಶಿಕ್ಷಣವನ್ನು ಮಂಗಳೂರಿನಲ್ಲಿ ಪಡೆದ ಅವರು ಉದ್ಯೋಗ ನಿಮಿತ್ತ ಬೆಂಗಳೂರಿಗೆ 1971 ರಲ್ಲಿ ಆಗಮಿಸಿದರು. ಅಂದಿನಿಂದಲೂ ಮುದ್ರಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು, ಕಳೆದ ಐವತ್ತು ವರ್ಷಗಳಿಂದ ಮ್ಯಾಗಜಿನ್ ಮುದ್ರಣ ಹಾಗೂ ಪ್ರಕಟಣೆ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

1981 ರಲ್ಲಿ ವಿವಾಹವಾಗಿರುವ ಇವರು, ನಾಲ್ವರು ಮಕ್ಕಳನ್ನು ಹೊಂದಿದ್ದಾರೆ. ಕುಟುಂಬ ಸಮೇತರಾಗಿ ಬೆಂಗಳೂರಿನ ಬನಶಂಕರಿ ಎರಡನೇ ಹಂತದ ಕರೆಸಂದ್ರದಲ್ಲಿ ವಾಸವಾಗಿದ್ದಾರೆ. ಸಾಕಷ್ಟು ಪ್ರಶಸ್ತಿಗಳು ಹಾಗೂ ಗೌರವ ಸನ್ಮಾನ ಅವರನ್ನು ಅರಸಿ ಬಂದಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.