ETV Bharat / entertainment

MYTH FX: ನಟ ಕಮಲ್ ಕನಸಿನ ಸ್ಟುಡಿಯೋ ಉದ್ಘಾಟಿಸಿದ ಓಂ ಸಾಯಿಪ್ರಕಾಶ್, ಉಮೇಶ್ ಬಣಕಾರ್ - MYTH FX STUDIO

'ದಿ ಸೂಟ್' ಚಿತ್ರ ನಟ ಕಮಲ್ ಕನ್ನಡ ಚಿತ್ರರಂಗಕ್ಕೆ ಅನುಕೂಲವಾಗುವಂತಹ "MYTH FX" ಎಂಬ ಸ್ಟುಡಿಯೋವನ್ನು ಶುರು ಮಾಡಿದ್ದಾರೆ.

MYTH FX Inauguration program
MYTH FX ಉದ್ಘಾಟನಾ ಕಾರ್ಯಕ್ರಮ (Photo: ETV Bharat)
author img

By ETV Bharat Entertainment Team

Published : Nov 20, 2024, 7:03 PM IST

ಕನ್ನಡ ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳು ಹಾಗೂ ಕಂಟೆಂಟ್ ಓರಿಯೆಂಟೆಡ್​ ಚಿತ್ರಗಳ ನಿರ್ಮಾಣ ಹೆಚ್ಚಾಗುತ್ತಿದೆ. ಈ ಕಾರಣಕ್ಕೆ 'ದಿ ಸೂಟ್' ಚಿತ್ರ ನಟ ಕಮಲ್ ಕನ್ನಡ ಚಿತ್ರರಂಗಕ್ಕೆ ಅನುಕೂಲವಾಗುವಂತಹ "MYTH FX" ಎಂಬ ಸ್ಟುಡಿಯೋವನ್ನು ಶುರು ಮಾಡಿದ್ದಾರೆ. ಬನ್ನೇರುಘಟ್ಟ ರಸ್ತೆಯ ಅರಕೆರೆಯಲ್ಲಿರುವ ಈ ನೂತನ ಸ್ಟುಡಿಯೋವನ್ನು ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್ ಹಾಗೂ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಉದ್ಘಾಟಿಸಿ ಶುಭ ಕೋರಿದರು. ನಂತರ ಗಣ್ಯರು ಹಾಗೂ ಸ್ಟುಡಿಯೋ ಮುಖ್ಯಸ್ಥರು ಮಾತನಾಡಿದರು.

ಮೊದಲು ಮಾತನಾಡಿದ "MYTH FX" ಸ್ಟುಡಿಯೋ ಮುಖ್ಯಸ್ಥ ಕಮಲ್, ನಾನು ವಿಡಿಯೋ ಕಾನ್ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದೆ. ನಾನು ಕವಿ ಕೂಡಾ ಹೌದು. ನನ್ನ ಎರಡು ಕವನ ಸಂಕಲನಗಳನ್ನು ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಹಾಗೂ ಗಾನಕೋಗಿಲೆ ಲತಾ ಮಂಗೇಶ್ಕರ್ ಬಿಡುಗಡೆಗೊಳಿಸಿದ್ದರು. ಆನಂತರ ನಟನಾಗುವ ಆಸೆ ಮೂಡಿತ್ತು. ಇತ್ತೀಚೆಗೆ ತೆರೆಕಂಡ "ದಿ ಸೂಟ್" ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸಿದ್ದೇನೆ. ಚಿತ್ರರಂಗಕ್ಕೆ ಅನುಕೂಲವಾಗುವಂತಹ ಏನಾದರೊಂದು ಕೆಲಸ ಮಾಡಬೇಕೆಂದು ನನಗೆ ಅನಿಸುತ್ತಲೇ ಇತ್ತು. ಆ ಸಮಯಕ್ಕೆ ನನಗೆ ಇಪ್ಪತ್ತಕ್ಕೂ ಅಧಿಕ ವರ್ಷಗಳ ಅನುಭವವಿರುವ ಲೋಕೇಶ್ ಹಾಗೂ ಮಾರುತಿ ಎಂಬ ನುರಿತ ತಂತ್ರಜ್ಞರು ಸಿಕ್ಕರು. ನಾವೆಲ್ಲಾ ಸೇರಿ ಈ "MYTH FX" ಸ್ಟುಡಿಯೋವನ್ನು ಆರಂಭ‌ ಮಾಡಿದ್ದೇವೆ. ನಿರ್ಮಾಪಕರಿಗೆ ಅನುಕೂಲವಾಗುವಂತಹ ಸ್ಟುಡಿಯೋ ಮಾಡಿರುವ ಖುಷಿಯಿದೆ ಎಂದು ತಿಳಿಸಿದರು.

MYTH FX Inauguration program
MYTH FX ಉದ್ಘಾಟನಾ ಕಾರ್ಯಕ್ರಮ (Photo: ETV Bharat)

ಇದನ್ನೂ ಓದಿ: ಭೈರತಿ ರಣಗಲ್​​​ನನ್ನು ಹೃದಯಕ್ಕೆ ತೆಗೆದುಕೊಂಡ್ರಿ, ಮಫ್ತಿ 2 ಬರಲಿದೆ: ಅಭಿಮಾನಿಗಳಿಗೆ ಶಿವಣ್ಣನ ವಿಶೇಷ ಧನ್ಯವಾದ

ಈ ಸ್ಟುಡಿಯೋ ತಂತ್ರಜ್ಞ ಲೋಕೇಶ್ ಮಾತನಾಡಿ, ನನಗೆ ಸುಮಾರು ಇಪ್ಪತ್ತೈದು ವರ್ಷಗಳಿಂದ ಚಲನಚಿತ್ರರಂಗದ ವಿವಿಧ ಆಯಾಮಗಳಲ್ಲಿ ಕೆಲಸ ಮಾಡಿರುವ‌ ಅನುಭವವಿದೆ. ಕಳೆದ ಒಂದು ವರ್ಷದಿಂದ ನಾವು ಈ ಸ್ಟುಡಿಯೋ ಕೆಲಸ ಆರಂಭಿಸಿದ್ದೇವೆ‌. ಸುಮಾರು ನೂರಕ್ಕೂ ಅಧಿಕ ತಂತ್ರಜ್ಞರು ನಮ್ಮ ಸ್ಟುಡಿಯೋದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಾವು ಕಾರ್ಯ ನಿರ್ವಹಿಸಿದ ಮೊದಲ ಚಿತ್ರ ಧ್ರುವ ಸರ್ಜಾ ಅಭಿನಯದ "ಮಾರ್ಟಿನ್". ಈಗ ರಮೇಶ್ ರೆಡ್ಡಿ ನಿರ್ಮಾಣದ, ಅರ್ಜುನ್ ಜನ್ಯ ನಿರ್ದೇಶನದ, ಶಿವರಾಜಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅಭಿನಯದ "45" ಚಿತ್ರದ ಕೆಲಸಗಳು ನಮ್ಮ‌ ಸ್ಟುಡಿಯೋದಲ್ಲೇ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: 'ಖುಷಿಯ ವಿಚಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದಿದೆ': ಸುಮಲತಾ ಅಂಬರೀಶ್​

ಮತ್ತೊಬ್ಬ ತಂತ್ರಜ್ಞ ಮಾರುತಿ ಸಹ ಸ್ಟುಡಿಯೋದ ಅನುಕೂಲತೆ ಬಗ್ಗೆ ಮಾತನಾಡಿದರು. ವಿತರಕ ರಾಜು ಉಪಸ್ಥಿತರಿದ್ದರು. ಕಮಲ್ ಹಾಗೂ ಸ್ನೇಹಿತರು ಆರಂಭಿಸಿರುವ "MYTH FX" ಸ್ಟುಡಿಯೋದಿಂದ ಕನ್ನಡ ನಿರ್ಮಾಪಕರಿಗೆ ಅನುಕೂಲವಾಗಲಿದೆ. ಅವರ ಈ ಪ್ರಯತ್ನ ಯಶಸ್ವಿಯಾಗಲಿ ಎಂದು ಅತಿಥಿಗಳಾಗಿ ಆಗಮಿಸಿದ್ದ ನಿರ್ಮಾಪಕ ಉಮೇಶ್ ಬಣಕಾರ್ ಹಾಗೂ ನಿರ್ದೇಶಕ ಓಂ ಸಾಯಿಪ್ರಕಾಶ್ ಹಾರೈಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.