ETV Bharat / state

ಹೋಂ ಐಸೋಲೇಷನ್ ವ್ಯವಸ್ಥೆ ಗಟ್ಟಿಗೊಳಿಸಿಕೊಳ್ಳುವಂತೆ ರಾಜ್ಯಕ್ಕೆ ಪ್ರಧಾನಿ ಸಲಹೆ: ಸಚಿವ ಸುಧಾಕರ್‌

10 ರಾಜ್ಯಗಳ ಸಿಎಂಗಳ ಜೊತೆ ಕೋವಿಡ್ ಸ್ಥಿತಿಗತಿ, ನಿಯಂತ್ರಣ ಕುರಿತು ಪ್ರಧಾನಿ ಚರ್ಚೆ ನಡೆಸಿ ಸಮಾಲೋಚನೆ ಮಾಡಿದ್ದಾರೆ. ನಮ್ಮ ರಾಜ್ಯದಿಂದ ಎರಡು ಬೇಡಿಕೆ ಇಟ್ಟಿದ್ದೇವೆ. ನಮ್ಮ ಹೋಂ ಐಸೋಲೇಷನ್ ವ್ಯವಸ್ಥೆ ಗಟ್ಟಿಗೊಳಿಸಿಕೊಳ್ಳುವಂತೆ ರಾಜ್ಯಕ್ಕೆ ಪ್ರಧಾನಿ ಸಲಹೆ ನೀಡಿದ್ದಾರೆ ಎಂದು ಸಚಿವ ಡಾ. ಸುಧಾಕರ್ ಹೇಳಿದ್ದಾರೆ.

dr k sudhakar
ಸಚಿವ ಡಾ. ಸುಧಾಕರ್
author img

By

Published : Apr 23, 2021, 2:05 PM IST

ಬೆಂಗಳೂರು: ರಾಜ್ಯದಿಂದ ಪ್ರಧಾನಿ ಮೋದಿ ಅವರಿಗೆ ಆಮ್ಲಜನಕ ಪೂರೈಕೆ ಮತ್ತು ರಮ್‌ಡೆಸಿವಿರ್ ಸರಬರಾಜು ಬೇಡಿಕೆ ಇರಿಸಿದ್ದು, ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಅದೇ ರೀತಿ ನಮ್ಮ ಹೋಂ ಐಸೋಲೇಷನ್ ವ್ಯವಸ್ಥೆ ಗಟ್ಟಿಗೊಳಿಸಿಕೊಳ್ಳುವಂತೆ ರಾಜ್ಯಕ್ಕೆ ಪ್ರಧಾನಿ ಸಲಹೆ ನೀಡಿದ್ದಾರೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದ್ದಾರೆ.

ಸಚಿವ ಡಾ. ಸುಧಾಕರ್

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಪಿಎಂ ಮೋದಿ ಜೊತೆಗಿನ ವಿಡಿಯೋ ಸಂವಾದ ಮುಕ್ತಾಯಗೊಂಡ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 10 ರಾಜ್ಯಗಳ ಸಿಎಂಗಳ ಜೊತೆ ಕೋವಿಡ್ ಸ್ಥಿತಿಗತಿ, ನಿಯಂತ್ರಣ ಕುರಿತು ಪ್ರಧಾನಿ ಚರ್ಚೆ ನಡೆಸಿ ಸಮಾಲೋಚನೆ ಮಾಡಿದ್ದಾರೆ. ಮೊದಲ ಅಲೆ ವೈರಾಣು ರೂಪಾಂತರಗೊಂಡಿದೆ. ಹಾಗಾಗಿ ಮೂರು ಪಟ್ಟು ವೇಗದ ಹರಡುವಿಕೆ ಕಂಡುಬಂದಿದೆ. ವಯೋಮಿತಿ ಕೂಡ ಬದಲಾಗಿದೆ. ಕಳೆದ ಬಾರಿ ಹಿರಿಯ ನಾಗರಿಕರಿಗೆ ಬರುತ್ತಿತ್ತು. ಆದರೆ ಈಗ ಮಧ್ಯ ವಯಸ್ಕರಿಗೂ ತಗುಲುತ್ತಿದೆ. ಈ ವೈರಾಣು ವಿರುದ್ಧ ಗೆಲ್ಲಲು ಹೋಂ ಐಸೊಲೇಷನ್ ಗಟ್ಟಿಯಾಗಬೇಕು. ಶೆ. 90ರಷ್ಟು ಜನಕ್ಕೆ ಆಸ್ಪತ್ರೆಯಲ್ಲಿ‌ ಚಿಕಿತ್ಸೆ ಅಗತ್ಯವಿಲ್ಲ. ಎಲ್ಲರೂ ಆಸ್ಪತ್ರೆಗೆ ದೌಡಾಯಿಸುತ್ತಿರುವ ಕಾರಣ ವೈದ್ಯಕೀಯ ಸಿಬ್ಬಂದಿಗೆ ಕಷ್ಟವಾಗಿದೆ. ಆಸ್ಪತ್ರೆ ಮೇಲೆ ಹೊರೆಯಾಗುತ್ತಿದೆ. ಹಾಗಾಗಿ ನಿಮ್ಮ ಹೋಂ ಐಸೊಲೇಷನ್ ವ್ಯವಸ್ಥೆ ಗಟ್ಟಿ ಮಾಡಿಕೊಳ್ಳಿ. ಟೆಲಿಕಾಲಿಂಗ್ ಮೂಲಕ ಉಪಚಾರ ನೀಡಿ, ‌ಚಿಕಿತ್ಸೆ ನೀಡಿ ಎಂದು ಪ್ರಧಾನಿ ಸಲಹೆ ನೀಡಿದ್ದಾರೆ ಎಂದರು.

ರಾಜ್ಯದ ಪರವಾಗಿ ಮುಖ್ಯಮಂತ್ರಿಗಳು ಎರಡು ಪ್ರಮುಖ ಬೇಡಿಕೆ ಇರಿಸಿದ್ದಾರೆ. ಈ ತಿಂಗಳ ಕೊನೆವರೆಗೂ ಸಾವಿರ ಟನ್ ಆಮ್ಲಜನಕ ಪೂರೈಕೆ ಮಾಡಬೇಕು. ಮೇ. 1ರಿಂದ 1,500 ಮೆಟ್ರಿಕ್ ಟನ್ ಸರಬರಾಜು ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಎರಡನೇಯದಾಗಿ ರಮ್‌ಡೆಸಿವಿರ್ ನಮ್ಮ ರಾಜ್ಯದಲ್ಲೇ ಉತ್ಪಾದನೆ ಆದರೂ ಕೂಡ ಅದು ಸಾಲುತ್ತಿಲ್ಲ. ಹಾಗಾಗಿ ತಕ್ಷಣ 2 ಲಕ್ಷ ವಯಲ್ ಕಳಿಸಿಕೊಡಲು ಬೇಡಿಕೆ ಇರಿಸಿದ್ದಾರೆ ಎಂದು ಮಾಹಿತಿ ನೀಡಿದರು.

ನಮ್ಮ ಬೇಡಿಕೆ ಮತ್ತು ನಾವು ಕೈಗೊಂಡಿರುವ ಕ್ರಮಗಳ ಬಗ್ಗೆ ಸಿಎಂ ಯಡಿಯೂರಪ್ಪ ಸಮಗ್ರವಾಗಿ ಪ್ರಧಾನಿ ಮೋದಿಗೆ ಹೇಳಿದ್ದಾರೆ. ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ, ಕಠಿಣ ಮಾರ್ಗಸೂಚಿ ಕುರಿತು ಎಲ್ಲ ವಿವರ ನೀಡಿದ್ದು, ನಾಲ್ಕೈದು ದಿನದಲ್ಲಿ ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದರು.

ಇದನ್ನೂ ಓದಿ: ನಾಲ್ಕೈದು ದಿನದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬರಲಿದೆ: ಪಿಎಂ ಮೋದಿಗೆ ಸಿಎಂ ಬಿಎಸ್​ವೈ ಭರವಸೆ

ಎರಡನೇ ಅಲೆ ಯಾರನ್ನೂ ಬಿಟ್ಟಿಲ್ಲ. ಶೇ. 10-30ರಷ್ಟು ಹಬ್ಬುತ್ತಿದೆ. ಆದರೂ ಜನರು ಆತಂಕ ಬಿಡಬೇಕು. ಸೋಂಕು ಕಾಣಿಸಿದಲ್ಲಿ ಮನೆಯಲ್ಲಿ ನೀವು ಪ್ರತ್ಯೇಕಗೊಳ್ಳಿ. ಆಕ್ಸಿಮೀಟರ್ ಇರಿಸಿಕೊಂಡು ಆಮ್ಲಜನಕ ಪರಿಶೀಲನೆ ಮಾಡಿಕೊಳ್ಳಬೇಕು. ಆಮ್ಲಜನಕದ ಪ್ರಮಾಣ‌ ಶೇ. 90ಕ್ಕಿಂತ ಕೆಳಗೆ ಇಳಿದಾಗ ಮಾತ್ರ ಆತಂಕಕ್ಕೊಳಗಾಗಬೇಕು. ಇಲ್ಲದೇ ಇದ್ದಲ್ಲಿ ಆತಂಕ ಬೇಡ. ಮನೆಯಲ್ಲಿ ಒಳ್ಳೆಯ ಆಹಾರ, ತರಕಾರಿ, ಹಣ್ಣು‌ ಸೇವಿಸಿ ಪ್ರಾಣಾಯಾಮ ಮಾಡಿಕೊಳ್ಳಿ, ಆತ್ಮವಿಶ್ವಾಸದಿಂದಿರಿ. ಒಂದು ವೇಳೆ ಆಮ್ಲಜನಕದ ಪ್ರಮಾಣ ಶೇ.‌ 90ಕ್ಕಿಂತ ಕಡಿಮೆ ಆದವರು ನಮ್ಮ ಸಹಾಯವಾಣಿಗೆ ಕರೆ ಮಾಡಿ. ಅವರು ನಿಮ್ಮನ್ನು ಎಲ್ಲಿ ದಾಖಲಿಸಬೇಕು ಎಂದು ನಿರ್ಧರಿಸುತ್ತಾರೆ ಎಂದರು.

ನಮ್ಮ ನಮ್ಮ ರಕ್ಷಣೆ ನಾವು ಮಾಡಿಕೊಳ್ಳಬೇಕು. ಮಾರ್ಗಸೂಚಿ ಪಾಲಿಸಿದಲ್ಲಿ ಆದಷ್ಟು ಬೇಗ ನಾವು ಎರಡನೇ ಅಲೆಯ ತೀವ್ರತೆ ಕಡಿಕೆ ಮಾಡಬಹುದು. ಈಗಾಗಲೇ 1 ಕೋಟಿ ಕೊರೊನಾ ಡೋಸೇಜ್ ಖರೀದಿಗೆ ಸಿಎಂ ಅನುಮತಿ ಕೊಟ್ಡಿದ್ದಾರೆ ಎಂದರು.

ಮಾರ್ಚ್ 13ರಂದು ಸಿಎಂ ಯಡಿಯೂರಪ್ಪ ಅವರು ಮೊದಲ ಡೋಸ್ ಪಡೆದಿದ್ದರು. ನಂತರ ಅವರಿಗೆ ಎರಡನೇ ಬಾರಿ ಕೊರೊನಾ ಬಂದರೂ ಲಘುವಾದ ಲಕ್ಷಣ ಕಾಣಿಸಿಕೊಂಡಿತು. ಪ್ರತಿಕೂಲ ಪರಿಣಾಮ ಅಷ್ಟಾಗಿ ಬೀರಲಿಲ್ಲ. ಅವರೇ ನಮಗೆ ಉದಾಹರಣೆ. ಹಾಗಾಗಿ ಎಲ್ಲರೂ ಲಸಿಕೆ ಪಡೆಯಿರಿ. ಇದರಲ್ಲಿ ಆಲಸ್ಯ, ನಿರ್ಲಕ್ಷ್ಯ ಬೇಡ ಎಂದು ಸುಧಾಕರ್ ಮನವಿ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.