ETV Bharat / state

ಕೊರೊನಾಗೆ ಡಾ. ಕಜೆಯವರ ಆಯುರ್ವೇದ ಔಷಧಿ ಯಶಸ್ವಿ: 2ನೇ ಹಂತದ ಕ್ಲಿನಿಕಲ್ ಟ್ರಯಲ್​ಗೆ ಪ್ರಸ್ತಾವನೆ ಸಲ್ಲಿಕೆ

ಮೊದಲ ಹಂತದ ಕ್ಲಿನಿಕಲ್ ಟ್ರಯಲ್ ಸಫಲ ಆಗುತ್ತಿದ್ದಂತೆ ಮುಂದಿನ ಪ್ರಯೋಗಕ್ಕೆ ಆಯುರ್ವೇದ ತಜ್ಞ ಡಾ. ಗಿರಿಧರ್ ಕಜೆ ಅವರು ಮುಂದಾಗಿದ್ದಾರೆ. ಅದಕ್ಕಾಗಿ ಸರ್ಕಾರದ ಮುಂದೆ ಮತ್ತೊಂದು ಪ್ರಸ್ತಾವನೆ ಇಟ್ಟಿದ್ದಾರೆ. ಸರ್ಕಾರದ ಅನುಮತಿಯ ನಿರೀಕ್ಷೆಯಲ್ಲಿದ್ದಾರೆ.

Bangalore
ಕ್ಲಿನಿಕಲ್ ಟ್ರಯಲ್​ಗೆ ಪ್ರಪೋಸಲ್ ಸಲ್ಲಿಸಿದ ಡಾ.ಗಿರಿಧರ್ ಕಜೆ
author img

By

Published : Jul 3, 2020, 12:32 AM IST

ಬೆಂಗಳೂರು: ಕೊರೊನಾ ಸೋಂಕಿತರಿಗೆ ಆಯುರ್ವೇದ ಔಷಧಿ ನೀಡುವ ರಾಜ್ಯದ ಮೊದಲ ಕ್ಲಿನಿಕಲ್ ಟ್ರಯಲ್ ಯಶಸ್ವಿಯಾದ ಹಿನ್ನೆಲೆಯಲ್ಲಿ ಎರಡನೇ ಹಂತದ ಕ್ಲಿನಿಕಲ್ ಟ್ರಯಲ್​ಗೆ ಆಯುರ್ವೇದ ತಜ್ಞ ಡಾ. ಗಿರಿಧರ್ ಕಜೆ ಅವರು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

ರಾಜ್ಯದಲ್ಲಿ ಕೊರೊನಾ ಸೋಂಕಿತರಿಗೆ ಆಯುರ್ವೇದ ಔಷಧಿ ನೀಡುವ ಪ್ರಯೋಗಕ್ಕೆ ಡಾ. ಗಿರಿಧರ್ ಕಜೆ ಅವರು ಏಪ್ರಿಲ್​ನಲ್ಲಿ ಸರ್ಕಾರಕ್ಕೆ ಅನುಮತಿ ಕೋರಿದ್ದರು. ಅಗತ್ಯ ದಾಖಲೆಗಳನ್ನು ಒದಗಿಸಿ ಆಯುರ್ವೇದ ಗಿಡಮೂಲಿಕೆಗಳ ಮಿಶ್ರಣದ ಬಗ್ಗೆ ವಿವರಿಸಿದ ಅವರು, ಅದು ಯಾವ ರೀತಿ ಕೆಲಸ ಮಾಡಲಿದೆ ಎನ್ನುವ ವಿಸ್ತೃತ ವರದಿ ನೀಡಿದ್ದರು. ಅದಾದ ಬಳಿಕ ಸರ್ಕಾರ ಅಧಿಕೃತವಾಗಿ ಕ್ಲಿನಿಕಲ್ ಟ್ರಯಲ್​ಗೆ ಅನುಮತಿ ನೀಡಿತ್ತು.

ಎರಡು ರೀತಿಯ ಆಯುರ್ವೇದ ಮಾತ್ರೆಗಳನ್ನು ಕೊರೊನಾ ಸೋಂಕಿಗೆ ಸಿದ್ದಪಡಿಸಿದ್ದು, ಅದನ್ನು 10 ಸೋಂಕಿತರಿಗೆ ನೀಡಲಾಗಿತ್ತು. ಬೇರೆ ವಯೋಸಹಜ ಕಾಯಿಲೆಯಿಂದ ಬಳಲುತ್ತಿರುವವರು ಸೇರಿ 10 ಜನ ಸೋಂಕಿತರು ಆಯುರ್ವೇದ ಮಾತ್ರೆಗಳನ್ನು ಸೇವಿಸಿ ಗುಣಮುಖರಾಗಿದ್ದಾರೆ. ಪರೀಕ್ಷಾ ವರದಿಯಲ್ಲಿ ನೆಗೆಟಿವ್ ಬಂದಿದ್ದು, ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.

ಮೊದಲ ಹಂತದ ಕ್ಲಿನಿಕಲ್ ಟ್ರಯಲ್ ಸಫಲ ಆಗುತ್ತಿದ್ದಂತೆ ಮುಂದಿನ ಪ್ರಯೋಗಕ್ಕೆ ಆಯುರ್ವೇದ ತಜ್ಞ ಡಾ. ಗಿರಿಧರ್ ಕಜೆ ಅವರು ಮುಂದಾಗಿದ್ದಾರೆ. ಅದಕ್ಕಾಗಿ ಸರ್ಕಾರದ ಮುಂದೆ ಮತ್ತೊಂದು ಪ್ರಸ್ತಾವನೆ ಇಟ್ಟಿದ್ದಾರೆ. ಸರ್ಕಾರದ ಅನುಮತಿಯ ನಿರೀಕ್ಷೆಯಲ್ಲಿದ್ದಾರೆ.

ಏನಿದು ಪ್ರಸ್ತಾವನೆ?
ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ದೊಡ್ಡ ಸಂಖ್ಯೆಯಲ್ಲಿ ಸೋಂಕಿತರಿಗೆ ಆಯುರ್ವೇದ ಔಷಧಿ ನೀಡಲು ಮನವಿ ಮಾಡಿದ್ದಾರೆ. ಯಾವುದೇ ರೀತಿಯ ಅಲೋಪತಿ ಔಷಧಿ ತೆಗೆದುಕೊಳ್ಳುತ್ತಿದ್ದರೂ ಆಯುರ್ವೇದ ಔಷಧಿ ಯಾವುದೇ ವಿಧದ ಅಡ್ಡ ಪರಿಣಾಮ ಉಂಟು ಮಾಡುವುದಿಲ್ಲ. ಹೀಗಾಗಿ, ಸೋಂಕಿತರಿಗೆ ಈ ಔಷಧಿ ಕೊಟ್ಟರೆ ಯಾವುದೇ ರೀತಿಯಲ್ಲಿ ಸಮಸ್ಯೆ ಆಗಲ್ಲ. ರೋಗಿಗಳ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. ಜ್ವರ ಸೇರಿ ಇತರೆ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಹೆಚ್ಚಿನ ಸೋಂಕಿತರಿಗೆ ಆಯುರ್ವೇದ ಮಾತ್ರೆಗಳು ನೀಡಲು ಅನುಮತಿ ಕೋರಿದ್ದಾರೆ.

ಒಂದು ಹೆಜ್ಜೆ ಮುಂದೆ ಹೋಗಿರುವ ಡಾ.ಗಿರಿಧರ್ ಕಜೆ ಅವರು ಸೋಂಕಿತರ ಎಲ್ಲಾ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರಿಗೆ ಈ ಮಾತ್ರ ನೀಡಬೇಕು. ಸೋಂಕಿತರ ಸಂಪರ್ಕಕ್ಕೆ ಬಂದ ಮೊದಲ ದಿನದ ಕೊರೊನಾ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದು ಮೂರುನಾಲ್ಕು ದಿನಗಳ ಬಳಿಕ ಪಾಸಿಟಿವ್ ಆಗುತ್ತಿರುವ ಪ್ರಕರಣ ಹೆಚ್ಚಾಗುತ್ತಿವೆ. ಇವರಿಗೆ ಆಯುರ್ವೇದ ಮಾತ್ರೆ ಕೊಟ್ಟರೆ ಅವರಿಗೆ ಧನಾತ್ಮಕ ಪರಿಣಾಮ ಬೀರಲಿದ್ದು, ಪಾಸಿಟಿವ್ ಆಗುವ ಸಾಧ್ಯತೆ ಕಡಿಮೆ ಎನ್ನುವ ವಾದ ಸರ್ಕಾರದ ಮುಂದಿಟ್ಟಿದ್ದಾರೆ.

ಸಂಪರ್ಕಿತರ ಜೊತೆಗಿನ ಎಲ್ಲಾ ಸಕ್ರಿಯ ಕೊರೊನಾ ಪಾಸಿಟಿವ್ ವ್ಯಕ್ತಿಗಳಿಗೂ ಆಯುರ್ವೇದ ಔಷಧ ನೀಡಿದರೆ ಪರಿಣಾಮಕಾರಿ ಫಲಿತಾಂಶ ಹೊರ ಬರಲಿದೆ. ಆಯುರ್ವೇದ ಮಾತ್ರೆಯಿಂದ ಅಡ್ಡ ಪರಿಣಾಮ ಇಲ್ಲ. ಅಲೋಪತಿ ಔಷಧಿ ಜೊತೆ ಯಾವುದೇ ತೊಂದರೆ ಆಗುವುದಿಲ್ಲ. ಹೀಗಾಗಿ, ಈ ಪ್ರಯೋಗಕ್ಕೆ ಅವಕಾಶ ನೀಡಿದರೇ ಅದಕ್ಕೆ ತಾವು ಸಿದ್ಧ ಎಂದು ಮನವಿ ಮಾಡಿದ್ದಾರೆ. ಅದಕ್ಕೆ ಪೂರಕವಾದ ದಾಖಲೆಗಳನ್ನು ಸಹ ಸರ್ಕಾರಕ್ಕೆ ನೀಡಿದ್ದಾರೆ.

ಇಂದು 23,841 ಪ್ರಾಥಮಿಕ ಸಂಪರ್ಕಿತರು, 21,109 ದ್ವಿತೀಯ ಸಂಪರ್ಕಿತರು ಸೇರಿ‌ 44,950 ಜನ ಆರೋಗ್ಯ ಇಲಾಖೆಯ ನಿಗಾದಲ್ಲಿದ್ದಾರೆ. 9,406 ಕೊರೊನಾ ಸಕ್ರೀಯ ಪ್ರಕರಣಗಳಿವೆ. ಒಟ್ಟು ಎಲ್ಲಾ ಸೇರಿ 54,356 ಜನ ಆಗಲಿದ್ದು, ಎಲ್ಲರಿಗೂ ಕೊರೊನಾಗಾಗಿ ತಯಾರಿಸಿರುವ ಆಯುರ್ವೇದ ಮಾತ್ರೆಗಳನ್ನು ನೀಡಲು ಸಮರ್ಥ ಆಗಿರುವುದಾಗಿ ತಿಳಿಸಿದ್ದಾರೆ.

ಈಗಾಗಲೇ ವಿಕ್ಟೋರಿಯಾ ಆಸ್ಪತ್ರೆಯಲ್ಲಿ 10 ಕೊರೊನಾ ಸೋಂಕಿತರ ಮೇಲಿನ‌ ಆಯುರ್ವೇದ ಕ್ಲಿನಿಕಲ್ ಟ್ರಯಲ್ ಯಶಸ್ವಿ ಆಗಿರುವುದಕ್ಕೆ ಆರೋಗ್ಯ ಸಚಿವ ಶ್ರೀರಾಮುಲು ಅವರು ಹರ್ಷ ವ್ಯಕ್ತಪಡಿಸಿದ್ದಾರೆ. 100-200 ಸೋಂಕಿತರಿಗೆ ಆಯುರ್ವೇದ ಮಾತ್ರೆ ನೀಡಲು ಅವಕಾಶ ಕಲ್ಪಿಸುವ ಭರವಸೆ ನೀಡಿದ್ದಾರೆ. ಜೊತೆಗೆ ಕೇರಳ ಮಾದರಿಯ ಆಯುರ್ವೇದ ಬಳಕೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅನುಮತಿಯನ್ನು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಡಾ. ಗಿರಿಧರ್ ಕಜೆ ಅವರ ಪ್ರಸ್ತಾವನೆಯನ್ನು ಸರ್ಕಾರ ಯಾವ ರೀತಿ ಪರಿಗಣಿಸಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.