ಬೆಂಗಳೂರು: ಕೊರೊನಾ ಸೋಂಕು ಹರಡುವಿಕೆಯನ್ನು ತಡೆಯುವ ಉದ್ದೇಶದಿಂದ ಜನ ಆದಷ್ಟು ಮನೆಯಲ್ಲಿ ಲಾಕ್ ಡೌನ್ ಆಗಿರಿ ಎಂದು ಪ್ರಧಾನಿ ಮೋದಿ, ಸರ್ಕಾರ ಹಾಗೂ ಆರೋಗ್ಯ ಇಲಾಕೆ ಎಚ್ಚರ ನೀಡಿದರೂ ಜನ ಯಾವುದಕ್ಕೂ ಕ್ಯಾರೆ ಎನ್ನದೇ ಸಂಡೇ ಸ್ಪೆಷಲ್ ಎಂಬ ಕಾರಣಕ್ಕೆ ಮಾಂಸ ಖರೀದಿಗೆ ಮುಗಿ ಬಿದ್ದಿದ್ದಾರೆ.
ಕೆಲವೊಂದು ಕಡೆ ಮಾಸ್ಕ್ ಧರಿಸಿ ಅಂತರ ಕಾಯ್ದುಕೊಂಡು ಖರೀದಿ ಮಾಡಿದ್ರೆ, ಇನ್ನು ಕೆಲವೆಡೆ ಯಾವುದೇ ಮಾಸ್ಕ್ ಧರಿಸದೇ ಮಾಂಸ ಖರೀದಿಯ ಭರಾಟೆಯಲ್ಲಿ ತೊಡಗಿದ್ದಾರೆ. ಮಟನ್ ಬೆಲೆ ಕೆಜಿ ಗೆ 800 ರೂ. ಚಿಕನ್ ಕೆಜಿಗೆ 100 ರೂ ಇದೆ. ಬೆಲೆ ದುಬಾರಿಯಾದ್ರೂ ಕೂಡ ತಿನ್ನೋರ ಸಂಖ್ಯೆ ಮಾತ್ರ ಇಳಿಯಲಿಲ್ಲ ಅನ್ನೋ ಹಾಗೆ ಜನ ಮಾಂಸದ ಅಂಗಡಿಯತ್ತ ಬರ್ತಿದ್ದಾರೆ.
ಮತ್ತೊಂದೆಡೆ ಯಶವಂತಪುರ ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರದ ಅರಿವೇ ಇಲ್ಲದೇ ಯಶವಂತಪುರ ತರಕಾರಿ ಮಂಡಿಯಲ್ಲಿ ಜನ ಸೇರಿದ್ದಾರೆ.ಮಾರುಕಟ್ಟೆಗೆ ಯಥೇಚ್ಚವಾಗಿ ತರಕಾರಿ ಪೂರೈಕೆಯಾಗ್ತಿದ್ದು ದುಬಾರಿ ಬೆಲೆಯಲ್ಲಿ ಮಾರಾಟವಾಗ್ತಿದೆ.
ಹಲವರು ಜನ ಮಾಸ್ಕ್ ಹಾಕದೇ ಖರೀದಿ ಭರಟೆಯಲ್ಲಿ ತೊಡಗಿದ್ದಾರೆ. ಇನ್ನು ತರಕಾರಿ ರೆಟ್ ಗಗನಕ್ಕೆ ಏರಿದ್ದು ಬೀನ್ಸ್ 80 ರಿಂದ 60, ಟಮೊಟೋ 30ರಿಂದ 40, ಸೊಪ್ಪು 30-40, ಹೀಗೆ ತರಕಾರಿಗಳ ರೆಟ್ಗಳು ಕೂಡ ಹೆಚ್ಚಾಗಿದ್ದು, ತರಕಾರಿ ವ್ಯಾಪಾರಿಗಳು ಹೆಚ್ಚಾಗಿ ಲಾಭ ಮಾಡ್ತಿದ್ದಾರೆ. ಆದರೆ, ಜನ ಇನ್ನು ಹೆಚ್ಚು ಸೋಂಕು ಹರಡಿ ಯಾವುದೇ ವಸ್ತುಗಳು ಸಿಗದೇ ಹೋಗುವುದೇನೋ ಅನ್ನೋ ಆತಂಕದಲ್ಲಿ ತರಕಾರಿಗಳನ್ನ ಖರೀದಿ ಮಾಡ್ತಿದ್ದಾರೆ.