ಬೆಂಗಳೂರು: 14 ದಿನ ಕರ್ಫ್ಯೂ ಜಾರಿಯಾಗಿರುವ ಹಿನ್ನೆಲೆ ನಾಲ್ಕನೇ ದಿನಕ್ಕೆ ಜನತಾ ಕರ್ಫ್ಯೂ ಕಾಲಿಟ್ಟಿದೆ, ಎಂದಿನಂತೆ ನಿತ್ಯ ಬಳಕೆಗೆ ಬೇಕಾದ ವಸ್ತುಗಳ ಖರೀದಿಗೆ ಜನ ಮುಗಿಬಿದ್ದಿದ್ದಾರೆ.
ಸಾಮಾಜಿಕ ಅಂತರದವಿಲ್ಲದೇ ಖರೀದಿಗೆ ಮುಂದಾಗಿದ್ದರು, ಮಾರ್ಕೆಟ್ ಕೆಳಭಾಗದಲ್ಲಿ ಜನಸಂದಣಿ ಹೆಚ್ಚಾಗಬಾರದೆಂದು ಫ್ಲೈಓವರ್ಗಳು ಓಪನ್ ಮಾಡಲಾಗಿದ್ದು, ಪಶ್ಚಿಮ ವಿಭಾಗ ಬೆಳಗ್ಗೆ ಹತ್ತು ಗಂಟೆಯವರೆಗೆ ಫ್ಲೈ ಓವರ್ ಓಪನ್ ಮಾಡಲು ನಿರ್ಧಾರ ಕೈಗೊಳ್ಳಲಾಗಿತ್ತು.
ಇತ್ತ ಕೆ.ಆರ್ ಪುರ ಮಾರುಕಟ್ಟೆಯಲ್ಲಿ ಜನಜಂಗುಳಿ ಹೆಚ್ಚಾಗಿತ್ತು. ಕೊರೊನಾ ನಿಯಮ ಗಾಳಿಗೆ ತೂರಿ ವ್ಯಾಪಾರಸ್ಥರು ಹಾಗೂ ಗ್ರಾಹಕರು ವ್ಯವಹಾರ ನಡೆಸಿದ್ದಾರೆ. ಹೊಸಕೋಟೆ, ಮಾಲೂರು, ಕೋಲಾರ, ಚಿಂತಾಮಣಿ, ಮುಳಬಾಗಿಲು, ಕೆಜಿಎಫ್ನಿಂದ ತರಕಾರಿಗಳನ್ನ ತರುವ ರೈತರಿಗೆ ಕೆಆರ್ಪುರ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಲು ಅನುಕೂಲ ಮಾಡಿಕೊಡಲಾಗಿದೆ. ಆದರೆ, ದಲ್ಲಾಳಿಗಳು, ರೈತರು ವ್ಯಾಪಾರಸ್ಥರು ಕೋವಿಡ್ ನಿಯಮಗಳನ್ನು ಪಾಲಿಸುತ್ತಿಲ್ಲ.