ETV Bharat / state

ಕಬ್ಬನ್ ಪಾರ್ಕ್​ನಲ್ಲಿ ವಾಹನ ಸಂಚಾರ, ಪಾರ್ಕಿಂಗ್​ಗೆ ಅನುಮತಿ ಬೇಡ: ಡಿಯುಎಲ್​ಟಿ ಶಿಫಾರಸು

author img

By

Published : Sep 7, 2020, 7:12 AM IST

ಕಬ್ಬನ್ ಪಾರ್ಕ್ ಬೆಂಗಳೂರಿನ ಹೃದಯ ಭಾಗದಲ್ಲಿರುವ ಹಸಿರು ಪ್ರದೇಶವಾಗಿದೆ. ಈ ಅಮೂಲ್ಯ ಪರಿಸರವನ್ನು ಸಂರಕ್ಷಿಸುವ ಅಗತ್ಯ ಇದೆ. ಹೀಗಾಗಿ ಕಬ್ಬನ್ ಪಾರ್ಕ್​ಅನ್ನು ವಾಹನ‌ ಸಂಚಾರಕ್ಕೆ ಮುಕ್ತಗೊಳಿಸುವುದು ಯೋಗ್ಯವಲ್ಲ ಮತ್ತು ಕಬ್ಬನ್ ಪಾರ್ಕ್​ನಲ್ಲಿ ವಾಹನ ಪಾರ್ಕಿಂಗ್​ಗೂ ಅವಕಾಶ ನೀಡಬಾರದು ಎಂದು ಡಿಯುಎಲ್​ಟಿ ಸರ್ಕಾರಕ್ಕೆ ಶಿಫಾರಸು ‌ಮಾಡಿದೆ.

ಡಿಯುಎಲ್​ಟಿ
ಡಿಯುಎಲ್​ಟಿ

ಬೆಂಗಳೂರು: ಕಬ್ಬನ್ ಪಾರ್ಕ್​ನಲ್ಲಿ ವಾಹನ ಸಂಚಾರ ಹಾಗೂ ಪಾರ್ಕಿಂಗ್​ಗೆ ಅನುಮತಿ ನೀಡದಂತೆ ನಗರ ಭೂ ಸಾರಿಗೆ ನಿರ್ದೇಶನಾಲಯ ಸರ್ಕಾರಕ್ಕೆ ಶಿಫಾರಸು ‌ಮಾಡಿದೆ.

ನಗರಾಭಿವೃದ್ಧಿ ಇಲಾಖೆ ಅಧೀನದಲ್ಲಿರುವ ನಗರ ಭೂ ಸಾರಿಗೆ ನಿರ್ದೇಶನಾಲಯ (ಡಿಯುಎಲ್​ಟಿ) ಈ ಸಂಬಂಧ ತೋಟಗಾರಿಕೆ ಇಲಾಖೆ ಕಾರ್ಯದರ್ಶಿ ರಾಜೇಂದರ್ ಕಟಾರಿಯಾಗೆ ಪತ್ರ ಬರೆದಿದೆ. ಈ ಸಂಬಂಧ ಮಾಧ್ಯಮ ಹೇಳಿಕೆ ಹೊರಡಿಸಲಾಗಿದ್ದು, ಡಿಯುಎಲ್​ಟಿ ಆಯುಕ್ತೆ ವಿ.ಮಂಜುಳಾ ಅವರು ಪತ್ರದಲ್ಲಿ, ಕಬ್ಬನ್ ಪಾರ್ಕ್ಅ‌ನ್ನು ವಾಹನ‌ ಸಂಚಾರಕ್ಕೆ ಮುಕ್ತಗೊಳಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ. ಈ ಸಂಬಂಧ ನಾಗರಿಕರಿಂದ ವಾಹನ‌ಮುಕ್ತ ಕಬ್ಬನ್ ಪಾರ್ಕ್ ಕಾಯ್ದುಕೊಳ್ಳುವಂತೆ ಮನವಿ ಮಾಡಲಾಗಿದೆ. ಈ ಕುರಿತು ಡಿಯುಎಲ್​ಟಿ ವಿಸ್ತೃತ ಅಧ್ಯಯನ ನಡೆಸಿದೆ ಎಂದು ವಿವರಿಸಿದ್ದಾರೆ.

ಕಬ್ಬನ್ ಪಾರ್ಕ್ ಬೆಂಗಳೂರಿನ ಹೃದಯ ಭಾಗದಲ್ಲಿರುವ ಹಸಿರು ಪ್ರದೇಶವಾಗಿದೆ. ಈ ಅಮೂಲ್ಯ ಪರಿಸರವನ್ನು ಸಂರಕ್ಷಿಸುವ ಅಗತ್ಯ ಇದೆ. ವಿಶ್ವದ ನಾನಾ ನಗರಗಳಲ್ಲಿ ಇಂತಹ ವಲಯಗಳನ್ನು ಪಾದಚಾರಿ ಹಾಗೂ ಸೈಕಲ್ ಸವಾರರಿಗೆ ಮೀಸಲಿಡಲಾಗಿದೆ. ಹೀಗಾಗಿ ಕಬ್ಬನ್ ಪಾರ್ಕ್​ಅನ್ನು ಸೈಕ್ಲಿಸ್ಟ್ ಹಾಗೂ ಪಾದಚಾರಿಗಳಿಗೆ ಮೀಸಲಿರಿಸುವುದು ಉಚಿತವೆನಿಸಿದೆ. ಕಬ್ಬನ್ ಪಾರ್ಕ್​ನಲ್ಲಿ ವಾಹನ ಸಂಚಾರ ನಿಷೇಧಿಸುವುದರಿಂದ ವಾಹನ ಸವಾರರಿಗೆ ಯಾವುದೇ ಸಮಸ್ಯೆ ಆಗಲ್ಲ.‌ ಅವರು ಪರ್ಯಾಯ ಮಾರ್ಗದಲ್ಲಿ ತೆರಳಬಹುದಾಗಿದೆ ಎಂದು ತಿಳಿಸಿದ್ದಾರೆ.

ಈ ಹಿನ್ನೆಲೆ ಕಬ್ಬನ್ ಪಾರ್ಕ್​ಅನ್ನು ವಾಹನ‌ ಸಂಚಾರಕ್ಕೆ ಮುಕ್ತಗೊಳಿಸುವುದು ಯೋಗ್ಯವಲ್ಲ ಮತ್ತು ಕಬ್ಬನ್ ಪಾರ್ಕ್​ನಲ್ಲಿ ವಾಹನ ಪಾರ್ಕಿಂಗ್​ಗೂ ಅವಕಾಶ ನೀಡಬಾರದು ಎಂಬುದು ಡಿಯುಎಲ್​ಟಿಯ ಬಲವಾದ ಅಭಿಪ್ರಾಯ ಎಂದು ವಿ.ಮಂಜುಳಾ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.