ETV Bharat / state

ಮಾದಕ ವಸ್ತು ಸಾಗಣೆ ಮೇಲೆ ಹದ್ದಿನ ಕಣ್ಣು.. ಕೊರಿಯರ್​ ಸೆಂಟರ್​ಗಳ ಮೇಲೆ ಡಾಗ್​ ಸ್ಕ್ವಾಡ್ ದಾಳಿ

ಕೊರಿಯರ್ ಮೂಲಕ ಡ್ರಗ್ ಸರಬರಾಜಾಗುತ್ತಿರುವ ಮಾಹಿತಿ ಹಿನ್ನೆಲೆ ಬೆಂಗಳೂರಲ್ಲಿ ಡಾಗ್ ಸ್ಕ್ವ್ಯಾಡ್ ಪೊಲೀಸರು ಕೊರಿಯರ್​ ಸೆಂಟರ್​ಗಳ ಮೇಲೆ ದಾಳಿ ನಡೆಸಿದ್ದಾರೆ.

Dog Squad ride on Courier Center
ಕೊರಿಯರ್ ಸೆಂಟರ್​ ಮೇಲೆ ದಾಳಿ
author img

By

Published : Jul 7, 2021, 12:55 PM IST

ಬೆಂಗಳೂರು: ಮಾದಕ ವಸ್ತು ಜಾಲವನ್ನು ಮಟ್ಟಹಾಕಲು ಪೊಲೀಸರು ಎಷ್ಟೇ ಪ್ರಯತ್ನಪಟ್ಟರೂ, ಡ್ರಗ್ ಪೆಡ್ಲರ್​​ಗಳು ಮಾತ್ರ ಇನ್ನೊಂದು ಮಾರ್ಗವನ್ನು ಕಂಡುಕೊಂಡು ತಮ್ಮ ಕೆಲಸ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಪೊಲೀಸರ ಕಣ್ತಪ್ಪಿಸಿ ಕೊರಿಯರ್ ಮೂಲಕ ಮಾದಕ ವಸ್ತುಗಳನ್ನು ಸಾಗಿಸುವ ಹೊಸ ಮಾರ್ಗ ಕಂಡುಕೊಂಡಿದ್ದಾರೆ.

ಆಂಧ್ರ ಪ್ರದೇಶದ ವಿಶಾಖಪಟ್ಟಣಂನಿಂದ ಬೆಂಗಳೂರಿಗೆ ಗಾಂಜಾ, ಡ್ರಗ್​ ಸೇರಿದಂತೆ ಮಾದಕ ವಸ್ತುಗಳು ಬರುತ್ತಿದೆ ಎಂಬ ಮಾಹಿತಿ ಮೇರೆಗೆ ಖಾಕಿಪಡೆ ಕೊರಿಯರ್​ ಕಚೇರಿಗಳ ಮೇಲೆ ಕಣ್ಣಿಟ್ಟಿದೆ. ಬೆಂಗಳೂರು ಕೇಂದ್ರ ವಿಭಾಗದ ಕೊರಿಯರ್​ ಸೆಂಟರ್‌ಗಳ ಮೇಲೆ ಡಾಗ್ ಸ್ಕ್ವಾಡ್ ಮೂಲಕ ಪೊಲೀಸರು ದಾಳಿ ನಡೆಸಿದ್ದಾರೆ.

ಓದಿ : ತೋಟದ ಮನೆಗೆ ಕನ್ನ: 10 ಲಕ್ಷ ಮೌಲ್ಯದ ನಗನಾಣ್ಯ ದೋಚಿದ ಕಳ್ಳರು

ಕೇಂದ್ರ ವಿಭಾಗದ ವಿವೇಕನಗರ, ಅಶೋಕನಗರ, ಸಂಪಂಗಿ ರಾಮನಗರ, ಸದಾಶಿವನಗರ, ಶೇಷಾದ್ರಿಪುರಂ, ವೈಯಾಲಿಕಾವಲ್‌ ಭಾಗದಲ್ಲಿ ಹೆಚ್ಚಾಗಿ ಡ್ರಗ್ಸ್, ಗಾಂಜಾ ಸರಬರಾಜು ಆಗುತ್ತಿದೆ ಎಂಬ ಮಾಹಿತಿ ಮೇರೆಗೆ 12 ಡಾಗ್ ಸ್ಕ್ವಾಡ್​ಗಳಿಂದ ಕೇಂದ್ರ ವಿಭಾಗದ ಎಲ್ಲಾ ಕೊರಿಯರ್ ಆಫೀಸ್‌ಗಳಲ್ಲಿ ತಲಾಶ್​ ನಡೆಸಲಾಗಿದೆ.

ಜೊತೆಗೆ, ಸ್ಲಂ ಪ್ರದೇಶಗಳಲ್ಲಿ ಪೆಡ್ಲರ್‌ಗಳ ಮನೆಗಳನ್ನು ಕೂಡ ಪೋಲಿಸರು ಜಾಲಾಡಿದ್ದಾರೆ, ಈ ಮೂಲಕ ಡ್ರಗ್ಸ್ ಪೂರೈಕೆ ಮಾಡುವರ ಮೇಲೆ ಹದ್ದಿಣ ಕಣ್ಣಿಟ್ಟಿದ್ದಾರೆ. ಕೇಂದ್ರ ವಿಭಾಗದ ಡಿಸಿಪಿ ಅನುಚೇತ್‌ ನೇತೃತ್ವದಲ್ಲಿ ಸರ್ಚ್​​ ಆಪರೇಶನ್ ನಡೆದಿದ್ದು, ಕೇಂದ್ರ ವಿಭಾಗದ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಡ್ರಗ್ ಪೆಡ್ಲರ್ಸ್​ ಮತ್ತು ಗ್ರಾಹಕರ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.