ETV Bharat / state

ಚುರುಕು ಬುದ್ದಿಯ ಶ್ವಾನಗಳ ರೋಮಾಂಚನಕಾರಿ ಸಾಹಸ; ಕೆಂಪು ತೋಟದಲ್ಲಿ ವೀಕ್ಷಕರಿಗೆ ಥ್ರಿಲ್! - ಶಸ್ತ್ರಾಭ್ಯಾಸ ಮಾಡಿದ ಶ್ವಾನಗಳ ಪ್ರದರ್ಶನ

ಅಕ್ಟೋಬರ್ 31 ರಂದು ಸರ್ದಾರ್ ವಲ್ಲಬಬಾಯ್ ಪಟೇಲ್ ಅವರ ಜನ್ಮದಿನವಿರುವ ಕಾರಣ ಲಾಲ್​ಬಾಗ್‌​​ನಲ್ಲಿ ಸಿಆರ್​ಪಿಎಫ್ ತಂಡ ಶ್ವಾನ ಪ್ರದರ್ಶನ ಆಯೋಜಿಸಿತ್ತು. ಶ್ವಾನಗಳ ಕಸರತ್ತು ನೋಡುಗರ ಮೈ ಜುಮ್ಮೆನಿಸುವಂತಿತ್ತು.

ಲಾಲ್ ಬಾಗ್​​ನಲ್ಲಿ ಶ್ವಾನಗಳ ಶೋ
author img

By

Published : Oct 20, 2019, 6:03 PM IST

ಬೆಂಗಳೂರು: ಲಾಲ್‌ಬಾಗ್‌ನಲ್ಲಿ ಇಷ್ಟು ದಿನ ಫ್ಲವರ್ ಶೋ ನೋಡೋಕೆ ಬರುತ್ತಿದ್ದ ಮಂದಿ, ಇವತ್ತು ಸಿಆರ್​ಪಿಎಫ್ ತಂಡ ಆಯೋಜಿಸಿದ್ದ ಶ್ವಾನ ಪ್ರದರ್ಶನವನ್ನು ಬೆರಗುಗಣ್ಣುಗಳಿಂದ ವೀಕ್ಷಿಸಿದ್ರು. ‌ಹಚ್ಚಹಸಿರಿಂದ ಕೂಡಿರುವ ಗಿಡಮರಗಳ ಸೌಂದರ್ಯ ಸವಿಯೋಕೆ ಬಂದವರಿಗೆ ಇಂದು, ಸಿಆರ್​ಪಿಎಫ್​​ನ ಶ್ವಾನಗಳ ಸಮರಾಭ್ಯಾಸ ಪ್ರದರ್ಶನ ರೋಮಾಂಚನಗೊಳಿಸಿತು.

ಅಕ್ಟೋಬರ್ 31 ರಂದು ಸರ್ದಾರ್ ವಲ್ಲಬಬಾಯ್ ಪಟೇಲ್ ಅವರ ಜನ್ಮದಿನ. ಇದರ ಅಂಗವಾಗಿ ಇದೇ ಮೊದಲ ಬಾರಿಗೆ ಸಿಆರ್​ಪಿಎಫ್ ವತಿಯಿಂದ ಡಾಗ್ ಶೋ, ಶಸ್ತ್ರಗಳ ಶೋ, ಬ್ಯಾಂಡ್ ಶೋ ಹಾಗೂ ಉಚಿತ ಹೆಲ್ತ್ ಕ್ಯಾಂಪ್ ಆಯೋಜಿಸಲಾಗಿತ್ತು.

ಲಾಲ್ ಬಾಗ್​​ನಲ್ಲಿ ಶ್ವಾನಗಳ ಶೋ

ಶ್ವಾನ ಪ್ರದರ್ಶನದಲ್ಲಿ ‌ಒಂದು ಶ್ವಾನ ಬೆಂಕಿಯ ರಿಂಗ್ ಒಳಗಿನಿಂದ ಹೊರಗೆ ಜಂಪ್ ಮಾಡಿ ಸಾಹಸ ತೋರಿಸಿದರೆ, ಮತ್ತೊಂದು ಶ್ವಾನ 10 ಅಡಿ ಬಸ್ ಮೇಲಿಂದ ಜಿಗಿದು ಉಗ್ರರಿಂದ ತನ್ನ ಮಾಲೀಕನನ್ನ ಕಾಪಾಡುವ ಬಗೆಯನ್ನು ತೋರಿಸಿತು. ಜೊತೆಗೆ ಮಾಲೀಕನು ಮಾತು ಬಿಟ್ಟರೆ ಅಪರಿಚಿತರ ಆಜ್ಞೆಯನ್ನು ಪಾಲಿಸದಿರುವ ದೃಶ್ಯವನ್ನೆಲ್ಲ ಶ್ವಾನಗಳು ತೋರಿಸಿದ್ವು. ಶ್ವಾನಗಳ ಚುರುಕು ಬುದ್ದಿಗೆ, ಸಾಹಸಕ್ಕೆ ಅಲ್ಲಿದ್ದವರೆಲ್ಲ ಶಹಭಾಷ್ ಅಂತ ಚಪ್ಪಾಳೆ ತಟ್ಟಿ ಸಂತಸ ವ್ಯಕ್ತಪಡಿಸಿದ್ರು.

ಇನ್ನು ಶ್ವಾನಗಳ ಪ್ರತಿಯೊಂದು ಆ್ಯಕ್ಟ್‌ನಲ್ಲೂ ಯುದ್ಧಕ್ಕೆ ಎಷ್ಟೆಲ್ಲಾ ತರಬೇತಿ ನೀಡಿರುತ್ತಾರೆ ಅನ್ನೊದ್ರ ಬಗ್ಗೆಯೂ ಮಾಹಿತಿ ನೀಡಿದರು. ಮತ್ತೊಂದು ವಿಶೇಷ ಅಂದ್ರೆ, ಈ ಶ್ವಾನಗಳು 5 ತಿಂಗಳು ಇರುವಾಗಲೇ ಅವುಗಳಿಗೆ ತರಬೇತಿ ಆರಂಭಿಸಲಾಗುತ್ತದೆ. ಆ ಶ್ವಾನ ಬೆಳೆದು ದೊಡ್ಡದಾದ ನಂತರ ಯುದ್ಧದಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತೆ ಎಂದು ಸಿಆರ್​ಪಿಎಫ್​​ನ ಡಿಐಜಿ ರವೀಂದ್ರ ತಿಳಿಸಿದರು.

Intro:ಲಾಲ್ ಬಾಗ್ ನಲ್ಲಿ ಶ್ವಾನಗಳ ರೋಚಕ ಸಾಹಸ ಕಣ್ತುಂಬಿಕೊಂಡ ಪ್ರವಾಸಿಗರು..‌

ಬೆಂಗಳೂರು: ಲಾಲ್‌ಬಾಗ್‌ನಲ್ಲಿ ಇಷ್ಟು ದಿನ ಫ್ಲವರ್ ಶೋ ನೋಡೋಕ್ಕೆ ಬರುತ್ತಿದ್ದ ಮಂದಿ ಇವತ್ತು ಸಿಆರ್ ಪಿಎಫ್ ತಂಡ ಆಯೋಜಿಸಿದ್ದ ಶ್ವಾನ ಪ್ರದರ್ಶನ ನೋಡಿ ಬೆರಗಾಗಿ ಹೋದರು..‌
ಹಚ್ಚ ಹಸಿರಿನಿಂದ ಕೂಡಿರುವ ಗಿಡಮರಗಳ ಸೌಂದರ್ಯ ಸವಿಯೋಕ್ಕೆ ಅಂತ ಬಂದವರಿಗೆ ಇಂದು, ಸಿಆರ್ ಪಿ ಎಫ್ ನಲ್ಲಿ ಶಸ್ತ್ರಾಭ್ಯಾಸ ಮಾಡಿದ ಶ್ವಾನಗಳ ಪ್ರದರ್ಶನ ಮೈ ರೋಮಾಂಚನಗೊಳ್ಳಿಸಿತು..

ಅಂದಹಾಗೆ,, ಅಕ್ಟೋಬರ್ 31 ರಂದು
ಸರ್ದಾರ್ ವಲ್ಲಬಾಯ್ ಪಟೇಲ್ ಅವರ ಜನ್ಮದಿನ.. ಇದರ ಅಂಗವಾಗಿ ಇದೇ ಮೊದಲ ಬಾರಿಗೆ ಸಿಆರ್ ಪಿಎಫ್ ವತಿಯಿಂದ ಡಾಗ್ ಶೋ, ವೆಪನ್ ಶೋ, ಬ್ಯಾಂಡ್ ಶೋ ಹಾಗೂ ಉಚಿತ ಹೆಲ್ತ್ ಕ್ಯಾಂಪ್ ಆಯೋಜಿಸಿತ್ತು..

ಶ್ವಾನ ಪ್ರದರ್ಶನದಲ್ಲಿ, ‌ಬೆಂಕಿಯ ರಿಂಗ್ ಒಳಗಿನಿಂದ ಹೊರಗೆ ಜಂಪ್ ಮಾಡಿ ಸಾಹಸ ತೋರಿಸಿದರೆ, ಮತ್ತೊಂದು ಶ್ವಾನ 10 ಅಡಿ ಬಸ್ ಮೇಲಿಂದ ಜಿಗಿದು ಉಗ್ರರಿಂದ ತನ್ನ ಮಾಲೀಕನ ನನ್ನ ಕಾಪಾಡುವುದು, ಜೊತೆಗೆ ಮಾಲೀಕನು ಮಾತು ಬಿಟ್ಟರೆ ಅಪರಿಚಿತರ ಆಜ್ಞೆಯನ್ನ ಪಾಲಿಸದಿರುವ ದೃಶ್ಯವೆನ್ನೆಲ್ಲ ಪ್ರದರ್ಶನ ಮಾಡಿದರು.. ಶ್ವಾನಗಳ ಚುರುಕು ಬುದ್ದಿಗೆ, ಸಾಹಸಕ್ಕೆ ಅಲ್ಲಿಂದವರೆಲ್ಲ ವಾರೆವ್ ಶಬಾಷ್ ಅಂತ ಚಪ್ಪಾಳೆ ಯನ್ನ ತಟ್ಟಿ‌ಉರಿದು ದುಂಬಿಸಿದರು..‌ ಈ ಸಖತ್ ಥ್ರಿಲಿಂಗ್ ಸೀನ್ ಗಳನ್ನ ಜನರು ಕಣ್ಣು- ಬಾಯಿ ಬಿಟ್ಟು ನೋಡ್ತಾ, ಕೈ ನಲ್ಲೊಂದು ಮೊಬೈಲ್ ಹಿಡಿದು ವಿಡಿಯೋ ಮಾಡುತ್ತಿದ್ದ ದೃಶ್ಯ ಕಂಡು ಬಂತು..

ಇನ್ನು ಶ್ವಾನಗಳ ಪ್ರತಿಯೊಂದು ಆಕ್ಟ್‌ನಲ್ಲೂ ಯುದ್ಧಕ್ಕೆ ಎಷ್ಟೆಲ್ಲಾ ತರಬೇತಿ ನೀಡಿರುತ್ತಾರೆ ಅನ್ನೊದ್ರ ಬಗ್ಗೆ ಕೂಡ ಮಾಹಿತಿ ನೀಡಿದ್ದರು. ಮತ್ತೊಂದು ವಿಶೇಷ ಅಂದರೆ, ಶ್ವಾನ ೫ ತಿಂಗಳು ಇರುವಾಗಲೇ ಅದರ ತರಬೇತಿ ಆರಂಭಿಸಗುತ್ತೆ. ಆ ಶ್ವಾನ ಬೆಳೆದು ದೊಡ್ಡದಾದ ನಂತರ ಯುದ್ಧದಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತೆ ಅಂತ ಸಿಆರ್ ಪಿಎಫ್ ನ ಡಿಐಜಿ ರವೀಂದ್ರ ತಿಳಿಸಿದರು..‌

ಅದೇನೆ ಇರಲಿ, ಯುದ್ಧದಲ್ಲಿ ಸೈನಿಕನ ತಾಕತ್ತು ಎಷ್ಟು ಮುಖ್ಯವೋ ಅಷ್ಟೇ ಚುರುಕು ಬುದ್ದಿಯ ಶ್ವಾನಗಳು ಮುಖ್ಯ..

KN_BNG_2_LALBAG_CRPF_DOG_SHOW_SCRIPT_7201801

ಬೈಟ್: ಜಗದೀಶ್, ಜಂಟಿ ನಿರ್ದೇಶಕ, ಲಾಲ್‌ಬಾಗ್
ಬೈಟ್: ಎಂ.ಎಲ್. ರವೀಂದ್ರ, ಡಿಐಜಿ ಸಿಆರ್ ಪಿಎಫ್

Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.