ETV Bharat / state

ಆರ್ಥಿಕತೆ ದಿವಾಳಿಯಾಗಿರುವಾಗ 'ಗೋ ಹತ್ಯೆ ನಿಷೇಧ ಕಾಯ್ದೆ' ಜಾರಿ ಅಗತ್ಯವಿತ್ತೇ?: ಕೋಡಿಹಳ್ಳಿ

ಯಾರನ್ನ ಕೇಳಿ ಈ ಕಾಯ್ದೆಗಳನ್ನ ಜಾರಿ ಮಾಡಿದ್ರಿ, ಇದರಿಂದಾಗುವ ಧನಾತ್ಮಕ,ಋಣಾತ್ಮಕಗಳ ಪರಿಣಾಮಗಳ ಬಗ್ಗೆ ಚರ್ಚೆ ಮಾಡಿದ್ರಾ?. ಇತ್ತೀಚೆಗೆ 3-4 ದಿನಗಳ ಕಾಲ ಘಾಟಿ‌ ಸುಬ್ರಮಣ್ಯ ಜಾತ್ರೆ ನಡೆಯಿತು. ಅಲ್ಲಿ ಅರ್ಧ ಬೆಲೆಗೂ ದನಗಳನ್ನ ಕೊಳ್ಳುತ್ತಿಲ್ಲ ಎಂದು ರೈತರು ದೂರು ನೀಡುತ್ತಿದ್ದಾರೆ..

kodihalli-chandrasekhar
ಕೋಡಿಹಳ್ಳಿ ಚಂದ್ರಶೇಖರ್
author img

By

Published : Jan 10, 2021, 8:19 PM IST

ಬೆಂಗಳೂರು : ದೇಶದಲ್ಲಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿ ಜನ ತತ್ತರಿಸಿ ಹೋಗಿರುವಾಗ, ಆರ್ಥಿಕತೆ ದಿವಾಳಿಯಾಗಿರುವ ಸಂದರ್ಭದಲ್ಲಿ 'ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರುವ ಅವಶ್ಯಕತೆ ಇತ್ತೇ? ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್​ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಇಂದು ನಗರದ ಸ್ಕೌಟ್ಸ್ ಆವರಣದಲ್ಲಿ ಗೋ ಹತ್ಯೆ ಸುಗ್ರೀವಾಜ್ಞೆ ಕುರಿತು ರಾಜ್ಯ ಮಟ್ಟದ ವಿಚಾರ ಸಂಕೀರ್ಣ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸರ್ಕಾರ ಭೂ ಸ್ವಾದೀನ ಕಾಯ್ದೆಯನ್ನು ಜಾರಿಗೆ ತಂದಿದೆ.

ಆದ್ರೆ, ಈ ಬಗ್ಗೆ ಎಲ್ಲಿಯೂ ಜನರನ್ನ ಕೇಳಿಲ್ಲ. ಎಪಿಎಂಸಿ ತಿದ್ದುಪಡಿ ಕಾಯ್ದೆ ಜಾರಿಗೊಳಿಸುವಾಗಲೂ ಜನರನ್ನು ಕೇಳಿಲ್ಲ. ಇದರ ನಡುವೆ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿದ್ದಾರೆ. ಈಗ ಇದು ಬಹಳ ಮುಖ್ಯವಾಗಿತ್ತಾ? ಎಂದು ಸರ್ಕಾರವನ್ನ ತರಾಟೆಗೆ ತೆಗೆದುಕೊಂಡರು.

ಸರ್ಕಾರದ ವಿರುದ್ಧ ಕೋಡಿಹಳ್ಳಿ ಚಂದ್ರಶೇಖರ್ ಗುಡುಗು..

ಯಾರನ್ನ ಕೇಳಿ ಈ ಕಾಯ್ದೆಗಳನ್ನ ಜಾರಿ ಮಾಡಿದ್ರಿ, ಇದರಿಂದಾಗುವ ಧನಾತ್ಮಕ,ಋಣಾತ್ಮಕಗಳ ಪರಿಣಾಮಗಳ ಬಗ್ಗೆ ಚರ್ಚೆ ಮಾಡಿದ್ರಾ?. ಇತ್ತೀಚೆಗೆ 3-4 ದಿನಗಳ ಕಾಲ ಘಾಟಿ‌ ಸುಬ್ರಮಣ್ಯ ಜಾತ್ರೆ ನಡೆಯಿತು. ಅಲ್ಲಿ ಅರ್ಧ ಬೆಲೆಗೂ ದನಗಳನ್ನ ಕೊಳ್ಳುತ್ತಿಲ್ಲ ಎಂದು ರೈತರು ದೂರು ನೀಡುತ್ತಿದ್ದಾರೆ.

ಚಾಮರಾಜನಗರದಲ್ಲಿ ಗ್ರಾಹಕರಿಲ್ಲದೆ ವ್ಯಾಪಾರಸ್ಥರು ಪ್ರತಿಭಟನೆ ಮಾಡುವಂತಹ ಸನ್ನಿವೇಶ ಎದುರಾಯಿತು. ಇಡೀ ಮುಸ್ಲಿಂ ಸಮುದಾಯದ ವಿರುದ್ಧ ಹಿಂದುಗಳನ್ನ ಎತ್ತಿ ‌ಕಟ್ಟುವ ಕೆಲಸ ಮಾಡ್ತಿದ್ದೀರಾ? ಎಂದು ಕುಟುಕಿದರು.

ಓದಿ: ಯೂಥ್ ಕಾಂಗ್ರೆಸ್ ಚುನಾವಣೆಯಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ: ಡಿ.ಕೆ.ಶಿವಕುಮಾರ್

ನಮ್ಮ‌ ಆರ್ಥಿಕತೆ, ಬದುಕು ದಿವಾಳಿಯಾಗ್ತಿದೆ. ಇದಕ್ಕೆ ಕಾರಣ ಕೊಡುವವರು ಯಾರು?. ಇದು ಸರ್ಕಾರದ ಮುಂದೆ ಇರುವ ಸದ್ಯದ ಪ್ರಶ್ನೆಗಳು. ಇದೇ ವಿಷಯಗಳನ್ನ ನಾವು ಇವತ್ತಿನ ವಿಚಾರ ಸಂಕೀರ್ಣದಲ್ಲಿ ಚರ್ಚಿಸುತ್ತಿದ್ದೇವೆ.

ಎಲ್ಲ ರೈತರ ಅಭಿಪ್ರಾಯಗಳನ್ನು ಸಂಗ್ರಹಿಸಿ ಇದು ಸರಿಯೋ ಅಥವಾ ಅಲ್ಲವೋ ಎಂಬ‌ ಒಮ್ಮತದ ನಿರ್ಧಾರ ಪಡೆದು ಮುಂದೆ ಹೋರಾಟ ಕೈಗೊಳ್ಳಬೇಕಾ‌, ಬೇಡ್ವಾ ಅಂತಾ ನಿರ್ಧಾರ ಮಾಡ್ತೀವಿ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.