ಬೆಂಗಳೂರು: ಕೊರೊನಾ ಸೋಂಕು ಕಾಣಿಸಿಕೊಳ್ಳುವ ತೀವ್ರ ಆತಂಕಕ್ಕೆ ಎಡೆಮಾಡಿಕೊಟ್ಟಿರುವ ಪುಲಕೇಶಿ ನಗರ ಪೊಲೀಸ್ ಸಂಚಾರಿ ಠಾಣೆ ಪೇದೆಯ ಗಂಟಲು ದ್ರವವನ್ನು ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಲಾಗಿದೆ.
ಪುಲಕೇಶಿ ನಗರ ಪೊಲೀಸ್ ಸಂಚಾರಿ ಠಾಣೆ ಪೇದೆಯನ್ನು ಸಿವಿ ರಾಮನ್ ನಗರ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ಪರೀಕ್ಷೆಗೆ ಒಳಪಡಿಸಿದ್ದ ವೇಳೆ ಕಾನ್ಸ್ಟೇಬಲ್ಗೆ ವೈರಸ್ ತಗುಲಿರುವುದು ಪತ್ತೆಯಾಗಿತ್ತು. ಹಾಗಾಗಿ ಪರೀಕ್ಷಾ ವರದಿ ಬರುತ್ತಿದ್ದಂತೆ ಕಾನ್ಸ್ಟೇಬಲ್ ಹಾಗೂ ಅವರ ಸಂಪರ್ಕ ಹೊಂದಿದ್ದ ಮಹಿಳಾ ಕಾನ್ಸ್ಟೇಬಲ್ಅನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಠಾಣೆಯನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಲಾಗಿದೆ ಎಂದು ಪೊಲೀಸ್ ಆಧಿಕಾರಿ ತಿಳಿಸಿದ್ದಾರೆ.
ಕಾನ್ಸ್ಟೇಬಲ್ಗೆ ಮತ್ತೊಮ್ಮೆ ಪರೀಕ್ಷೆ:
ಈ ಹಿಂದೆಯೂ ಬೇಗೂರು ಠಾಣೆ ಕಾನ್ಸ್ಟೇಬಲ್ಗೆ ಕೊರೊನಾ ಪರೀಕ್ಷೆ ನಡೆಸಿದಾಗ ಪಾಸಿಟಿವ್ ಬಂದಿತ್ತು. ಎರಡನೇ ಬಾರಿ ಪರೀಕ್ಷೆಗೊಳಪಡಿಸಿದಾಗ ವರದಿಯಲ್ಲಿ ನಗೆಟಿವ್ ಬಂದಿತ್ತು. ಆರೋಗ್ಯಾಧಿಕಾರಿಗಳು ಮಾಡಿದ ಎಡವಟ್ಟು ಈ ಅವಾಂತರಕ್ಕೆ ಕಾರಣವಾಗಿತ್ತು. ಹೀಗಾಗಿ ಪುಲಕೇಶಿ ನಗರ ಪೊಲೀಸ್ ಕಾನ್ಸ್ಟೇಬಲ್ಗೆ ಕೊರೊನಾ ಪಾಸಿಟಿವ್ ಬಂದಿದ್ದರೂ ಮತ್ತೊಮ್ಮೆ ಪರೀಕ್ಷೆಗೊಳಪಡಿಸಲು ಗಂಟಲು ದ್ರವದ ಮಾದರಿ ಸಂಗ್ರಹಿಸಲಾಗಿದೆ.