ETV Bharat / state

ಆ ಮೂವರ ಬಿಟ್ಟು ಈ ಮೂವರಿಗೆ ಡಿಸಿಎಂ‌ ಸ್ಥಾನ ನೀಡಿದ್ದು ಯಾಕೆ?

ಭವಿಷ್ಯದ ನಾಯಕತ್ವ ಹಾಗೂ ಪಕ್ಷಕ್ಕಾಗುವ ಲಾಭವನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಹೈಕಮಾಂಡ್ ಮೂರು ಡಿಸಿಎಂ ಸ್ಥಾನ ನೇಮಕ ಮಾಡಿದೆ ಎನ್ನಲಾಗುತ್ತಿದೆ.

ಈ ಮೂವರಿಗೆ ಡಿಸಿಎಂ‌ ಸ್ಥಾನ ನೀಡಿದ್ದು ಯಾಕೆ ಗೊತ್ತಾ
author img

By

Published : Aug 27, 2019, 2:24 AM IST

ಬೆಂಗಳೂರು: ರಾಜ್ಯದಲ್ಲಿ ಪಕ್ಷದ ಮುಂದಿನ ಭವಿಷ್ಯದ ದೃಷ್ಟಿಯಿಂದ ಉಪಮುಖ್ಯಮಂತ್ರಿ ಹುದ್ದೆಗಳನ್ನು‌ ಸೃಷ್ಠಿಸಿ ಭವಿಷ್ಯದ ನಾಯಕರನ್ನು ಹುಟ್ಟುಹಾಕುವ ನಿಟ್ಟಿನಲ್ಲಿ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ ಎಂದು ಬಿಜೆಪಿ ಆಪ್ತ ಮೂಲಗಳಿಂದ ತಿಳಿದುಬಂದಿದೆ.

ಈ ಹಿಂದೆ ಬಿಜೆಪಿ‌ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗಿದ್ದ ಜಗದೀಶ್ ಶೆಟ್ಟರ್, ಉಪಮುಖ್ಯಮಂತ್ರಿಗಳಾಗಿದ್ದ ಆರ್.ಅಶೋಕ್ ಹಾಗೂ ಕೆ.ಎಸ್.ಈಶ್ವರಪ್ಪ ಅವರಿಗೆ ಈ ಬಾರಿ ಯಡಿಯೂರಪ್ಪ ಸಂಪುಟದಲ್ಲಿ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗುತ್ತದೆ ಎನ್ನಲಾಗಿತ್ತು. ಆದರೆ ಬಿಜೆಪಿ ಹೈಕಮಾಂಡ್ ಇದಕ್ಕೆ ಅವಕಾಶ ನೀಡದೆ ಹೊಸಬರಿಗೆ ಮಣೆ ಹಾಕಿದೆ.

ಜಗದೀಶ್ ಶೆಟ್ಟರ್ ಲಿಂಗಾಯತ ಸಮುದಾಯದವರೇ ಆದರೂ ಆ ಸಮುದಾಯವನ್ನು ಸೆಳೆಯುವ ಶಕ್ತಿ ಹೊಂದಿಲ್ಲ, ಇನ್ನು ಆರ್.ಅಶೋಕ್ ಪ್ರಭಾವಿ ಒಕ್ಕಲಿಗ ಸಮುದಾಯಕ್ಕೆ ಸೇರಿದ್ದರೂ ಅವರು ಆ ಸಮುದಾಯದ ನಾಯಕರಾಗುವಲ್ಲಿ ಎಡವಿದ್ದಾರೆ. ಜೊತೆಗೆ ಪಕ್ಷ ನೀಡಿದ ಜವಾಬ್ದಾರಿ ನಿರ್ವಹಣೆಯಲ್ಲಿಯೂ ವೈಫಲ್ಯ ಕಂಡಿದ್ದಾರೆ. ಈಶ್ವರಪ್ಪ ಕುರುಬ ಸಮಯದಾಯಕ್ಕೆ ಸೇರಿದ್ದರೂ ಆ ಸಮುದಾಯದ ನಾಯಕರಾಗುವಲ್ಲಿ ವಿಫಲರಾಗಿದ್ದಾರೆ. ಈ ಮೂವರೂ ನಾಯಕರಿಂದ ಪಕ್ಷಕ್ಕೆ ಹೇಳಿಕೊಳ್ಳುವಂತಹ ಅನುಕೂಲ ಆಗಿಲ್ಲ ಎನ್ನುವ ಕಾರಣಕ್ಕೆ ಇವರನ್ನು ಡಿಸಿಎಂ ಹುದ್ದೆಯಿಂದ ಹೈಕಮಾಂಡ್ ಕೈಬಿಟ್ಟಿದೆ ಎನ್ನಲಾಗಿದೆ.

ಮೂರು ಡಿಸಿಎಂ ಸ್ಥಾನಕ್ಕೆ ಭವಿಷ್ಯದ ನಾಯಕತ್ವ ಹಾಗೂ ಪಕ್ಷಕ್ಕಾಗುವ ಲಾಭವನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಹೈಕಮಾಂಡ್ ನೇಮಕ ಮಾಡಿದೆ. ಮೊದಲನೇ ಡಿಸಿಎಂ ಹಿರಿಯ ನಾಯಕ ಎನ್ನುವ ಕಾರಣಕ್ಕೆ ಗೋವಿಂದ ಕಾರಜೋಳ ಅವರ ಪಾಲಾಗಿದೆ. ದಲಿತ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟು ಬಿಜೆಪಿ ಈ ಆಯ್ಕೆ ಮಾಡಿದೆ ಎಂದು ತಿಳಿದುಬಂದಿದೆ.

ಎರಡನೇ ಉಪಮುಖ್ಯಮಂತ್ರಿ ಸ್ಥಾನವನ್ನು ಲಕ್ಷ್ಮಣ ಸವದಿ ಅವರಿಗೆ ನೀಡಿದೆ. ಯಡಿಯೂರಪ್ಪ ನಂತರವೂ ಲಿಂಗಾಯತ ಸಮುದಾಯ ಬಿಜೆಪಿ ಜೊತೆಯಲ್ಲಿಯೇ ಇರಬೇಕು ಎನ್ನುವ ಮಾಸ್ಟರ್ ಪ್ಲಾನ್ ಮಾಡಿರುವ ಬಿಜೆಪಿ ವರಿಷ್ಠರು, ಯಡಿಯೂರಪ್ಪ ಅವರ ಸಮುದಾಯವನ್ನೇ ಪ್ರತಿನಿಧಿಸುವ ಲಕ್ಷ್ಮಣ ಸವದಿ ಅವರನ್ನೇ ಆಯ್ಕೆ ಮಾಡಿದೆಯಂತೆ. ಮಹಾರಾಷ್ಟ್ರ ಚುನಾವಣಾ ಉಸ್ತುವಾರಿ ಆಗಿರುವ ಸವದಿ ಹೈಕಮಾಂಡ್​ಗೆ ಹತ್ತಿರವಾಗಿರುವ ಕಾರಣ ಅವರಿಗೆ ಡಿಸಿಎಂ ಹುದ್ದೆ ನೀಡಿದೆ ಎನ್ನಲಾಗಿದೆ.

ಇನ್ನು ಮೂರನೇ ಡಿಸಿಎಂ ಹುದ್ದೆ ಡಾ.ಅಶ್ವತ್ಥ ನಾರಾಯಣ ಪಾಲಾಗಿದೆ. ‌ಅಶೋಕ್​ಗೆ ಪರ್ಯಾಯವಾಗಿ ಒಕ್ಕಲಿಗ ಸಮುದಾಯದ ನಾಯಕರಾಗಿ ಬೆಳೆಸಲು ಈ ಆಯ್ಕೆ ಮಾಡಲಾಗಿದೆ ಎನ್ನುವ ಮಾತುಗಳು ಕೇಳಿಬಂದಿವೆ. ಅನರ್ಹ ಶಾಸಕರು ರಾಜೀನಾಮೆ, ಮುಂಬೈ ವಾಸ್ತವ್ಯದ ವೇಳೆ ಅಶ್ವತ್ಥ ನಾರಾಯಣ ಕೆಲಸ ಮಾಡಿದ್ದರು. ಇದನ್ನು ಪರಿಗಣಿಸಿ ಡಿಸಿಎಂ ಹುದ್ದೆ ನೀಡಲಾಗಿದೆ.

ಈ ಮೂರು ಡಿಸಿಎಂ ಹುದ್ದೆ ನೇಮಕದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ತಂತ್ರಗಾರಿಕೆ ಇದೆ. ಭವಿಷ್ಯದ ನಾಯಕತ್ವದ ಹೆಸರಿನಲ್ಲಿ ಪರ್ಯಾಯ ನಾಯಕತ್ವಕ್ಕೆ ಪ್ಲಾನ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಪ್ಲಾನ್ ಎಷ್ಟರ ಮಟ್ಟಿಗೆ ಸಫಲವಾಗಲಿದೆ ಎನ್ನುವುದು ಸದ್ಯದ ಪ್ರಶ್ನೆ.

Intro:

ಬೆಂಗಳೂರು:ರಾಜ್ಯದಲ್ಲಿ ಪಕ್ಷದ ಮುಂದಿನ ಭವಿಷ್ಯದ ದೃಷ್ಟಿಯಿಂದ ಉಪ ಮುಖ್ಯಮಂತ್ರಿ ಹುದ್ದೆಗಳನ್ನು‌ ಸೃಷ್ಠಿಸಿ ಭವಿಷ್ಯದ ನಾಯಕರನ್ನು ಹುಟ್ಟುಹಾಕುವ ನಿಟ್ಟಿನಲ್ಲಿ ಉಪ ಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ ಎಂದು ಬಿಜೆಪಿ ಆಪ್ತ ಮೂಲಗಳಿಂದ ತಿಳಿದುಬಂದಿದೆ.

ಈ ಹಿಂದೆ ಬಿಜೆಪಿ‌ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗಿದ್ದ ಜಗದೀಶ್ ಶೆಟ್ಟರ್, ಉಪ ಮುಖ್ಯಮಂತ್ರಿಗಳಾಗಿದ್ದ ಆರ್.ಅಶೋಕ್ ಹಾಗು ಕೆ.ಎಸ್.ಈಶ್ವರಪ್ಪ ಅವರಿಗೆ ಈ ಬಾರಿ ಯಡಿಯೂರಪ್ಪ ಸಂಪುಟದಲ್ಲಿ ಉಪ ಮುಖ್ಯಮಂತ್ರಿ ಸ್ಥಾನ ನೀಡಲಾಗುತ್ತದೆ ಎನ್ನಲಾಗಿತ್ತು ಆದರೆ ಬಿಜೆಪಿ ಹೈಕಮಾಂಡ್ ಇದಕ್ಕೆ ಅವಕಾಶ ನೀಡದೇ ಹೊಸಬರಿಗೆ ಮಣೆ ಹಾಕಿದೆ.

ಜಗದೀಶ್ ಶೆಟ್ಟರ್ ಲಿಂಗಾಯತ ಸಮುದಾಯದವರೇ ಆದರೂ ಆ ಸಮುದಾಯವನ್ನು ಸೆಳೆಯುವ ಶಕ್ತಿ ಹೊಂದಿಲ್ಲ, ಇನ್ನು ಆರ್.ಅಶೋಕ್ ಪ್ರಭಾವಿ ಒಕ್ಕಲಿಗ ಸಮುದಾಯಕ್ಕೆ ಸೇರಿದ್ದರೂ ಅವರು ಆ ಸಮುದಾಯದ ನಾಯಕರಾಗುವಲ್ಲಿ ಎಡವಿದ್ದಾರೆ ಜೊತೆಗೆ ಪಕ್ಷ ನೀಡಿದ ಜವಾಬ್ದಾರಿ ನಿರ್ವಹಣೆಯಲ್ಲಿಯೂ ವೈಫಲ್ಯ ಕಂಡಿದ್ದಾರೆ. ಈಶ್ವರಪ್ಪ ಕುರುಬ ಸಮಯದಾಯಕ್ಕೆ ಸೇರಿದ್ದರೂ ಆ ಸಮುದಾಯದ ನಾಯಕರಾಗಯವಲ್ಲಿ ವಿಫಲರಾಗಿದ್ದಾರೆ ಈ ಮೂರೂ ನಾಯಕರಿಂದ ಪಕ್ಷಕ್ಕೆ ಹೇಳಿಕೊಳ್ಳುವಂತಹ ಅನುಕೂಲ ಆಗಿಲ್ಲ ಎನ್ನುವ ಕಾರಣಕ್ಕೆ ಇವರನ್ನು ಡಿಸಿಎಂ ಹುದ್ದೆಯಿಂದ ಹೈಕಮಾಂಡ್ ಕೈಬಿಟ್ಟಿದೆ.

ಮೂರು ಡಿಸಿಎಂ ಸ್ಥಾನಕ್ಕೆ ಭವಿಷ್ಯದ ನಾಯಕತ್ವ ಹಾಗು ಪಕ್ಷಕ್ಕಾಗುವ ಲಾಭವನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಹೈಕಮಾಂಡ್ ನೇಮಕ ಮಾಡಿದೆ. ಮೊದಲನೇ ಡಿಸಿಎಂ ಹಿರಿಯ ನಾಯಕ ಎನ್ನುವ ಕಾರಣಕ್ಕೆ ಗೋವಿಂದ ಕಾರಜೋಳ ಅವರ ಪಾಲಾಗಿದೆ.ದಲಿತ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟು ಬಿಜೆಪಿ ಈ ಆಯ್ಕೆ ಮಾಡಿದೆ.

ಎರಡನೇ ಉಪ ಮುಖ್ಯಮಂತ್ರಿ ಸ್ಥಾನವನ್ನು ಲಕ್ಷ್ಮಣ ಸವದಿ ಅವರಿಗೆ ನೀಡಿದೆ. ಯಡಿಯೂರಪ್ಪ ನಂತರವೂ ಲಿಂಗಾಯತ ಸಮುದಾಯ ಬಿಜೆಪಿ ಜೊತೆಯಲ್ಲಿಯೇ ಇರಬೇಕು ಎನ್ನುವ ಮಾಸ್ಟರ್ ಪ್ಲಾನ್ ಮಾಡಿರುವ ಬಿಜೆಪಿ ವರಿಷ್ಠರು ಯಡಿಯೂರಪ್ಪ ಅವರ ಸಮುದಾಯವನ್ನೇ ಪ್ರತಿನಿಧಿಸುವ ಲಕ್ಷ್ಮಣ ಸವದಿ ಅವರನ್ನೇ ಆಯ್ಕೆ ಮಾಡಿದೆ.ಭವಿಷ್ಯದ ನಾಯಕತ್ವವನ್ನು ಆಲೋಚಿಸಿ ಈ ನೇಮಕ ಮಾಡಿದೆ. ಮಹಾರಾಷ್ಟ್ರ ಚುನಾವಣಾ ಉಸ್ತುವಾರಿ ಆಗಿರುವ ಸವದಿ ಹೈಕಮಾಂಡ್ ಗೆ ಹತ್ತಿರವಾಗಿರುವ ಕಾರಣ ಅವರಿಗೆ ಡಿಸಿಎಂ ಹುದ್ದೆ ನೀಡಿದೆ ಎನ್ನಲಾಗಿದೆ.

ಇನ್ನು ಮೂರನೇ ಡಿಸಿಎಂ ಹುದ್ದೆ ಡಾ.ಅಶ್ವತ್ಥನಾರಾಯಣ್ ಪಾಲಾಗಿದೆ.‌ಅಶೋಕ್ ಗೆ ಪರ್ಯಾಯವಾಗಿ ಒಕ್ಕಲಿಗ ಸಮುದಾಯದ ನಾಯಕರಾಗಿ ಬೆಳೆಸಲು ಈ ಆಯ್ಕೆ ಮಾಡಲಾಗಿದೆ ಎನ್ನುವ ಮಾತುಗಳು ಕೇಳಿಬಂದಿದೆ. ಅನರ್ಹ ಶಾಸಕರು ರಾಜೀನಾಮೆ, ಮುಂಬೈ ವಾಸ್ತವ್ಯದ ವೇಳೆ ಅಶ್ವತ್ಥನಾರಾಯಣ್ ಕೆಲಸ ಮಾಡಿದ್ದರು ಇದನ್ನು ಪರಿಗಣಿಸಿ ಡಿಸಿಎಂ ಹುದ್ದೆ ನೀಡಲಾಗಿದೆ.

ಈ ಮೂರು ಡಿಸಿಎಂ ಹುದ್ದೆ ನೇಮಕದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ತಂತ್ರಗಾರಿಕೆ ಇದೆ. ಭವಿಷ್ಯದ ನಾಯಕತ್ವದ ಹೆಸರಿನಲ್ಲಿ ಪರ್ಯಾಯ ನಾಯಕತ್ವಕ್ಕೆ ಪ್ಲಾನ್ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ ಆದರೆ ಈ ಪ್ಲಾನ್ ಎಷ್ಟರ ಮಟ್ಟಿಗೆ ಸಫಲವಾಗಲಿದೆ ಎನ್ನುವುದು ಸಧ್ಯದ ಪ್ರಶ್ನೆಯಾಗಿದೆ.Body:.Conclusion:null
ETV Bharat Logo

Copyright © 2024 Ushodaya Enterprises Pvt. Ltd., All Rights Reserved.