ಬೆಂಗಳೂರು: ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ರಾಜ್ಯದಲ್ಲಿ 2 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಚುನಾವಣೆ ದಿನಾಂಕದ ಬಗ್ಗೆ ನಿಮ್ಮ ಈ ಟಿವಿ ಭಾರತ ರಿಯಾಲಿಟಿ ಚೆಕ್ ನಡೆಸಿದೆ.
ರಾಜ್ಯದಲ್ಲಿ ಚುನಾವಣಾ ಕಾವು ಏರುತ್ತಲಿದೆ. ಒಂದು ಕಡೆ ಪ್ರಚಾರದ ಭರಾಟೆ ಜೋರಾಗಿ ನಡೆಯುತ್ತಿದ್ದರೆ, ಮತ್ತೊಂದು ಕಡೆ ಚುನಾವಣಾ ಆಯೋಗ ಮತದಾನದ ಜಾಗೃತಿ ಕೆಲಸದಲ್ಲಿ ತೊಡಗಿದೆ. ಯಾರೊಬ್ಬರೂ ಮತದಾನದಿಂದ ವಂಚಿತರಾಗಬೇಡಿ ಅಂತಾ ಮನವಿ ಮಾಡುತ್ತಿದೆ. ಇವೆಲ್ಲದರ ನಡುವೆ ನಮ್ಮ ಜನರಿಗೆ ಮತದಾನ ಯಾವಾಗ ಅಂತಾ ಗೊತ್ತಿದೆಯಾ ಗೊತ್ತಿಲ್ವಾ ಅಂತಾ ಈ ಟಿವಿ ಭಾರತ ಒಂದು ರಿಯಾಲಿಟಿ ಚೆಕ್ ನಡೆಸಿದೆ. ಇದರಲ್ಲಿ ಹಿರಿಯ ನಾಗರಿಕರು ಸರಿಯಾದ ದಿನವನ್ನ ತಿಳಿಸಿದರೆ, ಇನ್ನು ಕೆಲವರು ನಮ್ಮ ಕ್ಷೇತ್ರದ ದಿನಾಂಕ ಗೊತ್ತು ಅಷ್ಟೇ ಅಂತಾ ಉತ್ತರ ಕೊಟ್ಟಿದ್ದಾರೆ.
ನಾವೆಲ್ಲ ಯಾವ ರೀತಿಯಲ್ಲಿ ಹಬ್ಬ- ಹರಿದಿನಗಳನ್ನ ಆಚರಣೆ ಮಾಡುತ್ತಿವೋ ಹಾಗೇ, ದೇಶದ ಮತದಾನದ ಹಬ್ಬವನ್ನ ಆಚರಣೆ ಮಾಡಬೇಕಿದೆ. ಆಗಷ್ಟೇ ಒಂದೊಳ್ಳೆ ಸಮಾಜ ನಿರ್ಮಾಣ ಸಾಧ್ಯವಾಗೋದು. ಎಲ್ಲರೂ ಸೇರಿ ನಿಮ್ಮ ಹಕ್ಕನ್ನ ಚಲಾಯಿಸಿ. ಆದರೆ, ಅದಕ್ಕೂ ಮೊದಲು ಮತದಾನ ಯಾವಾಗ ಎಂಬುದನ್ನ ತಿಳಿದು ನಿಮ್ಮ ಅಮೂಲ್ಯ ಮತಹಾಕಿ. ಇದು ಈ ಟಿವಿ ಭಾರತ ಮಾಡುತ್ತಿರುವ ಮನವಿ.
ಈ ಬಾರಿ ಎರಡು ಹಂತದಲ್ಲಿ ಚುನಾವಣೆ ನಡೆಯಲಿದ್ದು, ನಿಮ್ಮ ಕ್ಷೇತ್ರಗಳಲ್ಲಿ ಯಾವಾಗ ಚುನಾವಣಾ ದಿನ ನಿಗಧಿಯಾಗಿದೆ ಎಂಬುದನ್ನ ಖಚಿತ ಪಡಿಸಿಕೊಳ್ಳಿ. ಗೊಂದಲದಿಂದಾಗಿ ಮತದಾನದ ಹಕ್ಕಿನಿಂದ ವಂಚಿತರಾಗದಿರಿ. ಮತ ಹಾಕಲು ಇನ್ನು ಸಾಕಷ್ಟು ದಿನಗಳು ಬಾಕಿ ಇವೆ. ಆದರೆ, ಅದಕ್ಕೂ ಮೊದಲು ನಮ್ಮ ಹಕ್ಕಿನದಿನ ಯಾವಾಗ ಎಂಬುದನ್ನ ತಿಳಿದುಕೊಳ್ಳಿ.