ETV Bharat / state

ಕೋವಿಡ್ ಲಸಿಕೆ ಹಂಚಿಕೆಯಲ್ಲಿ ಬಿಬಿಎಂಪಿ ಎಸಗಿರುವ ಅಕ್ರಮದ ತನಿಖೆ ನಡೆಸಿ : ರಾಮಲಿಂಗ ರೆಡ್ಡಿಗೆ ಡಿಕೆಶಿ ಪತ್ರ - ಬಿಬಿಎಂಪಿ ಎಸಗಿರುವ ಅಕ್ರಮದ ತನಿಖೆ ನಡೆಸಿ

ಈ ಸರಕಾರದ್ದು ಎಮ್ಮೆ ಚರ್ಮ, ಇವರು ಎಲ್ಲೆಲ್ಲಿ, ಏನೇನು ವ್ಯವಸ್ಥೆ ಮಾಡಿದ್ದಾರೆ ಎಂಬುದನ್ನೂ ನೀವು ಪರಾಮರ್ಶೆ ಮಾಡಿ ಎಂದು ಕೇಳಿಕೊಳ್ಳುತ್ತಿದ್ದೇನೆ. ನಿನ್ನೆ ಆಡಳಿತ ಪಕ್ಷದ ಬೆಂಗಳೂರಿನ ಸಂಸದರು ಮತ್ತು ಶಾಸಕರು ಸರಕಾರದ ವೈಫಲ್ಯದತ್ತ ಮಾಧ್ಯಮದ ಮೂಲಕ ಜನರ ಗಮನ ಸೆಳೆದಿದ್ದಾರೆ..

Ramlingareddy
Ramlingareddy
author img

By

Published : May 5, 2021, 6:27 PM IST

ಬೆಂಗಳೂರು : ಕೋವಿಡ್ ಸೋಂಕಿತರಿಗೆ ಹಾಸಿಗೆ ಹಂಚುವಲ್ಲಿ ಬಿಬಿಎಂಪಿ ಎಸಗಿರುವ ಅಕ್ರಮದ ಬಗ್ಗೆ ತನಿಖೆ ನಡೆಸಿ ಸರಕಾರ ಜನರಿಗೆ ಮಾಹಿತಿ ನೀಡಬೇಕು ಅಂತ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಲಹೆ ನೀಡಿದ್ದಾರೆ.

ವಿಧಾನಮಂಡಲ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷರು ಆಗಿರುವ ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಪತ್ರ ಬರೆದು ಈ ಮಾಹಿತಿ ನೀಡಿರುವ ಡಿಕೆಶಿ, ಕೋವಿಡ್ ಮಹಾಮಾರಿಯ ಎರಡನೇ ಅಲೆಯ ಅಬ್ಬರದ ಹಿನ್ನೆಲೆ ರಾಜ್ಯದ ಜನತೆ ಭಯ, ಆತಂಕ, ನೋವು, ಸಂಕಷ್ಟ ಮತ್ತು ಸಿಟ್ಟಿಗೆ ಒಳಗಾಗಿದ್ದಾರೆ.

ಇಂತಹ ಸಂದರ್ಭದಲ್ಲಿ ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರವು ಜನರನ್ನು ನಿರಾಸೆಗೊಳಿಸಿದೆ. ಜನತೆಯ ನೋವಿಗೆ ಸ್ಪಂದಿಸಲು ಮತ್ತು ನೆರವು ನೀಡಲು ಸರಕಾರದ ಸಚಿವರುಗಳು ವಿಫಲರಾಗಿದ್ದಾರೆ.

ಸಂಬಂಧಿತ ಅಧಿಕಾರಿಗಳು ಸಮರ್ಪಕ ಕೆಲಸ ನಿರ್ವಹಣೆ, ಕರ್ತವ್ಯ ಪಾಲನೆ ಮತ್ತು ಜವಾಬ್ದಾರಿಯುತವಾಗಿ ನಡೆಯುವಂತೆ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದಿದ್ದಾರೆ.

ಪ್ರತಿ ಜಿಲ್ಲೆಗೂ ಕೋವಿಡ್ ಉಸ್ತುವಾರಿಯಾಗಿ ಮಂತ್ರಿಗಳನ್ನು ನಿಯೋಜಿಸಬೇಕು ಎಂದು ನಾನು ಬಹಳ ಹಿಂದೆಯೇ ಹೇಳಿದ್ದೆ. ಆದರೆ, ಸರ್ಕಾರ ಈಗ ಅದನ್ನು ಮಾಡಿದೆ. ಕೊಳ್ಳೆ ಹೊಡೆದ ಮೇಲೆ ಊರ ಬಾಗಿಲು ಹಾಕಿದಂತೆ. ಅದೇ ರೀತಿ ಕೋವಿಡ್ ನಿಯಂತ್ರಿಸಲು ನಿಮ್ಮ ಕೈಯಲ್ಲಿ ಆಗುತ್ತಿಲ್ಲ.

ಮೃತಪಟ್ಟವರ ಗೌರವಯುತ ಸಂಸ್ಕಾರಕ್ಕಾದರೂ ಹೊಸದಾಗಿ ಸ್ಮಶಾನಗಳನ್ನು ಮಾಡಿ ಸತ್ತವರ ಕುಟುಂಬ ಸದಸ್ಯರನ್ನು ಸುಲಿಗೆ ಮಾಡಲಾಗುತ್ತಿದೆ ಎಂದು ಹೇಳಿದ್ದೆ. ಆ ಕೆಲಸವನ್ನೂ ಬಹಳ ತಡವಾಗಿ ಮಾಡಿದರು.

ಈ ಸರಕಾರದ್ದು ಎಮ್ಮೆ ಚರ್ಮ, ಇವರು ಎಲ್ಲೆಲ್ಲಿ, ಏನೇನು ವ್ಯವಸ್ಥೆ ಮಾಡಿದ್ದಾರೆ ಎಂಬುದನ್ನೂ ನೀವು ಪರಾಮರ್ಶೆ ಮಾಡಿ ಎಂದು ಕೇಳಿಕೊಳ್ಳುತ್ತಿದ್ದೇನೆ. ನಿನ್ನೆ ಆಡಳಿತ ಪಕ್ಷದ ಬೆಂಗಳೂರಿನ ಸಂಸದರು ಮತ್ತು ಶಾಸಕರು ಸರಕಾರದ ವೈಫಲ್ಯದತ್ತ ಮಾಧ್ಯಮದ ಮೂಲಕ ಜನರ ಗಮನ ಸೆಳೆದಿದ್ದಾರೆ.

ಎಲ್ಲಾ ವಿಚಾರಗಳಲ್ಲೂ ದಿವ್ಯ ನಿರ್ಲಕ್ಷ್ಯ ಮತ್ತು ವ್ಯಾಪಕ ಭ್ರಷ್ಟಾಚಾರ ಕಂಡು ಬರುತ್ತಿದೆ ಎಂದು ಹೇಳಿದ್ದಾರೆ. ನಾನು ಮತ್ತು ನಮ್ಮ ಶಾಸಕಾಂಗ ಪಕ್ಷದ ನಾಯಕರಾದ ಸಿದ್ಧರಾಮಯ್ಯನವರು ಚಾಮರಾಜನಗರಕ್ಕೆ ಭೇಟಿ ನೀಡಿ ಅಲ್ಲಿನ ಆಸ್ಪತ್ರೆಯ ದುಸ್ಥಿತಿ ಮತ್ತು ಜನರ ಯಾತನೆಗಳನ್ನು ಕಣ್ಣಾರೆ ಕಂಡು ಬಂದಿದ್ದೇವೆ.

ಮುಖ್ಯಮಂತ್ರಿಗಳು ಹಾಗೂ ಸಚಿವರು ತಮ್ಮದೇ ಆದ ಕಾರ್ಯಬಾಹುಳ್ಯದಲ್ಲಿ ಮಗ್ನರಾಗಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕ ಲೆಕ್ಕಪತ್ರ ಸಮಿತಿ (Public Accounts Committee) ಅಧ್ಯಕ್ಷರಾಗಿರುವ ತಾವು, ತಮ್ಮ ಸಮಿತಿಯ ಸದಸ್ಯರು, ಬೆಂಗಳೂರಿನ ಶಾಸಕರುಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸಮಾಲೋಚನೆ ಮಾಡಿ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದ ವೆಂಟಿಲೇಟರ್, ಆಕ್ಸಿಜನ್ ಸಿಲಿಂಡರ್‌ಗಳು, ಆಸ್ಪತ್ರೆ ಬೆಡ್‌ಗಳು ಮತ್ತಿತರ ಖರೀದಿಗಳ ಲೆಕ್ಕಪತ್ರಗಳ ಪರಿಶೀಲನೆ ನಡೆಸಬೇಕಾದ ಅನಿವಾರ್ಯತೆ ಇದೆ.

ಈ ಹಿನ್ನೆಲೆಯಲ್ಲಿ ತಾವು ರಾಜ್ಯ ಲೆಕ್ಕಪತ್ರ ಸಮಿತಿಯ ಅಧ್ಯಕ್ಷರಾಗಿ, ರೂಲ್ಸ್ ಆಫ್ ಪ್ರೊಸೀಜರ್ ಅಂಡ್ ಕಂಡಕ್ಟ್ ಆಫ್ ಬ್ಯುಸಿನೆಸ್ ಇನ್ ಕರ್ನಾಟಕ ಲೆಜಿಸ್‌ಲೇಚರ್‌ ಹಾಗೂ ವಿಧಾನಸಭೆಯ ನಿಯಮ 264ರ ಅಡಿಯಲ್ಲಿ ಕೂಡಲೇ ಸಮಿತಿಯ ಸಭೆಯನ್ನು ಕರೆದು ಚರ್ಚಿಸಿ, ದುರಂತ ಸ್ಥಳಗಳು ಹಾಗೂ ಆಸ್ಪತ್ರೆಗಳಿಗೆ ಭೇಟಿ ನೀಡಿ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಮಧ್ಯಂತರ ವರದಿಯನ್ನು ಸಿದ್ಧಪಡಿಸಿ ಮಾನ್ಯ ವಿಧಾನಸಭಾ ಸಭಾಧ್ಯಕ್ಷರು ಮತ್ತು ಮಾನ್ಯ ವಿಧಾನ ಪರಿಷತ್ ಸಭಾಪತಿಗಳ ಮೂಲಕ ಸರಕಾರಕ್ಕೆ ತಲುಪಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದೇನೆ.

ಈ ಮೂಲಕ ಸರಕಾರಕ್ಕೆ ಎಚ್ಚರಿಕೆ ನೀಡಿ ಚುರುಕು ಮುಟ್ಟಿಸುವ ಕೆಲಸ ಮಾಡಿ ಜನರಿಗೆ ನೆರವಾಗಬೇಕಿದೆ. ಆದುದರಿಂದ, ತಾವು ಆದಷ್ಟು ಬೇಗ ಈ ಕರ್ತವ್ಯ ನಿರ್ವಹಿಸುತ್ತೀರಿ ಎಂಬುದಾಗಿ ಆಶಿಸುತ್ತೇನೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.