ಬೆಂಗಳೂರು : ನೇಮಕಾತಿಗೆ ಆಗ್ರಹಿಸಿ ಪಿಯು ಉಪನ್ಯಾಸಕರು ಪ್ರತಿಭಟಿಸುತ್ತಿರುವ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದಾರೆ.
ಆರು ವರ್ಷ ಕಳೆದರೂ ಪಿಯು ಉಪನ್ಯಾಸಕರಿಗೆ ನೇಮಕಾತಿ ಆದೇಶ ಸಿಕ್ಕಿಲ್ಲ. ಇದರಿಂದ ಅವರಿಗೆ ಸಾಕಷ್ಟು ನಷ್ಟವಾಗಿದೆ. ನೇಮಕಾತಿ ವಿಳಂಬ ಸರಿಪಡಿಸಿ, ಕೂಡಲೇ ನೇಮಕಾತಿ ಆದೇಶ ಹೊರಡಿಸಿ ಎಂದು ಡಿಕೆಶಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಪದವಿ ಪೂರ್ವ ಶಿಕ್ಷಣ ಇಲಾಖೆ ಕಚೇರಿ ಮುಂಭಾಗ ಪ್ರತಿಭಟನೆ ನಡೆಸುತ್ತಿರುವ ಉಪನ್ಯಾಸಕರನ್ನು ಬುಧವಾರ ಸಂಜೆ ಭೇಟಿ ಮಾಡಿದ್ದ ಡಿ.ಕೆ ಶಿವಕುಮಾರ್, ಚರ್ಚೆ ನಡೆಸಿದ್ದರು. ಇಂದು ಪತ್ರದ ಮೂಲಕ ಸಮಸ್ಯೆ ಬಗೆಹರಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಕೂಡ ಟ್ವೀಟ್ ಮೂಲಕ ಶಿಕ್ಷಕರ ಪರ ಕಾಳಜಿ ವ್ಯಕ್ತಪಡಿಸಿದ್ದು, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಶಿಕ್ಷಕರನ್ನು ಭೇಟಿ ಮಾಡಿ ಸಮಸ್ಯೆಯನ್ನು ಆಲಿಸಿದ್ದಾರೆ.
-
ಮಾನ್ಯ @BSYBJP ಹಾಗೂ ಶಿಕ್ಷಣ ಸಚಿವ @nimmasuresh ಅವರೇ,
— Siddaramaiah (@siddaramaiah) October 12, 2020 " class="align-text-top noRightClick twitterSection" data="
ಪಿಯುಸಿ ನೇಮಕಾತಿ ಪ್ರಕ್ರಿಯೆ ಮುಗಿದ ಮೇಲೆಯೂ ನೇಮಕಾತಿ ಪತ್ರ ದೊರೆಯದೇ ಈ ದಿನ ಮಳೆಯಲ್ಲಿಯೇ ಪಿಯುಸಿ ಮಂಡಳಿಯ ಎದುರು ಕೂತಿದ್ದಾರೆ.
ಈಗಲಾದರೂ ಸಹ ಕಣ್ತೆರೆಯಿರಿ.
ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಿ ಅವರ ಆತಂಕವನ್ನು ದೂರ ಮಾಡಿ pic.twitter.com/G51ETTi71G
">ಮಾನ್ಯ @BSYBJP ಹಾಗೂ ಶಿಕ್ಷಣ ಸಚಿವ @nimmasuresh ಅವರೇ,
— Siddaramaiah (@siddaramaiah) October 12, 2020
ಪಿಯುಸಿ ನೇಮಕಾತಿ ಪ್ರಕ್ರಿಯೆ ಮುಗಿದ ಮೇಲೆಯೂ ನೇಮಕಾತಿ ಪತ್ರ ದೊರೆಯದೇ ಈ ದಿನ ಮಳೆಯಲ್ಲಿಯೇ ಪಿಯುಸಿ ಮಂಡಳಿಯ ಎದುರು ಕೂತಿದ್ದಾರೆ.
ಈಗಲಾದರೂ ಸಹ ಕಣ್ತೆರೆಯಿರಿ.
ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಿ ಅವರ ಆತಂಕವನ್ನು ದೂರ ಮಾಡಿ pic.twitter.com/G51ETTi71Gಮಾನ್ಯ @BSYBJP ಹಾಗೂ ಶಿಕ್ಷಣ ಸಚಿವ @nimmasuresh ಅವರೇ,