ETV Bharat / state

ಜಮೀರ್, ವಿನಯ್ ಕುಲಕರ್ಣಿಯವರನ್ನು ಪಕ್ಷ ಪೂರ್ಣಪ್ರಮಾಣದಲ್ಲಿ ಸದ್ಬಳಕೆ ಮಾಡಿಕೊಳ್ಳಲಿದೆ : ಡಿಕೆಶಿ - ಬೆಂಗಳೂರಿನಲ್ಲಿ ಕೊರೊನಾ ವಾರಿಯರ್​​ಗಳಿಗೆ ಸನ್ಮಾನ

ಸರ್ಕಾರ ಕೋವಿಡ್​​ನಿಂದ ಸತ್ತವರಿಗೆ ಒಬ್ರಿಗೂ ಸಹಾಯ ಮಾಡಿಲ್ಲ. ವ್ಯಾಪಾರಿಗಳಿಗೆ ಯಾವೊಂದು ಟ್ಯಾಕ್ಸ್ ಕಡಿಮೆ ಮಾಡಲಿಲ್ಲ. ಸರ್ಕಾರ ಒಬ್ಬರಿಗೂ ನೆರವಾಗಲಿಲ್ಲ. ನನ್ನ ವಿರುದ್ಧ ಬೇಕಾದಷ್ಟು ಟೀಕೆ-ಟಿಪ್ಪಣಿ ಮಾಡ್ತಾರೆ. ನಾನು ಮುಸ್ಲಿಮರನ್ನು ಓಲೈಕೆ ಮಾಡ್ತೇನೆ, ಹಾಗೇ ಹೀಗೆ ಅಂತಾ ಬೇಕಾದಷ್ಟು ಮಾತಾಡಿಬಿಟ್ಟರು. ಹೌದು, ನಾನು ಒಪ್ಪಿಕೊಳ್ತೇನೆ ಮುಸ್ಲೀಮರೆಲ್ಲ ನನ್ನ ಸಹೋದರರು..

shivlumar
ಕೊರೊನಾ ವಾರಿಯರ್​​ಗಳಿಗೆ ಸನ್ಮಾನ
author img

By

Published : Aug 22, 2021, 5:00 PM IST

ಬೆಂಗಳೂರು : ಮಾಜಿ ಸಚಿವರಾದ ಜಮೀರ್ ಅಹ್ಮದ್​​ ಖಾನ್‌ ಹಾಗೂ ವಿನಯ್ ಕುಲಕರ್ಣಿ ಅವರನ್ನು ಪೂರ್ಣ ಪ್ರಮಾಣದಲ್ಲಿ ಪಕ್ಷದ ಕೆಲಸಕ್ಕೆ ಬಳಸಿಕೊಳ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.

ಕೇಂದ್ರ ಸಚಿವರಿಗೆ ಒಂದು ಕಾನೂನಾ? : ಬೆಂಗಳೂರಿನಲ್ಲಿ ಕೊರೊನಾ ವಾರಿಯರ್​​ಗಳಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಜಮೀರ್ ಹಾಗೂ ವಿನಯ್ ಕುಲಕರ್ಣಿ ಪರ ಬ್ಯಾಟ್ ಮಾಡಿದರು. ಇವರನ್ನ ಪಕ್ಷದ ಚಟುವಟಿಕೆಯಲ್ಲಿ ಬಳಸಿಕೊಳ್ಳುವ ವಿಚಾರದಲ್ಲಿ ಅನುಮಾನವೇ ಬೇಡ.

ವಿನಯ್ ಕುಲಕರ್ಣಿ ನಮ್ಮ ಹಿರಿಯ ನಾಯಕರು, ಮಂತ್ರಿ ಆಗಿದ್ದವರು. ಜಮೀರ್ ಹಾಗೂ ವಿನಯ್ ಕುಲಕರ್ಣಿ ಪರ ನಮ್ಮ ಪಕ್ಷ ಇದೆ. ಕುಲಕರ್ಣಿ ವಿರುದ್ಧ ಕೋವಿಡ್ ನಿಯಮ ಉಲ್ಲಂಘಿಸಿದ್ದಕ್ಕೆ ಕೇಸ್ ಮಾಡಿದ್ದಾರೆ. ಬಹಳ ಸಂತೋಷ. ಆದರೆ, ಇವರ ಕೇಂದ್ರ ಮಂತ್ರಿಗಳು ಎಲ್ಲ ನಿಯಮ ಪಾಲನೆ ಮಾಡಿದ್ದಾರಾ? ಕೇಂದ್ರ ಸಚಿವರಿಗೆ ಒಂದು ಕಾನೂನಾ? ಎಂದು ಪ್ರಶ್ನಿಸಿದರು.

ಮಾಜಿ ಸಚಿವರುಗಳಾದ ಜಮೀರ್‌, ವಿನಯ್ ಕುಲಕರ್ಣಿ ಕುರಿತಂತೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪ್ರತಿಕ್ರಿಯೆ..

ಸಿ ಟಿ ರವಿ ಹೇಳಿಕೆಗೆ ಡಿಕೆಶಿ ತಿರುಗೇಟು : ಕಾಂಗ್ರೆಸ್​ನವರು ಮಾನಸಿಕ ಅಸ್ವಸ್ಥರು ಎಂಬ ಸಿಟಿ ರವಿ ಹೇಳಿಕೆಗೆ ಡಿಕೆಶಿ ತಿರುಗೇಟು ನೀಡಿದರು. ಹೌದು, ಸಿ ಟಿ ರವಿಯಿಂದಾಗಿಯೇ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ಈಗ ತಕ್ಷಣ ನಾನು ನಿಮ್ಹಾನ್ಸ್ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯುತ್ತೇನೆ. ಸಿ ಟಿ ರವಿ ಸಲಹೆ ಮೇರೆಗೆ ಚಿಕಿತ್ಸೆ ಪಡಿತೇನೆ ಎಂದ್ರು.

ಒಂದು ಸಮುದಾಯ ಟಾರ್ಗೆಟ್ ಮಾಡಿ ಇಡಿ ದಾಳಿ ಎಂಬ ಆರೋಪ ವಿಚಾರ ಮಾತನಾಡಿದ ಅವರು, ಜಮೀರ್ ಅಹಮ್ಮದ್​ ಈಗಾಗಲೇ ನನ್ನ ತಪ್ಪಿಲ್ಲ ಅಂತಾ ಹೇಳಿಕೊಂಡಿದ್ದಾರೆ. ಈ ವಿಚಾರದಲ್ಲಿ ಹೆಚ್ಚು ಕಮೆಂಟ್ ಮಾಡಲು ಹೋಗಲ್ಲ. ಆದರೆ, ಇಡೀ ದೇಶದಲ್ಲಿ ಎಲ್ಲ ಕಡೆಯೂ ಹೀಗೇ ಆಗ್ತಿದೆ. ಇದರ ವಿರುದ್ಧ ನಾವೂ ಕೂಡ ಹೋರಾಟ‌ ಮಾಡ್ತಿದ್ದೇವೆ ಎಂದರು.

ಪಂಕ್ಚರ್ ಇವರು ಹಾಕ್ತಾರಾ?: ಅವನ್ಯಾರೋ ಎಂಪಿ ಬಹಳ ಬುದ್ಧಿವಂತ, ಅವನಷ್ಟು ನಾವು ಓದಿಲ್ಲ ಮಾಡಿಲ್ಲ. ಮುಸ್ಲಿಂ ಸಮಯದಾಯದವರನ್ನು ಪಂಕ್ಚರ್ ಹಾಕೋರು ಅಂದ. ಬೌರಿಂಗ್ ಹಾಸ್ಪಿಟಲ್‌ ಜಾತಿ ಧರ್ಮದ ಆಧಾರದ ಮೇಲಿದೆಯಾ? ಪಂಕ್ಚರ್ ಇವರು ಹಾಕ್ತಾರಾ? ರಾಜ್ಯದ ಎಲ್ಲ ಧರ್ಮದವರ ಸಾವಿನ ಹೆಣ ಹೊತ್ತವರು ಮುಸ್ಲಿಮರು.

ಈಗ ಮಾತಾಡೋ ಗಂಡುಗಳು ಯಾರಾದರೂ ಹೆಣಗಳಿಗೆ ಕೈಕೊಟ್ಟರಾ? ಸಚಿವರಾಗಿದ್ದ ಸುರೇಶ್ ಅಂಗಡಿಯವರ ಹೆಣವನ್ನು ಅವರ ಕುಟುಂಬಸ್ಥರೂ ನೋಡಲಾಗಲಿಲ್ಲ. ಇದೇನಾ ದೇಶದ ಸಂಸ್ಕೃತಿ? ಎಂದು ಪ್ರಶ್ನಿಸಿದ್ರು.

ಸಿದ್ದರಾಮಯ್ಯ ಸರ್ಕಾರದಲ್ಲಿ ಮೌಢ್ಯ ಪ್ರತಿಬಂಧಕ ಕಾಯ್ದೆ ಬಂತು. ಜನರ ನಂಬಿಕೆಗೆ ಕೈ ಹಾಕೋದು ಬೇಡ ಅಂತಾ ನಾನು ಸಲಹೆ ಕೊಟ್ಟೆ. ಒಂದೊಂದು ಧರ್ಮದಲ್ಲಿ ಒಂದೊಂದು ನಂಬಿಕೆ ಇರತ್ತೆ. ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ 36 ಜ‌ನ ಸತ್ತರು. ಆ ಕುಟುಂಬಸ್ಥರ ನೋವನ್ನು ನಾನು ವಿಡಿಯೋ ಮಾಡಿ ಯೂಟ್ಯೂಬ್‌ನಲ್ಲಿ ಹಾಕಿಸ್ತಿದ್ದೀನಿ.

4 ಲಕ್ಷ ಜನ ಕೋವಿಡ್​​ನಿಂದ ಸತ್ತರು. ಬೆಡ್ ಸಿಗದೆ, ಓಡಾಡಿ ನೂರಾರು ಜನ ಸತ್ರು. ಆದರೆ, ಪರಿಹಾರ ಕೊಡಬೇಕಾಗುತ್ತದೆ ಅಂತಾ ಆ ಲೆಕ್ಕವನ್ನೇ ತೆಗೆದುಬಿಟ್ಟಿದ್ದಾರೆ. ಅಸೆಂಬ್ಲಿ ಬಂದಾಗ ನಾವು ವಿಚಾರ ಎತ್ತಿ ಹೋರಾಟ ಮಾಡ್ತೇವೆ ಎಂದರು.

ಮುಸ್ಲಿಮರೆಲ್ಲ ನನ್ನ ಸಹೋದರರು : ಸರ್ಕಾರ ಕೋವಿಡ್​​ನಿಂದ ಸತ್ತವರಿಗೆ ಒಬ್ರಿಗೂ ಸಹಾಯ ಮಾಡಿಲ್ಲ. ವ್ಯಾಪಾರಿಗಳಿಗೆ ಯಾವೊಂದು ಟ್ಯಾಕ್ಸ್ ಕಡಿಮೆ ಮಾಡಲಿಲ್ಲ. ಸರ್ಕಾರ ಒಬ್ಬರಿಗೂ ನೆರವಾಗಲಿಲ್ಲ. ನನ್ನ ವಿರುದ್ಧ ಬೇಕಾದಷ್ಟು ಟೀಕೆ-ಟಿಪ್ಪಣಿ ಮಾಡ್ತಾರೆ. ನಾನು ಮುಸ್ಲಿಮರನ್ನು ಓಲೈಕೆ ಮಾಡ್ತೇನೆ, ಹಾಗೇ ಹೀಗೆ ಅಂತಾ ಬೇಕಾದಷ್ಟು ಮಾತಾಡಿಬಿಟ್ಟರು. ಹೌದು, ನಾನು ಒಪ್ಪಿಕೊಳ್ತೇನೆ ಮುಸ್ಲೀಮರೆಲ್ಲ ನನ್ನ ಸಹೋದರರು ಎಂದರು.

shivkumar
ಕೊರೊನಾ ವಾರಿಯರ್​​ಗಳಿಗೆ ಸನ್ಮಾನ

ಮತ್ತೆ ಸಿಎಂ ಪ್ರಸ್ತಾಪ : ಕಾರ್ಯಕ್ರಮದಲ್ಲಿ ಡಿಕೆಶಿ ಮುಂದಿನ ಸಿಎಂ ಎಂದ ಡಾ.ಆಂಜಿನಪ್ಪ ಮತ್ತೊಮ್ಮೆ ತಣ್ಣಗಾಗಿದ್ದ ಪಕ್ಷದ ಬಹುದೊಡ್ಡ ವಿವಾದಕ್ಕೆ ತುಪ್ಪ ಸುರಿಯುವ ಕಾರ್ಯ ಮಾಡಿದರು.

ಮುಂದಿನ ಸಿಎಂ ಇಲ್ಲೇ ಕುಳಿತ್ತಿದ್ದಾರೆ ಎಂದ ಡಾ.ಆಂಜಿನಪ್ಪ ಮಾತಿಗೆ ಕಾರ್ಯಕ್ರಮದಲ್ಲಿ ಚಪ್ಪಾಳೆ ಹಾಗೂ ಶಿಳ್ಳೆ ಹೊಡೆದು ಪ್ರಶಂಸೆ ವ್ಯಕ್ತಪಡಿಸಿದರು. ಬಹುತೇಕ ಮುಸ್ಲಿಂ ಸಮುದಾಯವರು ಭಾಗಿಯಾಗಿರುವ ಕಾರ್ಯಕ್ರಮದಲ್ಲಿ, ಸಿಎಂ ಕೂಗು ಕೇಳಿದ ಕೂಡಲೇ ಖುಷಿಯಿಂದ ಕೂಗಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.