ETV Bharat / state

ಡಿಕೆಶಿ ಪದಗ್ರಹಣಕ್ಕೆ ಸರ್ಕಾರದ ಅಧಿಕೃತ ಅನುಮತಿ ಸಿಕ್ಕ ಬಳಿಕ ಕಾರ್ಯಕ್ರಮ: ಡಿ.ಕೆ. ಸುರೇಶ್ - ಸಿಎಂ ಅನುಮತಿ ಹಿನ್ನೆಲೆ ಕಾರ್ಯಕ್ರಮದ ದಿನಾಂಕ ನಿಗದಿಪಡಿಸಿ ಆಚರಿಸುತ್ತೇವೆ: ಡಿ.ಕೆ ಸುರೇಶ್

ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಪದಗ್ರಹಣಕ್ಕೆ ನಮ್ಮ ಅಭ್ಯಂತರವಿಲ್ಲ ಎಂಬ ಸಿಎಂ ಬಿಎಸ್​ವೈ ಹೇಳಿಕೆ ಸಂತೋಷ ತಂದಿದೆ. ಆದ್ರೆ, ಅಧಿಕೃತ ಆದೇಶ ನೀಡಿದ ಬಳಿಕ ಕಾರ್ಯಕ್ರಮ ಮಾಡುತ್ತೇವೆ ಎಂದು ಡಿಕೆಶಿ ಸಹೋದರ, ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ​.

dk-suresh
ಸಿಎಂ ಅನುಮತಿ ಹಿನ್ನೆಲೆ ಕಾರ್ಯಕ್ರಮದ ದಿನಾಂಕ ನಿಗದಿಪಡಿಸಿ ಆಚರಿಸುತ್ತೇವೆ: ಡಿ.ಕೆ ಸುರೇಶ್
author img

By

Published : Jun 11, 2020, 5:27 PM IST

Updated : Jun 11, 2020, 6:32 PM IST

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರ ಪದಗ್ರಹಣಕ್ಕೆ ಸಿಎಂ ಯಡಿಯೂರಪ್ಪ ಮೌಖಿಕ ಅನುಮತಿ ಕೊಟ್ಟಿದ್ದಾರೆ. ಆದರೆ ಸರ್ಕಾರದಿಂದ ಅಧಿಕೃತ ಆದೇಶ ಸಿಕ್ಕ ಬಳಿಕ ಕಾರ್ಯಕ್ರಮ ಆಯೋಜನೆಯ ದಿನಾಂಕ ನಿಗದಿ ಮಾಡುತ್ತೇವೆ ಎಂದು ಸಂಸದ ಡಿ.ಕೆ. ಸುರೇಶ್ ತಿಳಿಸಿದ್ದಾರೆ.

ಸಿಎಂ ಅನುಮತಿ ಹಿನ್ನೆಲೆ ಕಾರ್ಯಕ್ರಮದ ದಿನಾಂಕ ನಿಗದಿಪಡಿಸಿ ಆಚರಿಸುತ್ತೇವೆ: ಡಿ.ಕೆ ಸುರೇಶ್

ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಪದಗ್ರಹಣಕ್ಕೆ ನಮ್ಮ ಅಭ್ಯಂತರವಿಲ್ಲ ಎಂಬ ಸಿಎಂ ಬಿಎಸ್​ವೈ ಹೇಳಿಕೆ ಸಂತಸ ತಂದಿದೆ. ನಮ್ಮ ಅರ್ಜಿಗೆ ಸಹಮತಿ ಅನುಮತಿ ಕೊಟ್ಟರೆ ಒಳ್ಳೆಯದು. ಸಂವಿಧಾನ ಉಲ್ಲಂಘಿಸೋದು ಬೇಡ ಅಂತ ಮೂರನೇ ಬಾರಿ ಅರ್ಜಿ ಸಲ್ಲಿಸಿದ್ವಿ. ಅವರು ಅನುಮತಿ ಕೊಟ್ಟರೆ ದಿನಾಂಕ ನಿಗದಿ ಮಾಡಿ ಕಾರ್ಯಕ್ರಮ ಆಯೋಜಿಸುತ್ತೇವೆ ಎಂದರು.

ಸರ್ಕಾರ ಬಾಯಿ ಮಾತಲ್ಲಿ ಹೇಳಿದ್ರೆ ನಡೆಯುತ್ತಾ? ಬಾಯಿ ಮಾತಲ್ಲಿ ಹೇಳೋದು ಎಷ್ಟು ಸರಿ? ಹೇಳಿಕೆ ಬೇರೆ ಸರ್ಕಾರಿ ಅಧಿಕೃತ ಆದೇಶ ಬೇರೆ. ಸರ್ಕಾರದ ಸೂಚನೆ ಪಾಲನೆ ಮಾಡಲು ನಾವು ಸಿದ್ಧರಿದ್ದೇವೆ ಎಂದು ಡಿ ಕೆ ಸುರೇಶ್​ ತಿಳಿಸಿದರು.

Last Updated : Jun 11, 2020, 6:32 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.