ETV Bharat / state

ಟಿಕೆಟ್​ ಕೊಡುವವರೇ ಸಿದ್ದರಾಮಯ್ಯ, ಅವರಿಗೇ ಟಿಕೆಟ್ ಸಿಗಲ್ವಾ?: ಡಿ ಕೆ ಸುರೇಶ್ ಪ್ರಶ್ನೆ - ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗರ ಪ್ರಾಬಲ್ಯ ಇದೆ

224 ವಿಧಾನಸಭಾ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಎಲ್ಲಿ ಬೇಕಾದರು ಸ್ಪರ್ಧೆ ಮಾಡಬಹುದು. ಅವರು ಕೇಳಿದಲ್ಲಿ ಟಿಕೆಟ್ ಕೊಡ್ತಾರೆ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ.

dk-suresh-reaction-on-siddaramaiah-contest
ಟಿಕೆಟ್​ ಕೊಡುವವರೇ ಸಿದ್ದರಾಮಯ್ಯ, ಅವರಿಗೇ ಟಿಕೆಟ್ ಸಿಗಲ್ವಾ?: ಡಿ ಕೆ ಸುರೇಶ್
author img

By

Published : Mar 20, 2023, 5:27 PM IST

ಸಂಸದ ಡಿ.ಕೆ. ಸುರೇಶ್

ಬೆಂಗಳೂರು: ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಬಗ್ಗೆ ಚರ್ಚೆಯೇ ನಡೆದಿಲ್ಲ. ರಾಹುಲ್ ಗಾಂಧಿ ಅವರು ಯಾವುದೆ ಸೂಚನೆಯನ್ನು ಕೊಟ್ಟಿಲ್ಲ ಎಂದು ಸಂಸದ ಡಿ.ಕೆ. ಸುರೇಶ್​ ಹೇಳಿದರು. ಕೋಲಾರದಲ್ಲಿ ಸಿದ್ದರಾಮಯ್ಯ ಸ್ವರ್ಧೆ ವಿಚಾರವಾಗಿ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೇರೆಯವರು ಬೇರೆ ಬೇರೆ ರೀತಿ ವಿಮರ್ಷೆ ಮಾಡಿರಬಹುದು. 224 ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಎಲ್ಲಿ ಬೇಕಾದರು ಸ್ಪರ್ಧೆ ಮಾಡಬಹುದು. ಕೋಲಾರ ಇಡೀ ಜಿಲ್ಲೆಯ ವಾತಾವರಣ ಚೆನ್ನಾಗಿದೆ. ಕೋಲಾರ ಜಿಲ್ಲೆಯಲ್ಲಿ ಸ್ಪರ್ಧೆ ಮಾಡುವಂತೆ ಕೋಲಾರ ಜಿಲ್ಲೆ ನಾಯಕರೆ ಕೇಳಿದ್ದಾರೆ. ಸಿದ್ದರಾಮಯ್ಯ ಎಲ್ಲಿ ಕೇಳಿದರೆ ಅಲ್ಲಿ ಟಿಕೆಟ್ ಕೊಡ್ತಾರೆ. ಅವರೇ ಟಿಕೆಟ್ ಕೊಡೋರು ಅವರಿಗೆ ಟಿಕೆಟ್ ಸಿಗಲ್ವಾ ಎಂದು ಹೇಳಿದರು.

ರಾಜ್ಯಕ್ಕೆ ರಾಹುಲ್ ಬರುವುದರಿಂದ ಮುಂಬರುವ ಚುನಾವಣೆ ಮೇಲೆ ಪರಿಣಾಮ ಬಿರುವುದಿಲ್ಲ ಎಂಬ ಶೋಭಾ ಕರಂದ್ಲಾಜೆ ಹೇಳಿಕೆಗೆ ಪ್ರತಿಕ್ರಿಯಿಸಿದ ಸುರೇಶ್, ಅವರು ಹೇಳಿರುವುದು ನಮಗಲ್ಲ. ಪ್ರಧಾನಿ ಮೋದಿ, ಅಮಿಶ್ ಶಾ ಅವರಿಗೆ. ಕನ್ನಡ ಅವರಿಗೆ ಬರುತ್ತಾ, ನಡ್ಡಾ ಅವರಿಗೆ ಕನ್ನಡ ಬರುತ್ತಾ ಎನ್ರಿ? ಹಿಂದಿ ಹೇರಿಕೆ ಕರ್ನಾಟಕದಲ್ಲಿ ನಡೆಯುವುದಿಲ್ಲ. ಕನ್ನಡಿಗರು ಸ್ವಾಭಿಮಾನಿಗಳು, ನಿಮ್ಮ ಮಾತಿಗೆ ಮರುಳು ಆಗುವುದಿಲ್ಲ. ನಿಮ್ಮ ಪೊಳ್ಳು ಭರವಸೆ ಇದೆ ಅಲ್ವ? ಸುಳ್ಳು ಹೇಳಿ ಅಧಿಕಾರ ಗಿಟ್ಟಿಸುವುದು ಇವೆಲ್ಲ‌ ಬಯಲಾಗಿದೆ. ಇದು ನಡೆಯುವುದಿಲ್ಲ. ಶೋಭಾ ಕರಂದ್ಲಾಜೆ ಅವರ ನಾಯಕರಿಗೆ ಹೇಳಿರೋದು. ರಾಹುಲ್ ಗಾಂಧಿಗೆ ಅಲ್ಲ ಎಂದು ತಿರುಗೇಟು ನೀಡಿದರು.

ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗರ ಪ್ರಾಬಲ್ಯ ಇದೆ. ಜಾತಿ ಕಾರಣಗಳಿಂದ ರಾಜಕೀಯ ಮಾಡ್ತಾ ಇರೋದು ಬಿಜೆಪಿ. ಅವರಿಗೆ ಆ ಭಾಗದಲ್ಲಿ ಅಸ್ತಿತ್ವ ಇಲ್ಲ. ಎನಾದ್ರು ಒಂದು ಹೊಸದು ಹುಟ್ಟು ಹಾಕಬೇಕು ಅಲ್ವ? ಅಲ್ಲಿ ಎಲ್ಲೂ ರಾಮನ ಹುಟ್ಟಿಹಾಕಿದ್ರು, ಇನ್ನೆಲ್ಲೊ ಹನುಮಂತನ ಹುಟ್ಟಿಹಾಕಿದ್ರು. ಕೃಷ್ಣನ ಹುಟ್ಟಿಹಾಕಿದ್ರು. ಎಲ್ಲ ತಾಲ್ಲೂಕಿನಲ್ಲಿ ರಾಮದೇವರ ಬೆಟ್ಟ ಇದೆ. ಎಲ್ಲ ಕಡೆ ಪ್ರತಿಮೆ ಮಾಡ್ತಾರಾ? ಎಲ್ಲ ತಾಲ್ಲೂಕಿನಲ್ಲಿ ಅಂಜನಾದ್ರಿ ಬೆಟ್ಟಗಳಿವೆ. ಜನ ನಂಬಿಕೆಯಿಂದ ಬೆಟ್ಟಗಳಿಗೆ ಇಂತವರು ಬಂದಿದ್ರು ಅಂತ ಹೇಳಿ. ಇತಿಹಾಸದಲ್ಲಿ ಇದೆ ಅಂತ ಹೇಳಿ ಪೂಜೆ ಮಾಡ್ತಾ ಇದ್ದಾರೆ. ಹಾಗಾದ್ರೆ ಎಲ್ಲ ಕಡೆ ಪ್ರತಿಮೆ ಇಡ್ತಾರಾ ಇವ್ರು? ಚುನಾವಣಾ ಗಿಮಿಕ್ ಬಿಟ್ರೆ ಬೇರೆ ಎನು ಇಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಮಂಡ್ಯದಲ್ಲಿ ನಿರೀಕ್ಷೆ ಮೀರಿ ಹೆಚ್ಚಿನ ಸ್ಥಾನ ಗಳಿಸುತ್ತೇವೆ: ಶಿವರಾಮೇಗೌಡ ಬಿಜೆಪಿ ಸೇರ್ಪಡೆ ವಿಚಾರ ಮಾತನಾಡಿ, ಮೋದಿ ಇತ್ತೀಚೆಗೆ ರೌಡಿ ಫೈಟರ್ ರವಿಗೆ ನಮಸ್ಕಾರ ಮಾಡಿದ್ರು ಅದರ ಬಗ್ಗೆ ಮಾತಾಡಿ. ಸ್ಯಾಂಟ್ರೊ ರವಿ ಆಯ್ತು, ಫೈಟರ್ ರವಿಗೆ ನಮಸ್ಕಾರ ಮಾಡಿಸಿದ್ರಲ್ಲಪ್ಪ. ಏನೇನು ನಡೆಯುತ್ತಾ ಇದೆ. ರಾಜ್ಯದ ಜನರು ನೋಡ್ತಾ ಇದ್ದಾರೆ. ಹಳೆ ಮೈಸೂರು ಭಾಗದಲ್ಲಿ ಎಷ್ಟು ಸ್ಥಾನ ಕಾಂಗ್ರೆಸ್ ಗಳಿಸುತ್ತೆ ಎಂಬ ವಿಚಾರವಾಗಿ ನನಗೆ ಅಷ್ಟೇಲ್ಲ ಗೊತ್ತಿಲ್ಲ. ನನ್ನ ಕ್ಷೇತ್ರದಲ್ಲಿ ಎಲ್ಲಾ 8 ಕಡೆ ಗೆಲ್ಲಬೇಕು. ಮಂಡ್ಯದಲ್ಲಿ ನಿರೀಕ್ಷೆ ಮೀರಿ ಹೆಚ್ಚಿನ ಸ್ಥಾನ ಗಳಿಸುತ್ತೇವೆ ಎಂದರು.

ಮಾಜಿ ಸಚಿವ ಸಿ‌ ಪಿ ಯೋಗಿಶ್ವರ್ ಕಾಂಗ್ರೆಸ್ ಸೇರ್ಪಡೆ ವಂದತಿ ವಿಚಾರ ಮಾತನಾಡಿ, ಅವರು ಬಿಜೆಪಿಯಲ್ಲಿ ಕೆಲಸ ಮಾಡ್ತಾ ಇದ್ದಾರೆ. ರಾಜ್ಯ ಕಾರಣಕ್ಕೆ ಬರುವ ವಿಚಾರವಾಗಿ ಮಾತನಾಡಿ, ನನಗೆ ರಾಜಕಾರಣದ ಬಗ್ಗೆ ಆಸಕ್ತಿ ಇಲ್ಲ. ಈ ಹೊಲಸು ಬಿಜೆಪಿ ಸರ್ಕಾರ ನೋಡಿದ ಮೇಲೆ ನನಗೆ ಭ್ರಮೆ ಆಗಿದೆ. ಎನು ಇಂತಹ ಹೊಲಸು ಇದೆ ಅಂತ ನಾನು ಹಲವು ಬಾರಿ ಕಚೇರಿಗಳಿಗೆ‌ ಭೇಟಿ ನೀಡ್ತೀನಿ. ಅಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಶಾಸಕರು ಕಮಿಷನ್ ಕೊಟ್ಟ ಅನುದಾನ ತೆರೋದು ನೋಡಿ ನನಗೆ ಅಸಹ್ಯ ಅನಿಸುತ್ತೆ. ಕಾಂಗ್ರೆಸ್, ಜೆಡಿಎಸ್ ಅವ್ರು ಅವರಿಗೆ ಅನುದಾನ ನೀಡಲ್ಲ. ಆಡಳಿತ ಪಕ್ಷದ ಶಾಸಕರೇ ಕಮಿಷನ್ ಕೊಟ್ಟ ಅನುದಾನ ತರುವ ಪರಿಸ್ಥಿತಿ ನಿರ್ಮಾಣ ಆಗಿದೆ. ಇದನ್ನ ನೋಡಿ ರಾಜಕಾರಣ ಮಾಡಬೇಕಾ ಬೇಡ್ವ ನೀವೆ ಹೇಳಿ ಎಂದು ಕೇಳಿದರು.

ಪ್ರಧಾನಿ ನರೇಂದ್ರ ಮೋದಿ ರಾಜ್ಯ ಪ್ರವಾಸ ಕುರಿತು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಬಂದಾಗ ಅವರಿಗೆ ಬೆಂಗಳೂರು-ಮೈಸೂರ ಹೈವೇ ಮೇಲೆ ನೀರು ತುಂಬಿರುವುದನ್ನು ಪಿಎಂ ಮೋದಿ ಅವ್ರಿಗೆ ತೋರ್ಸಿ. ಬೆಂಗಳೂರು-ಮೈಸೂರು ಹೈವೇ ಮೇಲೆ ಅಪಘಾತ ಆಗಿ 88 ಜನ ಸಾವನ್ನಪ್ಪಿದ್ದಾರೆ. ಪ್ರಧಾನಿ ಮೋದಿ ರಾಜ್ಯಕ್ಕೆ ಎಷ್ಟು ಬಾರಿ ಬಂದ್ರು ನಮಗೆ ಸಂತೋಷ. ಆದರೆ 40% ಕಮಿಷನ್ ಬಗ್ಗೆ ಕೂಡ ಮೋದಿ ಹೇಳಬೇಕು ಎಂದರು.

ಪ್ರಧಾನಿ ಮೋದಿ ಭ್ರಷ್ಟಾಚಾರದ ಬಗ್ಗೆ ಮಾತಾಡ್ತಿಲ್ಲ- ಡಿ ಕೆ ಸುರೇಶ್​: ಎಡಿಜಿಪಿ ಇನ್ನು ಜೈಲಿನಲ್ಲಿ ಇದ್ದಾರೆ. ಯಾಕೆ ಇನ್ನು ಜೈಲ್ ನಲ್ಲಿ ಇದ್ದಾರೆ ಅಂತ ಪಿಎಂಗೆ ಕೇಳಬೇಕು. ಎಡಿಜಿಪಿ ಯನ್ನು ಜೈಲಿನಿಂದ ಆಚೆ ಬರದ ಹಾಗೆ ಸರ್ಕಾರ ನೋಡ್ಕೊತಿದೆ. ಆದರೆ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪನಿಗೆ ಒಂದೇ ದಿನಕ್ಕೆ ಬೆಲ್ ಸಿಗುತ್ತದೆ. ಗೃಹ ಸಚಿವರ ಬಣ್ಣ ಬದಲಾಗುತ್ತದೆ ಎಂದು ಇನ್ನು ಎಡಿಜಿಪಿಗೆ ಜೈಲಿನಲ್ಲಿ ಇಟ್ಟಿದ್ದಾರೆ. ಈ ವಿಚಾರದ ಬಗ್ಗೆ ಯಾಕೆ ಪ್ರಧಾನಿ ಮೋದಿ ರಾಷ್ಟ್ರವನ್ನು ಉದೇಶಿಸಿ ಮಾತಾಡ್ಬಾರ್ದು? ಪ್ರಧಾನಿ ಮೋದಿ ರಾಜ್ಯಕ್ಕೆ ಪದೇ ಪದೇ ಬರ್ತಿದ್ದಾರೆ. ಆದ್ರೆ ಭ್ರಷ್ಟಾಚಾರದ ಬಗ್ಗೆ ಮಾತಾಡ್ತಿಲ್ಲ. ಈ ಭ್ರಷ್ಟಾಚಾರಕ್ಕೆ ಸರ್ಟಿಫಿಕೇಟ್ ಕೊಡುವುದಕ್ಕೆ ಬರ್ತಿದೀರಾ ಪ್ರಧಾನಿ ಮೋದಿ ಅವರೇ, ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪಿಎಂ ಟೋಲ್ ಟ್ಯಾಕ್ಸ್ ವಸೂಲಿ ಆಗ್ತಿದೆ ಎಂದು ಟೀಕಿಸಿದರು.

ಇದನ್ನೂ ಓದಿ:ಸಂಚಾರ ದಟ್ಟಣೆಯೇ ದೊಡ್ಡ ಸವಾಲು: ಯಾರಿಗೆ ಒಲಿಯಲಿದೆ ಕೆ.ಆರ್. ಪುರ ಕ್ಷೇತ್ರ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.