ETV Bharat / state

ನನ್ನ ಹುಟ್ಟುಹಬ್ಬಕ್ಕೆ ಶುಭ​ ಕೋರಲು ಕಚೇರಿ, ಮನೆಗೆ ಬರಬೇಡಿ:  ಡಿಕೆಶಿ ಮನವಿ

author img

By

Published : May 13, 2020, 5:51 PM IST

ತಮ್ಮ ಜನ್ಮದಿನದಂದು ಯಾರೂ ತಮ್ಮನ್ನು ಭೇಟಿ ಮಾಡಲು ನಿವಾಸ ಅಥವಾ ಕಚೇರಿ ಬಳಿ ಬರಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತೊಮ್ಮೆ ಮನವಿ ಮಾಡಿಕೊಂಡಿದ್ದಾರೆ.

dk shivkumar birthday news
ಡಿ.ಕೆ. ಶಿವಕುಮಾರ್ ಮನವಿ

ಬೆಂಗಳೂರು: ತಾವು ಊರಲ್ಲಿ ಇಲ್ಲದಿರುವುದರಿಂದ ಮೇ 15 ರಂದು ತಮಗೆ ಜನ್ಮದಿನದ ಶುಭಾಶಯ ಕೋರಲು ಯಾರೂ ಬರಬಾರದೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತೊಮ್ಮೆ ಮನವಿ ಮಾಡಿದ್ದಾರೆ.

ಡಿ.ಕೆ. ಶಿವಕುಮಾರ್ ಮನವಿ

ಎರಡು ದಿನ ಹಿಂದೆ ಒಮ್ಮೆ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದ ಡಿಕೆಶಿ ಇಂದು ಮತ್ತೊಮ್ಮೆ ವಿನಂತಿಸಿಕೊಂಡು ವಿಡಿಯೋ ಬಿಡುಗಡೆ ಮಾಡಿದ್ದಾರೆ. ತಾವು ಅನಿವಾರ್ಯ ಕಾರಣಗಳಿಂದ ಮೇ 14 ರಿಂದ 3 ದಿನಗಳ ಕಾಲ ಬೆಂಗಳೂರಿನಲ್ಲಿ ಇರುವುದಿಲ್ಲ. ಹೀಗಾಗಿ ನಾಯಕರಾಗಲಿ, ಪಕ್ಷದ ಕಾರ್ಯಕರ್ತರಾಗಲಿ, ಅಭಿಮಾನಿ ಬಂಧುಗಳಾಗಲಿ, ಕನಕಪುರ ಕ್ಷೇತ್ರದವರಾಗಲಿ ಯಾರೂ ಕೂಡ ಸದಾಶಿವನಗರ ನಿವಾಸಕ್ಕಾಗಲಿ, ಪಕ್ಷದ ಕಚೇರಿಗಾಗಲಿ ಬರುವುದು ಬೇಡ. ಯಾರೂ ಇದನ್ನು ತಪ್ಪಾಗಿ ಭಾವಿಸಬಾರದು ಎಂದು ಶಿವಕುಮಾರ್ ಅವರು ಹೇಳಿಕೆಯಲ್ಲಿ ವಿನಂತಿ ಮಾಡಿದ್ದಾರೆ.

ಆಹಾರ ಕಿಟ್ ನೀಡಿಕೆ:
ವಿಜಯನಗರ ವಿಧಾನಸಭಾ ಕ್ಷೇತ್ರದ ಗಿರಿನಗರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಬಿಬಿಎಂಪಿ ಮಾಜಿ ಉಪ ಮಹಾಪೌರ ಲಕ್ಷ್ಮಿನಾರಾಯಣ ಅವರು ಬಡವರಿಗೆ ಆಹಾರ ಕಿಟ್ ಗಳನ್ನು ಬುಧವಾರ ವಿತರಿಸಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್, ಶಾಸಕ ಕೃಷ್ಣಪ್ಪ, ರಾಜ್ಯಸಭಾ ಸದಸ್ಯ ಬಿಕೆ ಹರಿಪ್ರಸಾದ್ ಅವರು ಇದ್ದರು.

dk shivkumar birthday news
ಆಹಾರ ಕಿಟ್ ವಿತರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.