ETV Bharat / state

ನೊಣವಿನಕೆರೆ ಅಜ್ಜಯ್ಯನ ಮಠದತ್ತ ಡಿಕೆಶಿ ಪ್ರಯಾಣ; ಕೆಟ್ಟು ನಿಂತ ಎಸ್ಕಾರ್ಟ್​ ವಾಹನ

ತಮಗೆ ಸಂಕಷ್ಟ ಎದುರಾದಾಗ ಡಿ ಕೆ ಶಿವಕುಮಾರ್ ಎರಡು ಬಾರಿ ​ಅಜ್ಜಯ್ಯನ ಮಠಕ್ಕೆ ಭೇಟಿ ನೀಡಿದ್ದರು.

ಕೆಟ್ಟು ನಿಂತ ಎಸ್ಕಾಟ್ ವಾಹನ
ಕೆಟ್ಟು ನಿಂತ ಎಸ್ಕಾಟ್ ವಾಹನ
author img

By

Published : May 21, 2023, 4:10 PM IST

ಬೆಂಗಳೂರು : ರಾಜ್ಯ ಸರ್ಕಾರದ ನೂತನ ಉಪಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಡಿ ಕೆ ಶಿವಕುಮಾರ್ ನೊಣವಿನಕೆರೆ ಅಜ್ಜಯ್ಯನ ಮಠದತ್ತ ಪ್ರಯಾಣ ಬೆಳೆಸಿದ್ದರು. ಈ ವೇಳೆ ನಡು ರಸ್ತೆಯಲ್ಲಿಯೇ ಕೆಟ್ಟು ನಿಂತ ಎಸ್ಕಾರ್ಟ್ ವಾಹನ ಕೆಲ ಕಾಲ ಆತಂಕ ಸೃಷ್ಟಿಸಿತ್ತು. ಆದರೆ ಬದಲಿ ವ್ಯವಸ್ಥೆ ಆದ ಬಳಿಕ ಡಿ. ಕೆ ಶಿವಕುಮಾರ್ ಹೆಚ್​ಎಲ್ ವಿಮಾನ ನಿಲ್ದಾಣದತ್ತ ಪ್ರಯಾಣ ಬೆಳೆಸಿದರು.

ಇಂದು ಬೆಳಗ್ಗೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಡಿ. ಕೆ ಶಿವಕುಮಾರ್​ ಭಾಗಿಯಾದರು. ಬಳಿಕ ಹೆಚ್​ಎಎಲ್ ವಿಮಾನ ನಿಲ್ದಾಣಕ್ಕೆ ಡಿ‌.ಕೆ ಶಿವಕುಮಾರ್ ತೆರಳುವ ಸಂದರ್ಭದಲ್ಲಿ ಕೆಪಿಸಿಸಿ ಕಚೇರಿ ಮುಂದೇನೆ ಕೆಟ್ಟು ನಿಂತ ಬೆಂಗಾವಲು ವಾಹನ ಕೆಲಕಾಲ ಕಿರಿಕಿರಿ ಉಂಟು ಮಾಡಿತು. ಡಿ.ಕೆ ಶಿವಕುಮಾರ್ ಕಾರಿನ ಮುಂದೆ ಇರಬೇಕಿದ್ದ ಎಸ್ಕಾರ್ಟ್ ವಾಹನ ಇಂಜಿನ್​ನಲ್ಲಿ ಸಮಸ್ಯೆ ಕಾಡಿದ್ದರಿಂದ ಕೊನೆಗೆ ಅದನ್ನು ಅಲ್ಲಿಯೇ ಬಿಟ್ಟು ಬೇರೆ ವಾಹನದೊಂದಿಗೆ ಭದ್ರತಾ ಸಿಬ್ಬಂದಿ ತೆರಳಿದ್ದಾರೆ.

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ ಪಕ್ಷ ರಾಜ್ಯದಲ್ಲಿ 135 ಸ್ಥಾನ ಗಳಿಸಿ ಪೂರ್ಣ ಪ್ರಮಾಣದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿತ್ತು. ಕನಕಪುರದಿಂದ ಬರೋಬ್ಬರಿ 1.2 ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನೂತನವಾಗಿ ರಚನೆಯಾಗುವ ಸರ್ಕಾರದಲ್ಲಿ ಸಿಎಂ ಆಗಬೇಕೆಂದು ಪ್ರಯತ್ನ ನಡೆಸಿದ್ದರು. ಆದರೆ ಸಿದ್ದರಾಮಯ್ಯ ಅವರಿಂದ ಪೈಪೋಟಿ ಎದುರಾದಾಗ ಸಂಕಷ್ಟ ಪರಿಹಾರಕ್ಕಾಗಿ ಎರಡು ಬಾರಿ ಅಜ್ಜಯ್ಯನ ಮಠಕ್ಕೆ ಭೇಟಿ ನೀಡಿದ್ದರು. ದಿಲ್ಲಿ ಮಟ್ಟದಲ್ಲಿ ಸಿಎಂ ಸ್ಥಾನಕ್ಕೆ ಲಾಬಿ ನಡೆದ ಸಂದರ್ಭ ಸಹ ಡಿ ಕೆ ಶಿವಕುಮಾರ್ ಅಜ್ಜಯ್ಯನ ಮಠಕ್ಕೆ ಭೇಟಿ ನೀಡುವುದನ್ನು ಮರೆತಿರಲಿಲ್ಲ. ಚುನಾವಣೆಗೂ ಮುನ್ನ ಬಿ ಫಾರಂ ವಿತರಿಸುವಾಗಲೇ ಅಜ್ಜಯನ ಫೋಟೋ ಮುಂದೆ ಬಿ-ಫಾರಂಗಳನ್ನು ಇಟ್ಟು ಪೂಜಿಸಿ ವಿತರಣೆ ಆರಂಭಿಸಿದ್ದ ಡಿಕೆಶಿ ಪ್ರತಿ ಕೆಲಸಕ್ಕೂ ಅಜ್ಜಯ್ಯನ ಆಶೀರ್ವಾದ ಪಡೆದಿದ್ದರು.

ನಿನ್ನೆ ಸರ್ಕಾರದ ಉಪಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿಯೂ ಡಿ.ಕೆ ಶಿವಕುಮಾರ್ ಅವರು ಗಂಗಾಧರ ಅಜ್ಜಯ್ಯನ ಹೆಸರಿನಲ್ಲಿಯೇ ಪ್ರಮಾಣ ಮಾಡಿ ಅಧಿಕಾರ ವಹಿಸಿಕೊಂಡಿದ್ದರು. ನೂತನವಾಗಿ ರಚನೆಯಾಗಿರುವ ಸರ್ಕಾರದಲ್ಲಿ ಅಧಿಕಾರ ಪಡೆದಿರುವ ಡಿ.ಕೆ ಶಿವಕುಮಾರ್ ಅಧಿಕೃತವಾಗಿ ಅಧಿಕಾರ ವಹಿಸಿಕೊಳ್ಳುವ ಮುನ್ನ ಮತ್ತೊಮ್ಮೆ ಅಜ್ಜಯ್ಯನ ಮಠಕ್ಕೆ ಭೇಟಿ ನೀಡಲು ಇಂದು ತೆರಳಿದ್ದಾರೆ. ಮೊದಲು ಅಜ್ಜಯ್ಯನ ದರ್ಶನ ಪಡೆಯಲಿರುವ ಅವರು ಬಳಿಕ ಆದಿಚುಂಚನಗಿರಿ ಮಠಕ್ಕೆ ಭೇಟಿಕೊಡಲಿದ್ದಾರೆ. ಕಾಲಭೈರವೇಶ್ವರನ ದರ್ಶನ ಪಡೆಯಲಿರುವ ಅವರು ಇದಾದ ಬಳಿಕ ನಾಳಿನ ಅಧಿವೇಶನದಲ್ಲಿ ಭಾಗಿಯಾಗಲಿದ್ದಾರೆ.

ಡಿಕೆಶಿ ಪ್ರತಿಕ್ರಿಯೆ : ಸಚಿವ ಸಂಪುಟ ರಚನೆ ವಿಚಾರವಾಗಿ ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ ಶಿವಕುಮಾರ್, ಪೂರ್ಣ ಸಚಿವ ಸಂಪುಟ ಆಗೇ ಆಗುತ್ತದೆ. 24ನೇ ತಾರೀಕು ಹೊಸ ಸದಸ್ಯರು ಆಗಬೇಕು. 26 ರಂದು ಹಳೆ ಸರ್ಕಾರದ ಅವಧಿ ಮುಗಿಯಲಿದೆ. ಅಷ್ಟರ ಒಳಗೆ ಸಂಪುಟ ರಚನೆ ಆಗಬೇಕಿದೆ. ಎರಡು ಮೂರು ದಿನದಲ್ಲಿ ಸಚಿವರ ಪ್ರಮಾಣ ವಚನ ಆಗಲಿದೆ. 24 ರಂದು ನಾನು ರಾಜ್ಯಪಾಲರ ಸಮಯಾವಕಾಶ ಕೇಳಿದ್ದೆ. 25 ಕ್ಕೆ ರಾಜ್ಯಪಾಲರು ಇರೋದಿಲ್ಲ ಅಂತ ಹೇಳಿದ್ದಾರೆ. 24 ರ ಒಳಗೆ ಹೊಸ ಸದಸ್ಯರು ಸಂಪುಟ ಸೇರಿಕೊಳ್ಳುತ್ತಾರೆ ಎಂದರು.

ಖಾತೆ ಹಂಚಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ಅದೆಲ್ಲ ಸಿಎಂ ಹಾಗೂ ಹೈ ಕಮಾಂಡ್​ಗೆ ಬಿಟ್ಟ ವಿಚಾರ. ಅದೆಲ್ಲವನ್ನೂ ಅವರು ತೀರ್ಮಾನ ಮಾಡುತ್ತಾರೆ. ಮೊದಲ ಸಚಿವ ಸಂಪುಟದ ಪಟ್ಟಿಯಲ್ಲಿ ಹಿರಿಯ ನಾಯಕರ ಹೆಸರಿಲ್ಲದ ವಿಚಾರಕ್ಕೆ ಅಸಮಾಧಾನ ವಿಚಾರವಾಗಿ ಕೇಳಿದ ಪ್ರಶ್ನೆಗೆ ಗರಂ ಆದ ಡಿಕೆಶಿ, ನೀವು ತರ್ಲೆ ಪ್ರಶ್ನೆಗಳನ್ನು ಕೇಳಬೇಡಿ ಎಂದು ಹೇಳಿದರು. ಬಿಜೆಪಿ ಸರ್ಕಾರದಲ್ಲಿ ನಡೆದ ಹಗರಣಗಳನ್ನು ತನಿಖೆಗೆ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ಈಗ ಇದರ ಬಗ್ಗೆ ಮಾತಾಡುವುದಕ್ಕೆ ಹೋಗಲ್ಲ. ಯಾವ ವಿಚಾರದ ಬಗ್ಗೆಯೂ ನಾನು ಮಾತನಾಡುವುದಿಲ್ಲ ಎಂದರು.

ಸಿದ್ದರಾಮಯ್ಯ ವಾಚ್ ಸ್ವಾರಸ್ಯ : ರಾಜ್ಯದ ಮುಖ್ಯಮಂತ್ರಿ ಆಗಿ ಎರಡನೇ ಬಾರಿ ಆಯ್ಕೆಯಾಗಿರುವ ಸಿದ್ದರಾಮಯ್ಯ ಅವರಿಗೆ ಪತ್ನಿ ಹೊಸ ವಾಚನ್ನು ಉಡುಗೊರೆಯಾಗಿ ನೀಡಿದ್ದಾರೆ. ಅದೇ ವಾಚನ್ನು ಇಂದು ಧರಿಸಿ ಬಂದಿದ್ದ ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹಾಗೂ ಸಚಿವ ಎಂ. ಬಿ ಪಾಟೀಲ್​ಗೆ ತೋರಿಸಿ ಸಂತಸ ಹಂಚಿಕೊಂಡಿದ್ದಾರೆ.

ಬೆಂಗಳೂರಿನ ಮೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿ ಹಿಂಭಾಗದಲ್ಲಿರುವ ಇಂದಿರಾಗಾಂಧಿ ಭವನದಲ್ಲಿ ಹಮ್ಮಿಕೊಂಡಿದ್ದ ರಾಜೀವ್ ಗಾಂಧಿ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಭಾಗವಹಿಸಿದ್ದರು. ನಿನ್ನೆಯಷ್ಟೇ ನೂತನ ಮುಖ್ಯಮಂತ್ರಿ ಆಗಿ ಅಧಿಕಾರವಹಿಸಿಕೊಂಡಿರುವ ಸಿದ್ದರಾಮಯ್ಯಗೆ ಅವರ ಪತ್ನಿ ಹೊಸ ವಾಚನ ಉಡುಗೊರೆಯಾಗಿ ನೀಡಿದ್ದಾರೆ. ಇಂದು ತಮ್ಮ ಪತ್ನಿ ರಾಡೋ ವಾಚನ್ನು ಉಡುಗೊರೆಯಾಗಿ ನೀಡಿದ್ದು, ಹೆಮ್ಮೆಯಿಂದ ಅದನ್ನು ಧರಿಸಿ ಸಿದ್ದರಾಮಯ್ಯ ಓಡಾಡುತ್ತಿದ್ದಾರೆ.

ಇದನ್ನೂ ಓದಿ : 'ಅಧಿಕಾರಕ್ಕಾಗಿ ನನ್ನ ಮನೆ, ಸಿದ್ದರಾಮಯ್ಯರ ಮನೆ ಎಂದು ಸುತ್ತಬೇಡಿ': ಡಿಕೆಶಿ ಖಡಕ್ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.