ETV Bharat / state

ಕೆಪಿಸಿಸಿ ಮುಂಚೂಣಿ ಘಟಕದ ಅಧ್ಯಕ್ಷರ ಜೊತೆ ಡಿಕೆಶಿ ಸಭೆ - ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಭೆ

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಕೆಪಿಸಿಸಿ ಮುಂಚೂಣಿ ಘಟಕಗಳ ಅಧ್ಯಕ್ಷರ ಸಭೆ ನಡೆಸಿದರು.

dks meeting with  unit president
ಮುಂಚೂಣಿ ಘಟಕದ ಅಧ್ಯಕ್ಷರ ಜೊತೆ ಡಿಕೆಶಿ ಸಭೆ
author img

By

Published : May 6, 2020, 6:31 PM IST

ಬೆಂಗಳೂರು: ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಕೆಪಿಸಿಸಿ ಮುಂಚೂಣಿ ಘಟಕಗಳ ಅಧ್ಯಕ್ಷರ ಜೊತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಭೆ ನಡೆಸಿದರು.

ಮುಂಚೂಣಿ ಘಟಕದ ಅಧ್ಯಕ್ಷರ ಜೊತೆ ಡಿಕೆಶಿ ಸಭೆ

ಸಭೆಯಲ್ಲಿ ಕೊರೊನಾ ವಿಚಾರದಲ್ಲಿ ಕಾಂಗ್ರೆಸ್ ಕಾರ್ಯನಡೆಯ ಬಗ್ಗೆ ಚರ್ಚಿಸಲಾಯಿತು. ಅಲ್ಲದೇ ಲಾಕ್‌ಡೌನ್​ನಿಂದ ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವುದರ ಜೊತೆಗೆ ಪಕ್ಷ ಸಂಘಟನೆಯಲ್ಲೂ ಸಕ್ರಿಯರಾಗಿ ಕೆಲಸ ಮಾಡಿ, ಇಲ್ಲವೇ ಹುದ್ದೆ ತೊರೆಯಿರಿ ಎಂದು ಖಡಕ್ ಸೂಚನೆ ನೀಡಿದರು. ಲಾಕ್‌ಡೌನ್ ಸಂದರ್ಭದಲ್ಲಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸಂಕಷ್ಟಕ್ಕೆ ಈಡಾಗಿದ್ದ ಕಾರ್ಮಿಕರಿಗೆ ಬೆನ್ನೆಲುಬಾಗಿ ಕಾಂಗ್ರೆಸ್ ನಿಂತಿತ್ತು. ಸರ್ಕಾರದ ನಡೆಯನ್ನು ಖಂಡಿಸಿ ಕಾಂಗ್ರೆಸ್ ನಡೆಸಿದ ಹೋರಾಟ ಹಾಗೂ ಗಳಿಸಿದ ಯಶಸ್ಸು ಜನರ ಮನಸ್ಸಿನಲ್ಲಿ ಒಳ್ಳೆಯ ಭಾವನೆ ಮೂಡುವಂತೆ ಮಾಡಿದೆ. ಮುಂಬರುವ ದಿನಗಳಲ್ಲಿ ಇದೇ ಮಾದರಿಯ ಹೋರಾಟವನ್ನು ರಾಜ್ಯಾದ್ಯಂತ ನಡೆಸಬೇಕಾದ ಅನಿವಾರ್ಯತೆ ಇದೆ. ಬಿಜೆಪಿಯ ಗಿಮಿಕ್​ನಿಂದಾಗಿ ನಮ್ಮ ಪಕ್ಷ ಯುವ ಜನತೆಯ ಮನಸ್ಸಿನಿಂದ ಒಂದಿಷ್ಟು ದೂರಾಗಿದೆ. ವಾಸ್ತವತೆ ಮತ್ತು ವಸ್ತುಸ್ಥಿತಿಯನ್ನು ಯುವ ಸಮುದಾಯಕ್ಕೆ ವಿವರಿಸುವ ಕಾರ್ಯ ಮಾಡಿ ನಾವು ಮತ್ತೊಮ್ಮೆ ಪ್ರವರ್ಧಮಾನಕ್ಕೆ ಬರಬೇಕಿದೆ. ಯುವಶಕ್ತಿಯ ಸಹಕಾರದೊಂದಿಗೆ ಪಕ್ಷ ಕಟ್ಟುವ ಕಾರ್ಯ ಆಗಬೇಕಿದೆ. ಈ ನಿಟ್ಟಿನಲ್ಲಿ ಮುಂಚೂಣಿ ಘಟಕಗಳ ಪಾತ್ರ ಅತ್ಯಂತ ಪ್ರಮುಖವಾಗಿದ್ದು, ರಾಜ್ಯಾದ್ಯಂತ ನೀವು ನಿಮ್ಮ ವ್ಯಾಪ್ತಿಯಲ್ಲಿ ಯುವ ಸಮುದಾಯವನ್ನು ಕಟ್ಟುವ ಕಾರ್ಯ ಮಾಡಬೇಕು ಎಂದು ಕರೆ ನೀಡಿದರು.

dks meeting with  unit president
ಮುಂಚೂಣಿ ಘಟಕದ ಅಧ್ಯಕ್ಷರ ಜೊತೆ ಡಿಕೆಶಿ ಸಭೆ

ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಮಾಜಿ ಸಂಸದ ದ್ರುವನಾರಯಣ್, ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಎಂಡಿ ಲಕ್ಷ್ಮೀನಾರಾಯಣ, ಯೂತ್ ಕಾಂಗ್ರೆಸ್ ಬಸವನಗೌಡ ಬಾದರ್ಲಿ, ಎನ್‌ಎಸ್‌ಯುಐ ಅಧ್ಯಕ್ಷ ಮಂಜುನಾಥ ಗೌಡ, ಸಂಶೋಧನಾ ವಿಭಾಗದ ಅಧ್ಯಕ್ಷ ಮನ್ಸೂರ್ ಆಲಿಖಾನ್, ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್, ಸೋಶಿಯಲ್ ಮೀಡಿಯಾ ಘಟಕದ ಅಧ್ಯಕ್ಷ ನಟರಾಜ್ ಗೌಡ ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.