ETV Bharat / state

ಬಲಗೈಗೆ ಬ್ಯಾಂಡೇಜ್ ಹಾಕಿಕೊಂಡು ದೆಹಲಿಯಿಂದ ವಾಪಸ್ ಆದ ಡಿಕೆಶಿ: ಕಾರಣ ? - ಕೆಪಿಸಿಸಿ ಅಧ್ಯಕ್ಷರ ಕೈಗೆ ಬ್ಯಾಂಡೇಜ್​

ದೆಹಲಿಯಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಲಗೈ ಬ್ಯಾಂಡೇಜ್ ಸುತ್ತಿದ ಸ್ಥಿತಿಯಲ್ಲಿ ಗೋಚರಿಸಿತು. ಇದೇ ಸ್ಥಿತಿಯಲ್ಲೇ ಎಂದು ರಾಹುಲ್ ಗಾಂಧಿ ಜೊತೆ ಪಾದಯಾತ್ರೆಯಲ್ಲಿ ಸಹ ಡಿಕೆಶಿ ಪಾಲ್ಗೊಂಡಿದ್ದರು.

dk-shivakumar-got-injured-to-his-hand-during-delhi-visit
ಬಲಗೈಗೆ ಬ್ಯಾಂಡೇಜ್ ಹಾಕಿಕೊಂಡು ದೆಹಲಿಯಿಂದ ವಾಪಸ್ ಆದ ಡಿಕೆಶಿ: ಕಾರಣ ?
author img

By

Published : Oct 8, 2022, 10:54 PM IST

ಬೆಂಗಳೂರು: ರಾಜ್ಯದಲ್ಲಿ ರಾಹುಲ್ ಗಾಂಧಿ ಭಾರತ್​​ ಜೋಡೋ ಪಾದಯಾತ್ರೆ ನಡೆಸುತ್ತಿರುವ ಮಧ್ಯದಲ್ಲಿ ಇಡಿ ವಿಚಾರಣೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ತೆರಳಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಿಂದಿರುಗುವಾಗ ಬಲಗೈಗೆ ಬ್ಯಾಂಡೇಜ್ ಹಾಕಿಕೊಂಡು ವಾಪಸ್ ಆಗಿದ್ದಾರೆ.

ನಿನ್ನೆ ಸಂಜೆ ದೆಹಲಿಯಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕೆಪಿಸಿಸಿ ಅಧ್ಯಕ್ಷರ ಬಲಗೈ ಬ್ಯಾಂಡೇಜ್ ಸುತ್ತಿದ ಸ್ಥಿತಿಯಲ್ಲಿ ಗೋಚರಿಸಿತು. ಇದೇ ಸ್ಥಿತಿಯಲ್ಲೇ ಎಂದು ರಾಹುಲ್ ಗಾಂಧಿ ಜೊತೆ ಪಾದಯಾತ್ರೆಯಲ್ಲಿ ಸಹ ಅಧ್ಯಕ್ಷರು ಪಾಲ್ಗೊಂಡಿದ್ದರು. ತುಮಕೂರಿನ ತುರುವೇಕೆರೆಯಲ್ಲಿ ರಾಹುಲ್ ಗಾಂಧಿ ಸುದ್ದಿಗೋಷ್ಠಿ ನಡೆಸಿದ ಸಂದರ್ಭದಲ್ಲಿಯೂ ಬ್ಯಾಂಡೇಜ್ ಸಮೇತರಾಗಿ ಡಿಕೆಶಿ ಗೋಚರಿಸಿದ್ದಾರೆ.

DK shivakumar got injured to his hand during Delhi visit
ಕೈ ಗಾಯದ ಎಕ್ಸರೇ

ಬ್ಯಾಂಡೇಜ್​ಗೆ ಕಾರಣ: ಕೆಪಿಸಿಸಿ ಅಧ್ಯಕ್ಷರ ಕೈಗೆ ಬ್ಯಾಂಡೇಜ್​ ಸುತ್ತಿರುವುದಕ್ಕೂ ಜಾರಿ ನಿರ್ದೇಶನಾಲಯದ ವಿಚಾರಣೆಗೂ ಸಂಬಂಧ ಇದೆ ಎಂಬ ಮಾಹಿತಿ ಅವರ ಮೂಲಕವೇ ತಿಳಿದಿದೆ. ಸುದೀರ್ಘ ವಿಚಾರಣೆ ಬಳಿಕ ಜಾರಿ ನಿರ್ದೇಶನಾಲಯ ಕಚೇರಿಯಿಂದ ಹೊರ ಬರುವ ಸಂದರ್ಭ ಮೆಟ್ಟಿಲುಗಳನ್ನು ಇಳಿಯುವಾಗ ಡಿಕೆಶಿ ಕೊಂಚ ಆಯತಪ್ಪಿದ್ದಾರೆ. ಈ ಸಂದರ್ಭ ಪಕ್ಕದ ಆಧಾರದ ಕಂಬಿಯನ್ನು ಹಿಡಿದುಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ, ಅದು ಸರಿಯಾಗಿ ಸಿಕ್ಕಿಲ್ಲ. ಈ ಸಂದರ್ಭ ಬೆರಳುಗಳು ಕಂಬಿಗೆ ಸಿಲುಕಿದ್ದು ಮೂರು ಬೆರಳುಗಳು ಉಳುಕಿವೆ.

ಕೈ ಬೆರಳುಗಳು ಮುರಿದಿಲ್ಲ ಆದರೆ ಎಕ್ಸರೇ ಮಾಡಿದಾಗ ಕೊಂಚ ಉಳುಕಿದ ಹಿನ್ನೆಲೆಯಲ್ಲಿ ಬೆರಳಿಗೆ ಕೊಂಚ ಗಾಯವಾಗಿದೆ. ಈ ಹಿನ್ನೆಲೆಯಲ್ಲಿ ವೈದ್ಯರು ಮುಂದಿನ ನಾಲ್ಕು ದಿನ ಬ್ಯಾಂಡೇಜ್ ಧರಿಸುವಂತೆ ಸಲಹೆ ನೀಡಿದ್ದಾರೆ. ವೈದ್ಯರ ಸಲಹೆಯಂತೆ ನಡೆದುಕೊಂಡಿದ್ದು, ಆತಂಕ ಪಡುವ ಯಾವ ಸ್ಥಿತಿಯೂ ಇಲ್ಲ ಎಂದು ಡಿಕೆ ಶಿವಕುಮಾರ್ ಅವರೇ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ನಮ್ಮ ಮಠಕ್ಕೆ ರಾಹುಲ್​ ಗಾಂಧಿ ಬಂದಿದ್ರು.. ನನ್ನನ್ನು ಇಡಿ ಅರ್ಜೆಂಟ್​ ವಿಚಾರಣೆಗೆ ಕರೆದಿದ್ದೇಕೆ? ಡಿಕೆಶಿ ಪ್ರಶ್ನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.