ETV Bharat / state

ನಾಳೆ ಡಿ.ಕೆ ಶಿವಕುಮಾರ್​​​ ಪುತ್ರಿ ಐಶ್ವರ್ಯಾ ನಿಶ್ಚಿತಾರ್ಥ - ಡಿಕೆಶಿ ಮಗಳು ಹಾಗೂ ಕೆಫೆ ಕಾಫಿ ಡೇ ಮಾಲೀಕರಾಗಿದ್ದ ಸಿದ್ದಾರ್ಥ್​​​ ಮಗನ ನಿಶ್ಚಿತಾರ್ಥ

ಮುಂಜಾಗ್ರತಾ ಕ್ರಮವಾಗಿ‌ ಹೋಟೆಲ್ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದು, ಯಾವುದೇ ಕಾರ್ಯಕರ್ತರು ಮತ್ತು ಮುಖಂಡರು ಏರ್ಪೋರ್ಟ್​​​ಗೆ ಆಗಮಿಸಿ ಗುಂಪು ಗೂಡದಂತೆ ಪೊಲೀಸರು ಎಚ್ಚರ ವಹಿಸುತ್ತಿದ್ದಾರೆ..

dk shivakumar daughter engagement tomorrow
ನಾಳೆ ಡಿ.ಕೆ ಶಿವಕುಮಾರ್​​​ ಪತ್ರಿ ಐಶ್ವರ್ಯಾ ನಿಶ್ಚಿತಾರ್ಥ
author img

By

Published : Nov 18, 2020, 8:36 PM IST

ದೇವನಹಳ್ಳಿ : ಮಾಜಿ‌ ಸಜಿವ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಗಳು ಐಶ್ವರ್ಯಾ ಹಾಗೂ ಕಾಫಿ ಡೇ ಮಾಲೀಕ ದಿವಂಗತ ಸಿದ್ದಾರ್ಥ ಹೆಗಡೆ ಪುತ್ರ ಅಮರ್ತ್ಯ ಹೆಗಡೆ ಜೊತೆ ನಾಳೆ ವಿವಾಹ ನಿಶ್ಚಿತಾರ್ಥ ನೆರವೇರಲಿದೆ. ನಿಶ್ಚಿತಾರ್ಥಕ್ಕಾಗಿ ಕೆಂಪೇಗೌಡ ಏರ್ಪೋರ್ಟ್​​ನ ಟರ್ಮಿನಲ್ ಬಳಿಯಿರೋ ತಾಜ್ ಹೋಟೆಲ್ ಸಿದ್ದಗೊಳ್ಳುತ್ತಿದೆ.

ನಾಳೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಮುಂಭಾಗದಲ್ಲಿರೋ ತಾಜ್ ಹೋಟೆಲ್​​ನಲ್ಲಿ ಸರಳವಾಗಿ ನಿಶ್ಚಿತಾರ್ಥ ನೆರವೆರಿಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಜತೆಗೆ ಆಯ್ದ ವ್ಯಕ್ತಿಗಳಿಗೆ ಮಾತ್ರ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದ್ದು, ಸಿಎಂ ಸೇರಿದಂತೆ ದೇಶ ಮತ್ತು ರಾಜ್ಯದ ಪ್ರಮುಖ ಗಣ್ಯರು ಭಾಗವಹಿಸುವ ನಿರೀಕ್ಷೆಯಿದೆ.

dk shivakumar daughter engagement tomorrow
ನಾಳೆ ಡಿ.ಕೆ ಶಿವಕುಮಾರ್​​​ ಪುತ್ರಿ ಐಶ್ವರ್ಯಾ ನಿಶ್ಚಿತಾರ್ಥ

ಡಿ.ಕೆ.ಶಿವಕುಮಾರ್ ಮಗಳ ನಿಶ್ಚಿತಾರ್ಥ ಹಿನ್ನೆಲೆಯಲ್ಲಿ ಹೋಟೆಲ್​​ನ ಒಳ ಭಾಗದಲ್ಲಿ ಈಗಾಗಲೇ ಸಕಲ ಸಿದ್ಧತೆಗಳನ್ನ ಮಾಡಿಕೊಳ್ತಿದ್ದು, ಬೇರೆ ರಾಜ್ಯಗಳಿಂದ ನಿಶ್ಚಿತಾರ್ಥಕ್ಕೆ ಅತಿಥಿಗಳು ಆಗಮಿಸುವ ಸಾಧ್ಯತೆ ಇದೆ.

ಮುಂಜಾಗ್ರತಾ ಕ್ರಮವಾಗಿ‌ ಹೋಟೆಲ್ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದು, ಯಾವುದೇ ಕಾರ್ಯಕರ್ತರು ಮತ್ತು ಮುಖಂಡರು ಏರ್ಪೋರ್ಟ್​​​ಗೆ ಆಗಮಿಸಿ ಗುಂಪು ಗೂಡದಂತೆ ಪೊಲೀಸರು ಎಚ್ಚರ ವಹಿಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.