ETV Bharat / state

ಡಿಜೆ ಹಳ್ಳಿ ಗಲಭೆಯಲ್ಲಿ ಭಾಗಿಯಾದವರಿಗೆ ತಕ್ಕ ಶಿಕ್ಷೆಯಾಗಲಿದೆ: ಆರ್​ ಅಶೋಕ್

author img

By

Published : Sep 27, 2020, 2:02 AM IST

ಒಂದು ಪಕ್ಷವನ್ನು ಗುರಿಯಾಗಿಸಿಕೊಂಡು ಗಲಭೆ ನಡೆಸುತ್ತಿದ್ದಾರೆ. ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಮಾತ್ರವಲ್ಲದೆ ಬೇರೆ ಕಡೆ ಕೂಡ ಹೀಗೆ ಮಾಡಿದ್ದಾರೆ. ಗಲಭೆಯಲ್ಲಿ ಕಾಣದ ಕೈ ಕೆಲಸ ಮಾಡಿದೆ. ಈ ಬಗ್ಗೆ ವಿಚಾರಣೆ ನಡೆಯುತ್ತಿದ್ದು ತಪ್ಪಿತಸ್ಥರಿಗೆ ಶಿಕ್ಷೆ ಆಗಲಿದೆ ಎಂದು ಸಚಿವ ಆರ್ ಅಶೋಕ್​ ಹೇಳಿದರು.

R Ashok
ಆರ್​ ಅಶೋಕ್

ಬೆಂಗಳೂರು: ಡಿಜೆಹಳ್ಳಿ ಹಾಗೂ ಕೆಜಿ ಹಳ್ಳಿ ಗಲಭೆ ಪ್ರಕರಣದ ಹಿಂದೆ ಎಸ್​​ಡಿಪಿಐ ಸಂಘಟನೆಗಳ ಕೈವಾಡವಿದೆ ಎಂದು ಸಚಿವ ಅಶೋಕ್ ಹೇಳಿದರು.

ವಿಧಾನ ಪರಿಷತ್ತಿನಲ್ಲಿ ನಿಯಮ 330ರಡಿ ನಡೆದ ಸುದೀರ್ಘ ಚರ್ಚೆಗೆ ಉತ್ತರಿಸಿದ ಅವರು, ಒಂದು ಪಕ್ಷವನ್ನು ಗುರಿಯಾಗಿಸಿಕೊಂಡು ಹೀಗೆ ಮಾಡುತ್ತಿದ್ದಾರೆ. ಇಲ್ಲಿ ಮಾತ್ರವಲ್ಲದೆ ಬೇರೆ ಕಡೆ ಕೂಡ ಹೀಗೆ ಮಾಡಿದ್ದಾರೆ. ಗಲಭೆಯಲ್ಲಿ ಕಾಣದ ಕೈ ಕೆಲಸ ಮಾಡಿದೆ. ಒಂದು ಪೋಸ್ಟ್​​ಗೆ ಇಷ್ಟು ದೊಡ್ಡ ಗಲಾಟೆ ಬೇಕಾ? ಆದರೆ, ಪೋಸ್ಟ್ ಮಾಡಿದ್ದು ತಪ್ಪು. ಗಣೇಶ, ಲಕ್ಷ್ಮಿ ದೇವರ ಪೋಸ್ಟ್​ಗಳಿಗೆ ಅವಹೇಳನ ಆಗಿದೆ. ಅದಕ್ಕೆ ಇಷ್ಟೊಂದು ದೊಡ್ಡ ಗಲಾಟೆ ಆಗಿದೆಯಾ. ತಮ್ಮತಮ್ಮ ಧರ್ಮ ಪಾಲನೆ ಮಾಡಲಿ. ಅವರ ಧರ್ಮ ಅವರಿಗೆ ದೊಡ್ಡದು. ಆದರೆ, ಈ ರೀತಿ ಗಲಾಟೆ ಬೇಕಾ ಎಂದು ಪ್ರಶ್ನಿಸಿದರು.

ಪೊಲೀಸ್ ಸ್ಟೇಷನ್ ನುಗ್ಗಿ ಗಲಾಟೆ ಮಾಡುತ್ತಾರೆ‌. ಡಿಸಿಪಿ ಹಿರಿಯ ಅಧಿಕಾರಿಯನ್ನು ಸ್ಟೇಷನ್ ಒಳಗೆ ಕೂಡಿ ಹಾಕುತ್ತಾರೆ. ಒಂದು ಚಿಕ್ಕದಾದ ಪೋಸ್ಟ್​ಗೆ ಇಷ್ಟು ದೊಡ್ಡ ಗಲಾಟೆ ಬೇಕಾ? ಈ ಗಲಭೆ ಸಂಬಂಧ 72 ಪ್ರಕರಣಗಳು ದಾಖಲಾಗಿವೆ. ಗಲಭೆಯಿಂದಾಗಿ 10 ಕೋಟಿ ರೂ.ಯಷ್ಟು ನಷ್ಟವಾಗಿದೆ. 91 ಪೊಲೀಸರು ಗಲಭೆಯಲ್ಲಿ ಗಾಯಗೊಂಡಿದ್ದಾರೆ. ಇಷ್ಟು ದೊಡ್ಡ ಪ್ರಮಾಣದ ಗಲಾಟೆ ಆಗಿದ್ದರೂ ಈಗ ಅಮಾಯಕರಿಗೆ ಶಿಕ್ಷೆ ಆಗಬೇಡ ಅಂತ ಹೇಳುತ್ತೀರಾ. ಇಲ್ಲಿ ಯಾರು ಅಮಾಯಕರಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗಲಭೆಯಲ್ಲಿ ಕಾರಣರಾದವರನ್ನು ಪತ್ತೆಗೆ ಸಾಕಷ್ಟು ಗಂಭೀರ ತನಿಖೆ ನಡೆಸಲಾಗಿದೆ. ವಿಚಾರಣೆ ನಡೆಯುತ್ತಿದ್ದು ನಿಜವಾದ ತಪ್ಪಿತಸ್ಥರಿಗೆ ಶಿಕ್ಷೆ ಆಗಲಿದೆ ಎಂದರು.

ರಾತ್ರಿ 12 ಗಂಟೆ ಆದ ಹಿನ್ನೆಲೆಯಲ್ಲಿ ಕಲಾಪದಲ್ಲಿ ಇದ್ದ ದಿನಾಂಕದ ಚಾರ್ಟ್​ ಅನ್ನು ಮಾರ್ಷಲ್​ಗಳು ಬದಲಾವಣೆ ಮಾಡಿದರು. 26ನೇ ತಾರೀಖು ಬದಲಾವಣೆ ಮಾಡಿ, 27ರ ಶೀಟ್ ಹಾಕಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.