ETV Bharat / state

ಬೆಂಗಳೂರು: ರಸ್ತೆ ಗುಂಡಿಗಳಿಗೆ ದೀಪ ಹಚ್ಚಿ ದೀಪಾವಳಿ ಆಚರಣೆ - ರಸ್ತೆ ಗುಂಡಿಗಳಿಗೆ ದೀಪ ಹಚ್ಚಿ ದೀಪಾವಳಿ ಆಚರಣೆ

ನಗರದಲ್ಲಿ ರಸ್ತೆ ಗುಂಡಿ ಸಮಸ್ಯೆ ಹೆಚ್ಚಾಗಿದೆ. ಜನರು ಬಿಬಿಎಂಪಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಕಾರ್ಯಕರ್ತ ಹೆಚ್.ಎಂ.ವೆಂಕಟೇಶ್ ಹಾಗು ಜೊತೆಗಾರರು ರಸ್ತೆಯಲ್ಲಿದ್ದ ಗುಂಡಿಗಳ ಸುತ್ತ ದೀಪ ಹಚ್ಚಿ, ಬಿಬಿಎಂಪಿ ಅಧಿಕಾರಿಗಳ ಕಣ್ಣು ತೆರೆಸುವ ಪ್ರಯತ್ನ ಮಾಡಿದ್ದಾರೆ.

bangalore
ರಸ್ತೆ ಗುಂಡಿಗಳಿಗೆ ದೀಪ ಹಚ್ಚಿ ದೀಪಾವಳಿ ಆಚರಣೆ
author img

By

Published : Nov 5, 2021, 5:30 PM IST

ಬೆಂಗಳೂರು: ರಸ್ತೆ ಗುಂಡಿಗಳಿಂದ ಅಪಾರ ಸಾವು-ನೋವುಗಳಾಗಿದ್ದರೂ ಬೆಂಗಳೂರಿನ ರಸ್ತೆಗಳು ಗುಂಡಿಗಳಿಂದ ಮುಕ್ತವಾಗಿಲ್ಲ. ಹೀಗಾಗಿ ಸಾಮಾಜಿಕ ಕಾರ್ಯಕರ್ತ ಹೆಚ್.ಎಂ.ವೆಂಕಟೇಶ್ ಹಾಗು ಜೊತೆಗಾರರು ನ್ಯಾಯಾಂಗ ಬಡಾವಣೆಯ 14 ನೇ ಅಡ್ಡರಸ್ತೆಯಲ್ಲಿದ್ದ ಗುಂಡಿಗಳ ಸುತ್ತ ದೀಪ ಹಚ್ಚಿ ದೀಪಾವಳಿ ಆಚರಿಸಿದ್ದಾರೆ. ಜೊತೆಗೆ ಇಲ್ಲಿನ ನಿವಾಸಿಗಳೊಂದಿಗೆ ಸೇರಿಕೊಂಡು ಗುಂಡಿ ಮುಚ್ಚಿದ್ದಾರೆ.

ಈ ಬಗ್ಗೆ ಮಾತನಾಡಿದ, ಹೆಚ್.ಎಂ.ವೆಂಕಟೇಶ್, 'ಹಲವು ರಸ್ತೆಗಳು ಗುಂಡಿಮಯವಾಗಿ ಮಾನವ ಸಂಚಾರಕ್ಕೆ ಕಂಟಕವಾಗಿದೆ. ನ್ಯಾಯಾಂಗ ಬಡಾವಣೆ 14ನೇ ಅಡ್ಡರಸ್ತೆಯಲ್ಲಿ ಬಹಳ ದಿನಗಳಿಂದ ಬಿದ್ದ ಗುಂಡಿಯಿಂದ ಹಲವಾರು ದ್ವಿಚಕ್ರ ವಾಹನ ಸವಾರರು ತೊಂದರೆ ಅನುಭವಿಸಿದ್ದಾರೆ. ಹೀಗಾಗಿ ಗುಂಡಿ ಸುತ್ತ ದೀಪ ಹಚ್ಚಿ, ನಂತರ ಮರಳು ಸಿಮೆಂಟ್ ಮಿಶ್ರಿತ ಮಣ್ಣಿನಿಂದ ಗುಂಡಿಯನ್ನು ಮುಚ್ಚಿ, ಭ್ರಷ್ಟ ಬಿಬಿಎಂಪಿ ಅಧಿಕಾರಿಗಳ ಕಣ್ಣು ತೆರೆಸುವ ಪ್ರಯತ್ನ ಮಾಡಿದ್ದೇವೆ ಎಂದರು.

ನ್ಯಾಯಾಂಗ ಬಡಾವಣೆ ರಸ್ತೆಯಲ್ಲಿ ಇರುವ ಗುಂಡಿಗಳ ಸ್ಥಳಕ್ಕೆ, ಬಿಬಿಎಂಪಿಯ ಕಿರಿಯ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡುತ್ತಿದ್ದಾರೆ. ನಾಳೆ (ಶನಿವಾರ) ಬಡಾವಣೆಯ ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚುವುದಾಗಿ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: Missing 2000 crores.. ಬೆಂಗಳೂರಿನಾದ್ಯಂತ ಆಪ್​ನಿಂದ ರಸ್ತೆ 'ಗುಂಡಿಗಳ ಪೂಜೆ'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.