ETV Bharat / state

ಬ್ಯಾಂಕ್ವೆಟ್ ಹಾಲ್​ನಲ್ಲಿ ನಡೆದ ಬಾಬೂ ಜಗಜೀವನ ರಾಂ​ ಜಯಂತಿ ಕಾರ್ಯಕ್ರಮದಲ್ಲಿ ಗದ್ದಲ : ಸಿಎಂ ಮುಂದೆಯೇ ಆಕ್ರೋಶ - Disturbance in Babu Jagjivan ram programme at Bengaluru

ಸರ್ಕಾರ ಮಾದಿಗ ಸಮುದಾಯದಲ್ಲಿ ಯಾವುದೇ ಯೋಜನೆ ನೀಡುತ್ತಿಲ್ಲ. ಈಗಾಗಲೇ ಜಾತಿಯಲ್ಲಿರುವ ಯೋಜನೆಗಳನ್ನು ತಡೆ ಹಿಡಿಯಲಾಗಿದೆ. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಆಹ್ವಾನಿಸಿಲ್ಲ. ಪತ್ರಿಕೆ-ಟಿವಿಗಳಲ್ಲಿ ಸಮರ್ಪಕವಾಗಿ ಜಾಹೀರಾತು ನೀಡಿಲ್ಲ ಎಂಬುದು ಅಸಮಾಧಾನಕ್ಕೆ ಕಾರಣವಾಗಿದೆ..

disturbance-in-babu-jagjivan-ram-programme-at-bengaluru
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿದರು
author img

By

Published : Apr 5, 2022, 4:07 PM IST

ಬೆಂಗಳೂರು : ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​ನಲ್ಲಿ ಬಾಬು ಜಗಜೀವನ ರಾಂ 115ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಗೊಂದಲ, ಗದ್ದಲದ ವಾತಾವರಣ ನಿರ್ಮಾಣವಾಗಿತ್ತು. ಸಮುದಾಯದ‌ ಕೆಲವರು ಸಮಾರಂಭದ ಮಧ್ಯೆಯೇ ಎದ್ದು ನಿಂತು ಆಕ್ಷೇಪ ವ್ಯಕ್ತಪಡಿಸಿದರು. ಬಾಬು ಜಗಜೀವನರಾಂ ಹೆಸರಲ್ಲಿ ಪತ್ರಿಕೆಯಲ್ಲಿ ಸಣ್ಣ ಮಟ್ಟದಲ್ಲಿ ಜಾಹೀರಾತನ್ನು‌ ಸರ್ಕಾರ ಕೊಟ್ಟಿದೆ. ಜನರಿಗೆ ಆಹ್ವಾನ ಕೊಟ್ಟಿಲ್ಲ. ಖಾಲಿ ಖುರ್ಚಿಗಳಿಗೆ ಕಾರ್ಯಕ್ರಮ ಮಾಡ್ತಿದ್ದಾರೆ ಎಂದು ಕರ್ನಾಟಕ ಆದಿ ಜಾಂಬವ ಸಂಘದಿಂದ ಆಕ್ರೋಶ ವ್ಯಕ್ತವಾಯಿತು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿದರು

ಈ ವೇಳೆ ಕಾರ್ಯಕ್ರಮದಲ್ಲಿ ಗದ್ದಲ‌ ಉಂಟಾಯಿತು. ಪೊಲೀಸರು ಅಸಮಾಧಾನಿತರನ್ನು ಸಮಾಧಾನಪಡಿಸಲು ಯತ್ನಿಸಿದರಾದರೂ ತಮ್ಮ ಗದ್ದಲವನ್ನು ಮುಂದುವರೆಸಿದರು. ಬಳಿಕ ಗದ್ದಲ ಉಂಟು ಮಾಡುತ್ತಿದ್ದ ಆದಿ ಜಾಂಬವ ಸಂಘಟನೆಯ ಕಾರ್ಯಕರ್ತರನ್ನು ಪೊಲೀಸರು ಹೊರಗಡೆ ಕರೆದೊಯ್ದರು. ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಕಾರ್ಯಕ್ರಮದಲ್ಲಿ ಭಾಷಣ ಮಾಡುವ ಸಂದರ್ಭದಲ್ಲೂ ಆಕ್ಷೇಪ ಮುಂದುವರೆಯಿತು.

ನಂತರದಲ್ಲಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರು ಸಮಾಧಾನಪಡಿಸಿ ಭಾಷಣ ಮುಂದುವರೆಸಿದರು. ಕಾರ್ಯಕ್ರಮ ಮುಗಿದ‌ ಬಳಿಕ ಸಿಎಂ ಅಸಮಾಧಾನಿತರ ಜೊತೆ ಮಾತನಾಡಿ, ತಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು. ಸಚಿವ ಕಾರಜೋಳಗೆ ಅಸಮಾಧಾನಿತರು ಧಿಕ್ಕಾರ ಕೂಗಿದ ಘಟನೆ ನಡೆಯಿತು. ಆದರೆ, ಸಚಿವರು ಕೈಮುಗಿದು ಏನೂ ಪ್ರತಿಕ್ರಿಯಿಸದೇ ತೆರಳಿದರು.

ಸರ್ಕಾರ ಮಾದಿಗ ಸಮುದಾಯದಲ್ಲಿ ಯಾವುದೇ ಯೋಜನೆ ನೀಡುತ್ತಿಲ್ಲ. ಈಗಾಗಲೇ ಜಾತಿಯಲ್ಲಿರುವ ಯೋಜನೆಗಳನ್ನು ತಡೆ ಹಿಡಿಯಲಾಗಿದೆ. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಆಹ್ವಾನಿಸಿಲ್ಲ. ಪತ್ರಿಕೆ-ಟಿವಿಗಳಲ್ಲಿ ಸಮರ್ಪಕವಾಗಿ ಜಾಹೀರಾತು ನೀಡಿಲ್ಲ ಎಂಬುದು ಅಸಮಾಧಾನಕ್ಕೆ ಕಾರಣವಾಗಿದೆ.

ಓದಿ: ನಾನೇನು ಸನ್ಯಾಸಿಯಲ್ಲ, ಅವಕಾಶ ಕೇಳಿದ್ದೇನೆ, ಕೊಟ್ಟರೆ ನಿಭಾಯಿಸುತ್ತೇನೆ: ರೇಣುಕಾಚಾರ್ಯ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.