ಕೆ.ಆರ್. ಪುರ: ಲಾಕ್‌ಡೌನ್‌ನಿಂದ ತೊಂದರೆಗೊಳಗಾಗಿರುವ ಕಟ್ಟಡ ಕಾರ್ಮಿಕರು, ಕೂಲಿಕಾರರು ಮತ್ತು ಬಡ ಜನತೆಗೆ ಅವಶ್ಯವಿರುವ ದಿನಸಿ ಕಿಟ್‌ಗಳನ್ನು ಕೆ.ಆರ್.ಪುರದ ಕೇಂಬ್ರಿಡ್ಜ್ ಸಮೂಹ ವಿದ್ಯಾ ಸಂಸ್ಥೆಯ ವತಿಯಿಂದ ಸಂಸ್ಥೆಯ ಅಧ್ಯಕ್ಷ ಡಿ.ಕೆ.ಮೋಹನ್ ವಿತರಿಸಿದರು.
ಆಹಾರ ಸಾಮಾಗ್ರಿಗಳನ್ನು ವಿತರಿಸಿ ಮಾತನಾಡಿದ ಡಿ.ಕೆ.ಮೋಹನ್, ಪ್ರಿಯಾಂಕ ನಗರದಲ್ಲಿ ವಾಸಿಸುತ್ತಿರುವ ಸುಮಾರು ಐನೂರಕ್ಕು ಹೆಚ್ಚು ಕುಟುಂಬಗಳಿಗೆ ದಿನಸಿ ಕಿಟ್‌ಗಳನ್ನು ವಿತರಿಸಿ ಸೇವಾ ಕಾರ್ಯ ಮಾಡಲಾಗಿದೆ. ಕೊರೊನಾದಿಂದ ಸಂಕಷ್ಟದಲ್ಲಿರುವ ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು ಮತ್ತು ಬಡಜನತೆ ತುಂಬಾ ತೊಂದರೆಗೊಳಗಾಗಿದ್ದವರನ್ನ ತಾವೇ ಸ್ವತಃ ಗ್ರಾಮಗಳಿಗೆ ಭೇಟಿ ನೀಡಿ ಕಡು ಬಡವರನ್ನ ಗುರುತಿಸಿ ಸಹಾಯಹಸ್ತ ನೀಡಿದ್ದಾರೆ. ಮತ್ತು ಉಳ್ಳವರು ಇಲ್ಲದವರಿಗೆ ಇಂತಹ ಸಮಯದಲ್ಲಿ ಸಹಾಯಕ್ಕೆ ಬರಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ: 'ಸ್ಪುಟ್ನಿಕ್ ವಿ' ಲಸಿಕೆಯ ಪ್ರತಿ ಡೋಸ್‌ಗೆ 995 ರೂ ದರ ನಿಗದಿ
ಇಂತಹ ಕಠಿಣ ಸಂದರ್ಭದಲ್ಲಿ ಬಡವರಿಗೆ ನಮ್ಮ ನೆರವಿನ ಹಸ್ತ ಚಾಚಬೇಕಾದದ್ದು ನಮ್ಮೆಲ್ಲರ ಕರ್ತವ್ಯ. ಪ್ರತಿ ದಿನಸಿ ಕಿಟ್ ಒಂದು ಕುಟುಂಬಕ್ಕೆ ಸುಮಾರು ಹದಿನೈದು ದಿನಗಳಿಗಾಗುವಷ್ಟು ದಿನಸಿ, ಅಡುಗೆ ಎಣ್ಣೆ, ಬೇಳೆ, ಉಪ್ಪು, ಸಕ್ಕರೆ ಇತ್ಯಾದಿಗಳನ್ನು ಒಳಗೊಂಡಿದೆ ಎಂದರು.