ಬೆಂಗಳೂರು: ಗಣೇಶ ಚತುರ್ಥಿ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಎಲ್ಲಾರು ಹಬ್ಬದ ತಯಾರಿಯಲ್ಲಿ ತೊಡಗಿದ್ದಾರೆ. ಕೆಲವರು ಪ್ಲಾಸ್ಟಿಕ್ ಮತ್ತು ವೈಟ್ ಸಿಮೆಂಟ್ ಗಣೇಶನ ಮೂರ್ತಿಗಳನ್ನು ಮನೆಗೆ ತರಬಹುದು. ಇದು ಪರಿಸರಕ್ಕೆ ಮಾರಕವಾಗಿ ಪರಿಣಮಿಸಲಿದೆ. ಈ ಎಲ್ಲಾ ದೃಷ್ಟಿಯಿಂದ ಸಮಾಜ ಸೇವಕರೊಬ್ಬರು ಸಾರ್ವಜನಿಕರಿಗೆ ಉಚಿತವಾಗಿ 5 ಸಾವಿರ ಮಣ್ಣಿನಿಂದ ಮಾಡಲ್ಪಟ್ಟ ಗಣೇಶ ಮೂರ್ತಿಗಳನ್ನು ವಿತರಿಸಿದ್ದಾರೆ.
ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಸಚಿವ ಬೈರತಿ ಬಸವರಾಜ್ ಚಾಲನೆ ನೀಡಿದರು. ಬೆಂಗಳೂರಿನ ಕೆಆರ್ ಪುರಂ ಕ್ಷೇತ್ರದಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರ ಮಾರ್ಗದರ್ಶನದಲ್ಲಿ, ರಾಮಮೂರ್ತಿನಗರ ವಾರ್ಡ್ನ ಬಿಜೆಪಿ ಮುಖಂಡ ದುಶ್ಯಂತ ರಾಜ್ ಮೂರ್ತಿಗಳನ್ನು ವಿತರಿಸಿದರು. ಅಷ್ಟೇ ಅಲ್ಲದೇ ಪರಿಸರ ಸಂರಕ್ಷಣೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಸಹ ಮೂಡಿಸಿದ್ದಾರೆ.
ಈ ವೇಳೆ ಮಾಧ್ಯಮಗಳ ಜೊತೆ ಸಮಾಜ ಸೇವಕರಾದ ದುಶ್ಯಂತ್ ರಾಜ್ ಅವರು ಮಾತನಾಡಿ, ಕಳೆದ ಹನ್ನೆರಡು ವರ್ಷಗಳಿಂದ ಗಣೇಶ ಚತುರ್ಥಿಗೆ ಕೈಲಾದ ಸಹಾಯವನ್ನು ಮಾಡುತ್ತಾ ಬರುತ್ತಿದ್ದೇವೆ. ಕಳೆದ ವರ್ಷವೇ 5 ಸಾವಿರ ಗಣೇಶ ಮೂರ್ತಿಗಳನ್ನು ವಿತರಿಸಬೇಕಾಗಿತ್ತು. ಆದ್ರೆ ಕೊರೊನಾ ಎಲ್ಲದಕ್ಕೂ ಅಡ್ಡಿ ಉಂಟು ಮಾಡಿತ್ತು. ಹಾಗಾಗಿ ಈ ಬಾರಿ ಸಾರ್ವಜನಿಕರಿಗೆ ಉಚಿತವಾಗಿ ಮಣ್ಣಿನಿಂದ ಮಾಡಲ್ಪಟ್ಟ ಗಣೇಶನ ಮೂರ್ತಿಗಳನ್ನು ವಿತರಿಸಲಾಗ್ತಿದೆ ಎಂದು ಹೇಳಿದರು.
ಇದನ್ನೂ ಓದಿ: ವೀರ ಸಾವರ್ಕರ್ ವೇದಿಕೆಯಲ್ಲಿ ಈ ಬಾರಿ ಕಾಶಿ ವಿಶ್ವನಾಥ ರಕ್ಷಕ ಗಣಪ