ಬೆಂಗಳೂರು: ದಕ್ಷಿಣ ಭಾರತ ಹಾಗೂ ಕೇಂದ್ರಾಡಳಿತ ಪ್ರದೇಶಕ್ಕೆ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆಂದು ಸ್ವದೇಶಿ ಯೋಜನೆಯಡಿ 2014 ರಿಂದ ಒಟ್ಟು 1,185.15 ಕೋಟಿ ರೂಪಾಯಿ ಅನುದಾನ ಸಿಕ್ಕಿದ್ದು, ಈ ಪೈಕಿ ಕರ್ನಾಟಕಕ್ಕೆ ಯಾವುದೇ ರೀತಿಯ ಅನುದಾನವೇ ಮೀಸಲಾಗಿಲ್ಲ.
ನಗರದ ಖಾಸಗಿ ಹೋಟೆಲ್ನಲ್ಲಿ ದಕ್ಷಿಣ ರಾಜ್ಯದ ಪ್ರವಾಸೋದ್ಯಮ ಸಚಿವರ ಸಮ್ಮೇಳನ ನಡೆಯುತ್ತಿದ್ದು, ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಮಾಧ್ಯಮ ಹೇಳಿಕೆಯಲ್ಲಿ ಕರ್ನಾಟಕಕ್ಕೆ ಅನುದಾನ ಮೀಸಲಾಗದೇ ಇರುವುದು ತಿಳಿದುಬಂದಿದೆ.
ಕರ್ನಾಟಕ ಹೊರತುಪಡಿಸಿ ದ.ಭಾರತದ ಎಲ್ಲಾ ರಾಜ್ಯಗಳಿಗೂ ಅನುದಾನ:
ಆಂಧ್ರಪ್ರದೇಶದ: ಆರ್ಥಿಕ ವರ್ಷ 2014-15 ರಿಂದ 2017-18 ರವರೆಗೆ ಒಟ್ಟು ₹141.53 ಕೋಟಿ ಅನುದಾನ ಮಿಸಲಾಗಿದ್ದು, ಈ ವರೆಗೆ ₹141.77 ಕೋಟಿ ಜೊತೆ ಹೆಚ್ಚುವರಿ ₹24 ಲಕ್ಷ ಬಿಡುಗಡೆಯಾಗಿದೆ.
ಕೇರಳ: ಆರ್ಥಿಕ ವರ್ಷ 2015-16 ರಿಂದ 2018-19 ರವರೆಗೆ ₹413.58 ಕೋಟಿ ಅನುದಾನ ಮಿಸಲಾಗಿದ್ದು, ₹180.39 ಕೋಟಿ ಅನುದಾನ ಬಿಡುಗಡೆ ಆಗಿದೆ.
ತಮಿಳುನಾಡು: ಆರ್ಥಿಕ ವರ್ಷ 2016-17 ಕ್ಕೆ ₹73.13 ಕೋಟಿ ಮಿಸಲಾಗಿದ್ದು 68.6 ಕೋಟಿ ಬಿಡುಗಡೆ ಆಗಿದೆ.
ತೆಲಂಗಾಣ: ಆರ್ಥಿಕ ವರ್ಷ 2015-16 ರಿಂದ 2017-18 ರವರೆಗೆ ₹268.39 ಕೋಟಿ ಮಿಸಲಾಗಿದ್ದು ₹233.53 ಕೋಟಿ ಬಿಡುಗಡೆ ಆಗಿದೆ.
ಪುದುಚೇರಿ: ಆರ್ಥಿಕ ವರ್ಷ 2015-16 ರಿಂದ 2017-18 ರವರೆಗೆ ₹113. 35 ಕೋಟಿ ಮಿಸಲಾಗಿದ್ದು, ₹142.76 ಕೋಟಿ ಬಿಡುಗಡೆ ಆಗಿದೆ. ಹೆಚ್ಚುವರಿಯಾಗಿ ₹29.41 ಕೋಟಿ ಬಿಡುಗಡೆ ಮಾಡಲಾಗಿದೆ.
ಇದಲ್ಲದೇ, ಪ್ರಶಾದ್ ಯೋಜನೆಯಲ್ಲೂ ಆಂಧ್ರಪ್ರದೇಶ, ಕೇರಳ ಹಾಗೂ ತಮಿಳುನಾಡು ರಾಜ್ಯಕ್ಕೆ ಒಟ್ಟು ₹140.21 ಕೋಟಿ ಅನುಮತಿ ನೀಡಿದ್ದು, ಈವರೆಗೆ ₹121.49 ಕೋಟಿ ಅನುದಾನ ಬಿಡುಗಡೆ ಆಗಿದೆ ಎಂದು ಕೇಂದ್ರ ಪ್ರವಾಸೋದ್ಯಮ ಇಲಾಖೆ ಅಂಕಿಅಂಶಗಳು ಹೇಳುತ್ತಿವೆ.