ETV Bharat / state

ಬಿಬಿಎಂಪಿ ಬಜೆಟ್ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಆರೋಪ... ಸಚಿವ ಆರ್​ ಅಶೋಕ್​ ಸ್ಪಷ್ಟನೆ ಹೀಗಿದೆ ​ - ಬಜೆಟ್ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಆರೋಪ

ಇಂದು ಪಾಲಿಕೆ 2020-21 ನೇ ಸಾಲಿನ ಪಾಲಿಕೆ ಬಜೆಟ್ ಅನ್ನು ಬಿಜೆಪಿ ಪಕ್ಷ ಮಂಡಿಸಿದ್ದು, ಈ ಬಜೆಟ್​ನಲ್ಲಿ ಯಾವುದೇ ಉತ್ತಮ ಯೋಜನೆಗಳಿಲ್ಲ, ಇದು ಬೋಗಸ್ ಬಜೆಟ್ ಆಗಿದೆ ಎಂದು ಪ್ರತಿಪಕ್ಷದ ಸದಸ್ಯರು ಆರೋಪಿಸಿದ್ದಾರೆ.

Abdul Wajid
ಅಬ್ದುಲ್ ವಾಜೀದ್
author img

By

Published : Apr 20, 2020, 8:19 PM IST

ಬೆಂಗಳೂರು: ಇಂದು ಪಾಲಿಕೆ 2020-21 ನೇ ಸಾಲಿನ ಪಾಲಿಕೆ ಬಜೆಟ್ ಅನ್ನು ಬಿಜೆಪಿ ಮಂಡಿಸಿದೆ. ಈ ಬಜೆಟ್​ನಲ್ಲಿ ಯಾವುದೇ ಉತ್ತಮ ಯೋಜನೆಗಳಿಲ್ಲ, ಇದು ಬೋಗಸ್ ಬಜೆಟ್ ಆಗಿದೆ. ಕೊರೊನಾ ಸಂಕಷ್ಟದಿಂದ ಜನರಿಗೆ ಊಟ, ಕೈಗೆ ಹಣ ನೀಡಲು ಯಾವುದೇ ಯೋಜನೆ ಇಲ್ಲವೆಂದು ಪ್ರತಿಪಕ್ಷ ನಾಯಕರು ಆರೋಪಿಸಿದ್ದಾರೆ.

ಬಜೆಟ್ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಆರೋಪ

ಮೇಯರ್ ತಮ್ಮ ವಾರ್ಡಿಗೆ 40 ಕೋಟಿ, ಉಪಮೇಯರ್ ವಾರ್ಡಿಗೆ 10 ಕೋಟಿ, ಆಡಳಿತ ಪಕ್ಷದ ನಾಯಕರ ವಾರ್ಡಿಗೆ 20 ಕೋಟಿ, ಪ್ರತಿಪಕ್ಷದ ನಾಯಕನ ವಾರ್ಡಿಗೆ 7 ಕೋಟಿ, ಜೆಡಿಎಸ್ ಪಕ್ಷದ ನಾಯಕಿ ವಾರ್ಡ್​ಗೆ 5 ಕೋಟಿ ಮಾತ್ರ ಮೀಸಲಿಡಲಾಗಿದೆ.‌ ಇನ್ನು ಬಿಜೆಪಿ ಆಡಳಿತರೂಢ ವಿಧಾನಸಭಾ ಕ್ಷೇತ್ರಗಳಿಗೆ ಬಂಪರ್ ಅನುದಾನ ಮೀಸಲಿಟ್ಟಿದ್ದು, 15 ವಿಧಾನಸಭಾ ಕ್ಷೇತ್ರಗಳಿಗೆ 190 ಕೋಟಿ ಹಣ ಹಂಚಿಕೆ ಮಾಡಲಾಗಿದೆ.

ಈ ಕುರಿತು ಪ್ರತಿಪಕ್ಷ ನಾಯಕ ಅಬ್ದುಲ್ ವಾಜೀದ್ ಮಾತನಾಡಿ, ಕೊರೊನಾ ಸಂಬಂಧ ವಿಡಿಯೋ ಕಾನ್ಫರೆನ್ಸ್ ಮೂಲಕ ಬಜೆಟ್ ಮಂಡಿಸಲಾಗಿದೆ. ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ ಪಾಲಿಕೆ ಸದಸ್ಯರ ವಾರ್ಡ್​ಗಳಿಗೆ ಅನುದಾನ ಕೊಟ್ಟು ಅಭಿವೃದ್ಧಿ ಬಜೆಟ್ ಮಾಡಿದ್ದಾರೆ. ಇಂದಿರಾ ಕ್ಯಾಂಟೀನ್​ಗೆ ಶೂನ್ಯ ಕೊಡುಗೆ ನೀಡಲಾಗಿದೆ. ನಿಮ್ಮ ಬಳಿ ಹಣ ಇಲ್ಲದಿದ್ದರೆ ಪಿಡಿಓ ಅಡಿಯಲ್ಲಿ ಹಣ ಮೀಸಲಿಡಬಹುದಾಗಿತ್ತು. ಕೋಟ್ಯಂತರ ರೂ. ಬೇರೆ ವಾರ್ಡ್​ಗಳಿಗೆ ನೀಡಿದ್ದಾರೆ. ಸದ್ಯ ಜನರು ರಸ್ತೆ, ನೀರು ಕೇಳುತ್ತಿಲ್ಲ, ತಿನ್ನಲು ಊಟ ಕೇಳುತ್ತಿದ್ದಾರೆ. ಬಜೆಟ್​ನಲ್ಲಿ ಹಳೆಯ ಅನೇಕ ಯೋಜನೆಗಳನ್ನು ಕೈಬಿಡಲಾಗಿದೆ. ಯಾವುದೇ ಹೊಸ ಯೋಜನೆ ಜಾರಿಗೆ ತಂದಿಲ್ಲ. ಬಿಜೆಪಿ ಕಾರ್ಪೊರೇಟರ್ ಹಾಗೂ ಶಾಸಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದರು.

ಪ್ರತಿಪಕ್ಷ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿರುವ ಸಚಿವ ಆರ್ .ಅಶೋಕ್, ಕಳೆದ ಐದು ವರ್ಷದಲ್ಲಿ ಯಾವೆಲ್ಲ ವಾರ್ಡ್​ಗಳಿಗೆ, ಕ್ಷೇತ್ರಗಳಿಗೆ ಕಡಿಮೆ ಹಣ ಹಂಚಿಕೆಯಾಗಿದೆಯೋ ಅಲ್ಲಿಗೆ ಹೆಚ್ಚಿನ ಅನುದಾನ ಕೊಟ್ಟು ಸರಿಪಡಿಸಲಾಗಿದೆ. 10 ಸಾವಿರಕ್ಕಿಂತ ಕಡಿಮೆ ಲೀಟರ್​ ನೀರನ್ನು ಬಳಸುವವರಿಗೆ ಒಂದು ವರ್ಷ ಉಚಿತ ನೀರು ನೀಡಲಿದ್ದು, ಇದು ಎರಡೂವರೆ ಲಕ್ಷ ಕುಟುಂಬಗಳಿಗೆ ಸದುಪಯೋಗವಾಗಲಿದೆ. ಹಿಂದುಳಿದ ಮತ್ತು ಅಲ್ಪಸಂಖ್ಯಾತ, ಬೀದಿಬದಿ ವ್ಯಾಪಾರಿಗಳಿಗೆ ಅನುಕೂಲ, ಅನಂತ್ ಕುಮಾರ್ ಹೆಸರಲ್ಲಿ ಲ್ಯಾಪ್‌ಟಾಪ್ ನೀಡಲು 15 ಕೋಟಿ ಹಾಗೂ ಕೊರೊನಾ ವೈರಸ್ ತಡೆಗಟ್ಟಲು ಮೊದಲ ಬಾರಿ ಹಣ ಮೀಸಲಿಡಲಾಗಿದೆ. ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಸರ್ಕಾರವೇ ಮುಂದುವರಿಸಲಿದೆ ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.