ETV Bharat / state

ಅಕ್ರಮ ಪಂಪ್​ಸೆಟ್ ಗಳಿಗೆ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿ: ಎರಡು ದಿನದಲ್ಲಿ ಕ್ರಮಕ್ಕೆ ಸಿಎಂ ತಾಕೀತು

ತುಂಗಭದ್ರಾ ಎಡದಂಡೆ ನಾಲೆಯಲ್ಲಿ ಅಳವಡಿಸಿರುವ ಅಕ್ರಮ ಪಂಪ್​ಸೆಟ್ ಗಳಿಗೆ ಸಂಪರ್ಕ ಕಲ್ಪಿಸಿರುವ ವಿದ್ಯುತ್ ಸೌಲಭ್ಯವನ್ನು ಎರಡು ದಿನಗೊಳಗಾಗಿ ಸ್ಥಗಿತಗೊಳಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ಅಕ್ರಮ ಪಂಪ್ ಸೆಟ್ ಗಳಿಗೆ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿ, ಎರಡು ದಿನದಲ್ಲಿ ಕ್ರಮ ಕೈಗೊಳ್ಳಿ: ಸಿಎಂ ಸೂಚನೆ
author img

By

Published : Sep 5, 2019, 8:34 PM IST

ಬೆಂಗಳೂರು: ತುಂಗಭದ್ರಾ ಎಡದಂಡೆ ನಾಲೆಯಲ್ಲಿ ಅಳವಡಿಸಿರುವ ಅಕ್ರಮ ಪಂಪ್​ಸೆಟ್​ಗಳಿಗೆ ಸಂಪರ್ಕ ಕಲ್ಪಿಸಿರುವ ವಿದ್ಯುತ್ ಸೌಲಭ್ಯವನ್ನು ಎರಡು ದಿನಗಳೊಳಗಾಗಿ ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚಿಸಿದ್ದಾರೆ.

ಅಕ್ರಮ ಪಂಪ್ ಸೆಟ್ ಗಳಿಗೆ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿ, ಎರಡು ದಿನದಲ್ಲಿ ಕ್ರಮ ಕೈಗೊಳ್ಳಿ: ಸಿಎಂ ಸೂಚನೆ
ತುಂಗಭದ್ರಾ ಎಡದಂಡೆ ನಾಲೆಯ ಮೂಲಕ ರಾಯಚೂರು ಮತ್ತು ಮಾನ್ವಿ ತಾಲೂಕುಗಳಿಗೆ ನೀರಿನ ಸೌಲಭ್ಯ ಒದಗಿಸುವ ಕುರಿತಂತೆ ರೈತರ ನಿಯೋಗದ ಜೊತೆ ಗೃಹ ಕಚೇರಿ ಕೃಷ್ಣಾದಲ್ಲಿ ಅವರು ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರೈತರು ಡ್ಯಾಂ ನಲ್ಲಿ ಸಾಕಷ್ಟು ನೀರು ಇದ್ದರೂ, ನಮ್ಮ ರಾಯಚೂರು ಜಿಲ್ಲೆಗೆ ನೀರು ಸಿಗುತ್ತಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಮನವಿ‌ ಮಾಡಿದರು. ಅಷ್ಟೇ ಅಲ್ಲದೆ ಕಲೆವೊಮ್ಮೆ ನೀರು ಬಿಟ್ಟಾಗ ನಾಲೆಗೆ ಹರಿಯುವ ನೀರನ್ನು ಪಂಪ್​ಗಳ ಮೂಲಕ ಬೇರೆಯವರು ಅಕ್ರಮವಾಗಿ ಪಡೆಯುತ್ತಿದ್ದಾರೆ. ಹಾಗಾಗಿ ನಮಗೆ ನೀರು ಸಿಗುತ್ತಿಲ್ಲ ಎಂದು ಸಮಸ್ಯೆ ತೋಡಿಕೊಂಡರು. ಅಕ್ರಮ ಪೈಪ್​ಗಳನ್ನು ಕೂಡಲೇ ತೆಗೆಯಬೇಕೆಂದು ಮುಖ್ಯಮಂತ್ರಿ ಅವರಿಗೆ ಒತ್ತಾಯಿಸಿದರು. ಅಲ್ಲದೆ, ಈ ನೀರು ನಮಗೆ ಸಿಗದೆ ಹೋದರೆ ನಮ್ಮ ಜಿಲ್ಲೆಯಲ್ಲಿ ಮತ್ತೆ ಬರದ ಛಾಯೆ ಆವರಿಸುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಮಾನ್ವಿ ಮತ್ತು ರಾಯಚೂರು ತಾಲೂಕಿನ 2 ಲಕ್ಷ 40 ಸಾವಿರ ಎಕರೆಗೆ ನೀರಿನ ಕೊರತೆ ನೀಗಿಸಲು ತಕ್ಷಣ ರಾಯಚೂರು ಡಿಸಿ ಮತ್ತು ಎಸ್ ಪಿ ಹಾಗೂ ಕೊಪ್ಪಳ ಜಿಲ್ಲೆಯ ಡಿಸಿ ಮತ್ತು ಎಸ್ ಪಿ ಗಳಿಗೆ ನಿಗಾವಹಿಸುವಂತೆ ಸೂಚಿಸಿ ಎಂದು ರೈತರು ಸಿಎಂಗೆ ಮನವಿ ಮಾಡಿದ್ರು.

ರೈತರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಯೆಡಿಯೂರಪ್ಪ ಕೂಡಲೇ ನ್ಯಾಯಯುತವಾಗಿ ಯಾರಿಗೆ ‌ನೀರು ಸಿಗಬೇಕೋ ಅವರಿಗೆ ಸಿಗುವಂತೆ ಮಾಡಬೇಕು ಅಂತಾ ಅಧಿಕಾರಿಗಳಿಗೆ ತಾಕೀತು‌ ಮಾಡಿದ್ರು. ಅಷ್ಟೇ ಅಲ್ಲದೆ, ಅಕ್ರಮ‌ ಪಂಪ್​ಸೆಟ್​ಗಳಿಗೆ ಅಳವಡಿಸಿರುವ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಬೇಕು. ಇದಕ್ಕಾಗಿ ಅಗತ್ಯವಿದ್ದರೆ ಪೊಲೀಸರ ಭದ್ರತೆ ಪಡೆಯಿರಿ. ರೈತರಿಗೆ ನ್ಯಾಯಯುತವಾಗಿ ನೀರು ಹರಿಸುವತ್ತ ಕೂಡಲೇ ಗಮನ ಹರಿಸಿ ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ರು.

ಇನ್ನು ಎರಡು ದಿನಗಳ ಒಳಗೆ ಎಲ್ಲಾ ಅಕ್ರಮ ಪಂಪ್​ಸೆಟ್ ಸಂಪರ್ಕವನ್ನು ಸ್ಥಗಿತಗೊಳಿಸಿ ಕೂಡಲೇ ರಾಯಚೂರು ಜಿಲ್ಲೆಗೆ ನೀರು ಹರಿಸಬೇಕು ಮತ್ತು ಸೂಕ್ತ ಕ್ರಮ ತೆಗೆದುಕೊಂಡು ಅದರ ವರದಿ ನೀಡಿ ಎಂದು ಸಿಎಂ ಯಡಿಯೂರಪ್ಪ ಅವರು ಅಧಿಕಾರಿಗಳಿಗೆ ಆದೇಶಿಸಿದರು.

Intro:newsBody:

ಅಕ್ರಮ ಪಂಪ್ ಸೆಟ್ ಗಳಿಗೆ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿ, ಎರಡು ದಿನದಲ್ಲಿ ಕ್ರಮ ಕೈಗೊಳ್ಳಿ: ಸಿಎಂ ಸೂಚನೆ ತೆರವಿಗೆ ಸಿಎಂ ಸೂಚನೆ

ಬೆಂಗಳೂರು:ತುಂಗಭದ್ರಾ ಎಡದಂಡೆ ನಾಲೆಯಲ್ಲಿ ಅಳವಡಿಸಿರುವ ಅಕ್ರಮ ಪಂಪ್ ಸೆಟ್ ಗಳಿಗೆ ಕಲ್ಪಿಸಿರುವ ವಿದ್ಯುತ್ ಸೌಲಭ್ಯವನ್ನು ಎರಡು ದಿನದ ಒಳಗಾಗಿ ಸ್ಥಗಿತಗೊಳಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದ್ದಾರೆ.

ತುಂಗಭದ್ರಾ ಎಡದಂಡೆ ನಾಲೆಯ ಮೂಲಕ ರಾಯಚೂರು ಜಿಲ್ಲೆಯ ರಾಯಚೂರು ಮತ್ತು ಮಾನ್ವಿ ತಾಲ್ಲೂಕಿಗಳಿಗೆ ನೀರಿನ ಸೌಲಭ್ಯ ಒದಗಿಸುವ ಕುರಿತಂತೆ ರೈತರ ನಿಯೋಗದ ಜೊತೆ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮಾಡಿ ಚರ್ಚೆ ನಡೆಸಿದರು

ಈ ಸಂದರ್ಭದಲ್ಲಿ ಮಾತನಾಡಿದ ರೈತರು ಡ್ಯಾಮ್ ನಲ್ಲಿ ಸಾಕಷ್ಟು ನೀರು ಇದ್ದರು ನಮ್ಮ ರಾಯಚೂರು ಜಿಲ್ಲೆಗೆ ನೀರು ಸಿಗುತ್ತಿಲ್ಲ ಈ ಬಗ್ಗೆ ಕ್ರಮ ವಹಿಸಬೇಕು ಎಂದು ಮನವಿ‌ ಮಾಡಿದರು.

ಅಷ್ಟೇ ಅಲ್ಲದೆ ಕಲೆವೊಮ್ಮೆ ನೀರು ಬಿಟ್ಟಾಗ ನಾಲೆಗೆ ಹರಿಯುವ ನೀರಿನ್ನು ಪಂಪ್ ಗಳ‌ ಮೂಲಕ ಬೇರೆಯವರು ಪಂಪ್ ಮಾಡುತ್ತಿದ್ದಾರೆ ಹಾಗಾಗಿ ನಮಗೆ ನೀರು ಸಿಗುತ್ತಿಲ್ಲ ಅಂತ ಅವಲತ್ತುಕೊಂಡರು. ಅಕ್ರಮ ಪೈಪ್ ಗಳನ್ನು ಕೂಡಲೇ ತೆಗೆಯಬೇಕು ಅಂತ ಮುಖ್ಯಮಂತ್ರಿಗಳ ಮುಂದೆ ಒತ್ತಾಯ ಮಾಡಿದರು. ಈ ನೀರು ನಮಗೆ ಸಿಗದೆ ಹೋದರೆ ನಮ್ಮ ಜಿಲ್ಲೆಗೆ ಬರದ ಛಾಯೆ ಆವರಿಸುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ತುಂಗಭದ್ರಾ ಎಡದಂಡೆ ನಾಲೆಯ ಮುಖ್ಯ ಕಾಲುವೆ ಮತ್ತು ಉಪ ಕಾಲುವೆ ವ್ಯಾಪ್ತಿಯಲ್ಲಿ ಅಂದಾಜು 2 ಲಕ್ಷ ಅಕ್ರಮ‌ ನೀರಾವರಿ ಆಗುವುದನ್ನು ತಡೆಗಟ್ಟಬೇಕು,ತುಂಗಭದ್ರಾ ಎಡದಂಡೆ ನಾಲೆ ವ್ಯಾಪ್ತಿಯಲ್ಲಿ ನೀರು ನಿರ್ವಹಣೆ ಮಾಡಲು 80 ಇಂಜಿನಿಯರ್ ಗಳ ಕೊರೆತೆ ಇದನ್ನು ಆದಷ್ಟು ಬೇಗ ತುಂಬಬೇಕು, ಅಕ್ರಮ ನೀರಾವರಿಗೆ ಅಳವಡಿಸದ ವಿದ್ಯುತ್ ಸಂಪರ್ಕ ವನ್ನು ಕಡಿತಗೊಳಿಸಬೇಕು, ಮಾನ್ವಿ ಮತ್ತು ರಾಯಚೂರು ತಾಲ್ಲೂಕಿನ 2 ಲಕ್ಷ 4೦ ಸಾವಿರ ಎಕರೆಗೆ ನೀರಿನ ಕೊರತೆ ನೀಗಿಸಲು ತಕ್ಷಣ ರಾಯಚೂರು ಜಿಲ್ಲೆ ಡಿಸಿ ಮತ್ತು ಎಸ್ ಪಿ ಹಾಗೂ ಕೊಪ್ಪಳ ಜಿಲ್ಲೆ ಡಿಸಿ ಮತ್ತು ಎಸ್ ಪಿಗಳಿಗೆ ನಿಗಾವಹಿಸಲು ನೇಮಿಸಬೇಕು ಎಂದು ಒತ್ತಾಯಿಸಿದರು.

ರೈತರ ಮನವಿಗೆ ಸ್ಪಂಧಿಸಿದ ಮುಖ್ಯಮಂತ್ರಿಗಳು ಕುಡಲೇ ನ್ಯಾಯಾವಾಗಿ ಯಾರಿಗೆ ‌ನೀರು ಸಿಗಬೇಕೋ ಅವರಿಗೆ ಸಿಗುವಂತೆ ಮಾಡಬೇಕು ಅಂತ ಅಧಿಕಾರಿಗಳಿಗೆ ತಾಕೀತು‌ ಮಾಡಿದರು ಅಷ್ಟೆ ಅಲ್ಲದೆ ಅಕ್ರಮ‌ ಪಂಪ್ ಸೆಟ್ ಗಳಿಗೆ ಅಳವಡಿಸಿರುವ ವಿದ್ಯುತ್ ಸಂಪರ್ಕ ಸ್ಥಗಿತ ಗೊಳಿಸಬೇಕು ಬೇಕಾದರೆ ಪೋಲೀಸ್ ಪ್ರೊಟೆಕ್ಷನ್ ತೆಗೆದುಕೊಂಡು ರೈತರಿಗೆ ನ್ಯಾಯವಾಗಿ‌ ನೀರು ಹರಿಸುವತ್ತ ಕೂಡಲೇ ಗಮನ ಹರಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇನ್ನು ಎರಡು ದಿನಗಳ ಒಳಗೆ ಎಲ್ಲಾ ಅಕ್ರಮ ಪಂಒ್ ಸೆಟ್ ಸಂಪರ್ಕವನ್ನು ಸ್ಥಗಿಗೊಳಿಸಿ ಕೂಡಲೇ ರಾಯಚೂರು ಜಿಲ್ಲೆಗೆ ನೀರು ಹರಿಸಬೇಕು ಮತ್ತು ತೆಗೆದುಕೊಂಡು ಕ್ರಮದ ವರದಿ ನೀಡಿ ಎಂದು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ರಾಜಾ ಅಮರೇಶ್ ನಾಯಕ್, ಕಾಲುವೆಯ ಮೇಲ್ಬಾಗದಲ್ಲಿ ಅಕ್ರಮವಾಗಿ ಪಂಪ್ ಹಾಕಿದ್ದರಿಂದ ನಾಲೆಯ ಕೆಳಭಾಗದಲ್ಲಿರುವ ನಮಗೆ ನೀರು ಸಿಗುತ್ತಿಲ್ಲ ,ಕೆಳಭಾಗದ ರೈತರಿಗೆ ನೀರು ಸಿಗಬೇಕು.ರೈತರಿಗೆ ಕಾನೂನು ಬದ್ದವಾಗಿ ನೀರು ಸಿಗುವಂತೆ ಮಾಡಲು ಮನವಿ ಮಾಡಿದ್ದು ಇದಕ್ಕೆ ಸಿಎಂ ಸ್ಪಂಧಿಸಿದ್ದಾರೆ. ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಇದರಿಂದಾಗಿ ರೈತರು ಸಮಾಧಾನಕ್ಕೆ ಬಂದಿದ್ದು ಅವರು ನೀರು ಕೊಡಿಸುವ ಭರವಸೆ ಇದೆ ಎಂದರು.

ಈ ಸಂದರ್ಭದಲ್ಲಿ ಆ ಭಾಗದ ರೈತ ಮುಖಂಡರುಗಳು ಹಾಗು ದೇವದುರ್ಗ ಶಾಸಕರಾದ ಶಿವನಗೌಡ ನಾಯಕ್ ರಾಯಚೂರು ನಗರ ಶಾಸಕ ಶಿವರಾಜ್ ಪಾಟೀಲ್ ಮಾನ್ವಿ ಶಾಸಕ ರಾಜ ವೆಂಕಟಪ್ಪ ನಾಯಕ್ ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್‌ ರಾಯಚೂರು ಗ್ರಾಮಾಂತರ ಶಾಸಕ ಬಸವನಗೌಡ ದದ್ದಲ್ ಸಿಂದನೂರು ಶಾಸಕ ನಾಡಗೌಡ ಉಪಸ್ಥಿತರಿದ್ದರುConclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.