ಬೆಂಗಳೂರು: ಬೆಂಗಳೂರಿನಿಂದ ನೇರವಾಗಿ ಆಫ್ರಿಕಾ ಖಂಡದ ಇಥಿಯೋಪಿಯಾಕ್ಕೆ ವಿಮಾನಯಾನ ಮಾಡಬಹುದು. ವಾರಕ್ಕೆ ನಾಲ್ಕು ದಿನ ಹಾರಾಡುವ ವಿಮಾನ ಅಕ್ಟೋಬರ್ 29 ರಿಂದ ಹಾರಾಟ ಶುರುಮಾಡಲಿದೆ.
ಈಗಾಗಲೆ ನಿನ್ನೆಯಿಂದ ಇಥಿಯೋಪಿಯಾದಿಂದ ಬೆಂಗಳೂರಿಗೆ ವಿಮಾನ ಹಾರಾಟ ಶುರುವಾಗಿದ್ದು, ಬೆಂಗಳೂರಿನಿಂದ ನಾಳೆ ವಿಮಾನ ಹಾರಾಟ ಪ್ರಾರಂಭವಾಗಲಿದೆ. ಅಕ್ಟೊಬರ್ 29ಕ್ಕೆ 109 ಸೀಟುಗಳು ಬುಕ್ ಆಗಿವೆ ಎಂದು ಇಥಿಯೋಪಿಯಾ ಏರ್ ಲೈನ್ಸ್ ಸಂಸ್ಥೆ ಖಚಿತಪಡಿಸಿದೆ.
ಮಂಗಳವಾರ, ಗುರುವಾರ, ಶನಿವಾರ ಹಾಗೂ ಭಾನುವಾರ ಬೆಂಗಳೂರಿನಿಂದ ಇಥೋಪಿಯಾದ ಅಡಿಸ್ ಅಬಾಬ ನಗರಕ್ಕೆ ವಿಮಾನ ಪ್ರಯಾಣಿಸಲಿದ್ದು, ಪಾಕಿಸ್ತಾನದ ಮೇಲೆ ಯಾವುದೇ ವಿಮಾನ ಹಾರಾಟ ಇರುವುದಿಲ್ಲ ಎಂದು ತಿಳಿಸಿದ್ದಾರೆ.
ಮಾರುಕಟ್ಟೆಯ ಬೆಲೆಗೆ ಹೋಲಿಸಿದರೆ ಇಥಿಯೋಪಿಯಾ ವಿಮಾನಯಾನದ ದರ ಶೇಕಡ 30 ರಷ್ಟು ಕಡಿಮೆ ಇದೆ. ಈಗ ಒಂದು ಟಿಕೆಟ್ಗೆ ಒಂದು ಟಿಕೆಟ್ ಉಚಿತವಾಗಿ ಪ್ರಾರಂಭಿಕ ಆಫರ್ ನಂತೆ ನೀಡುತ್ತಿದೆ. ಆದರೆ ಕೇವಲ ಟ್ಯಾಕ್ಸ್ ಮಾತ್ರ ಕಟ್ಟಬೇಕು. ನೈರೋಬಿ ಹಾಗೂ ಇನ್ನಿತರ ನಗರಕ್ಕೆ ಇಥಿಯೋಪಿಯಾ ಏರ್ ಲೈನ್ಸ್ ದರ 35,000 ಇದ್ದು, ಎಮಿರೈಟ್ಸ್ ಹಾಗೂ ಇನ್ನಿತರ ವಿಮಾನ ಸಂಸ್ಥೆಗಳು 60,000 ರೂಪಾಯಿ ದರದಲ್ಲಿ ಟಿಕೆಟ್ ಮಾರಾಟ ಮಾಡುತ್ತಿವೆ.