ETV Bharat / state

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಸತತ ನಾಲ್ಕು ಗಂಟೆಗಳಿಂದ ದಿನೇಶ್ ಕಲ್ಲಹಳ್ಳಿ ವಿಚಾರಣೆ - Dinesh Kallahalli

ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣ ಸಂಬಂಧ ಕಬ್ಬನ್‌ಪಾರ್ಕ್ ಠಾಣೆಗೆ ದೂರು ನೀಡಿದ್ದ ಸಾಮಾಜಿಕ‌ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರನ್ನು ಪೊಲೀಸರು ವಿಚಾರಣೆ ನಡೆಸಿ ಮಾಹಿತಿ ಪಡೆಯುತ್ತಿದ್ದಾರೆ.

Dinesh Kallahalli
ದಿನೇಶ್ ಕಲ್ಲಹಳ್ಳಿ
author img

By

Published : Mar 5, 2021, 5:30 PM IST

Updated : Mar 5, 2021, 7:13 PM IST

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗಿರುವ ಸಾಮಾಜಿಕ‌ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರನ್ನು ನಾಲ್ಕು ಗಂಟೆಗಳಿಂದ ಕಬ್ಬನ್‌ ಪಾರ್ಕ್ ಠಾಣೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ದಿನೇಶ್ ಕಲ್ಲಹಳ್ಳಿ ಹೇಳಿಕೆ

ಸಂತ್ರಸ್ತೆ ಯುವತಿಯ ಪರಿಚಯ ಹೇಗೆ, ಕುಟುಂಬಸ್ಥರು ಅಥವಾ ಸಂಬಂಧಿಕರೇ ನಿಜವಾಗಿಯೂ ಸಿಡಿ ನೀಡಿದ್ದಾರಾ. ಹೀಗೆ ಎಲ್ಲಾ ಆಯಾಮಗಳಲ್ಲಿ ಪೊಲೀಸ್‌ ಇನ್ಸ್​ಸ್ಪೆಕ್ಟರ್ ಮಾರುತಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಮದುವೆ ಇದೆ ಎಂದು ಭದ್ರತಾ ಸಿಬ್ಬಂದಿಗೆ ಹೇಳಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಕಲ್ಲಹಳ್ಳಿ ಬಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ‌. ಈಗಾಗಲೇ ಕೊಲೆ ಬೆದರಿಕೆ ಇರುವ ಕಾರಣ ಕನಕಪುರ ಗ್ರಾಮಾಂತರ ಠಾಣೆಗೆ ಅವರು ದೂರು ನೀಡಿದ್ದರು. ಇದರಂತೆ ಭದ್ರತೆ ನೀಡಲು ಸಹ‌ ರಾಮನಗರ ಪೊಲೀಸರು ಮುಂದಾಗಿದ್ದರು.

ಇದನ್ನೂ ಓದಿ: ಅಣ್ಣನನ್ನು ರಾಜಕೀಯವಾಗಿ ಮುಗಿಸಲು ನಕಲಿ ಸಿಡಿ ಬಳಕೆ‌: ಲಖನ್ ಜಾರಕಿಹೊಳಿ

Last Updated : Mar 5, 2021, 7:13 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.